ಸವಿತಾ ಸಮಾಜ ಕಾಯಕ ತತ್ವಕ್ಕೆ ಮಾದರಿ : ಕೃಷ್ಣಗೌಡ್ರ ಪಾಟೀಲ
ಗದಗ, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸವಿತಾ ಸಮಾಜವು ನೈಜ ಕಾಯಕ ವರ್ಗವಾಗಿದ್ದು, ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಿಕರಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ್ರ ಪಾಟೀಲರು ಅಭಿಪ್ರಾಯಪಟ್ಟರು. ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ಕ್ರಿಕೆಟ್ ಟೂರ್ನಾಮೆಂಟ್‌ಗೆ ಚಾಲನೆ
ಪೋಟೋ


ಗದಗ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸವಿತಾ ಸಮಾಜವು ನೈಜ ಕಾಯಕ ವರ್ಗವಾಗಿದ್ದು, ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಿಕರಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ್ರ ಪಾಟೀಲರು ಅಭಿಪ್ರಾಯಪಟ್ಟರು.

ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ಕ್ರಿಕೆಟ್ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, “ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ ತನ್ನ ವೃತ್ತಿ ಬಿಟ್ಟುಕೊಡಬಾರದು. ಯಾವುದೇ ವೃತ್ತಿ ಕೀಳಲ್ಲ. ಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದಲೇ ವೃತ್ತಿ ಶ್ರೇಷ್ಠವಾಗುತ್ತದೆ. ವೇದಗಳ ಕಾಲದಿಂದಲೇ ಸಮಾಜಕ್ಕೆ ಕ್ಷೌರ ಸೇವೆ ಸಲ್ಲಿಸುತ್ತಿರುವ ಸವಿತಾ ಸಮಾಜವು ಶ್ಲಾಘನೀಯವಾದ ಸೇವಾ ಪರಂಪರೆಯನ್ನು ಉಳಿಸಿಕೊಂಡಿದೆ” ಎಂದು ಶ್ಲಾಘಿಸಿದರು.

ಅವರು ಮುಂದುವರಿಸಿ, “ನೂರಾರು ವರ್ಷಗಳಿಂದ ಕಾಯಕದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಈ ಸಮುದಾಯವು ನಿಜವಾದ ಶ್ರಮಜೀವಿಗಳು. ಬದಲಾದ ದಿನಮಾನಗಳಲ್ಲಿ ಯುವಕರು ತಮ್ಮ ವೃತ್ತಿಗೆ ಆಧುನಿಕ ಸ್ಪರ್ಶ ನೀಡಿ ಆರ್ಥಿಕವಾಗಿ ಸದೃಢರಾಗಬೇಕು. ‘ನನ್ನ ವೃತ್ತಿ ನನಗೆ ಶ್ರೇಷ್ಠ’ ಎಂಬ ಮನೋಭಾವ ಪ್ರತಿಯೊಬ್ಬ ಯುವಕನಲ್ಲಿರಬೇಕು” ಎಂದು ಸಲಹೆ ನೀಡಿದರು.

ಇದೇ ವೇಳೆ ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ನೇತೃತ್ವದ ತಂಡದ ಸೇವಾ ಮನೋಭಾವವನ್ನು ಅವರು ಕೊಂಡಾಡಿದರು. “ಸಮಸ್ತ ಗದಗ ಜಿಲ್ಲೆಯ ಸವಿತಾ ಸಮಾಜದ ಅಭಿವೃದ್ಧಿಗಾಗಿ ಅನೇಕ ರೀತಿಯ ಸಭೆಗಳು, ಸಮಾರಂಭಗಳು ಆಯೋಜಿಸಿ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ. ಸಮಾಜ ಬಾಂಧವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ತಲುಪಿಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಇದು ಸಂತಸದ ಸಂಗತಿ” ಎಂದರು.

ಸಮಾಜದ ಅಭಿವೃದ್ಧಿ ಹಾಗೂ ಸೇವಾ ಚಟುವಟಿಕೆಗಳಿಗೆ ಅಗತ್ಯವಿರುವ ಅನುದಾನ ಮತ್ತು ಸೌಲಭ್ಯಗಳನ್ನು ಒದಗಿಸಲು ನಾನು ಹಾಗೂ ನನ್ನ ಹಿರಿಯರು ಸದಾ ಸಿದ್ಧರಾಗಿದ್ದೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಪಾಟೀಲರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ, ನಾಸೀರ ಮುಲ್ಲಾ, ಪರಶುರಾಮ (ಬಜ್ಜಣ್ಣ) ರಾಂಪೂರ, ಬಾಲರಾಜ ಕೊಟೇಕಲ್ಲ, ಅಬ್ದುಲಮುನಾಫ ಮುಲ್ಲಾ, ರಾಜು ಮಾನೆ, ದೀಪಕ ಮಾನೆ, ಪಾಂಡು ಕಾಳೆ, ವಿಕಾಸ ಕ್ಷೀರಸಾಗರ, ಸುಧೀರ್ ಮಾನೆ, ಪರಶುರಾಮ ಕೊಟೇಕಲ್ಲ, ಜಂಮ್ಮಣ್ಣ ಕಡಮೂರ, ರಮೇಶ ರಾಂಪೂರ, ಮಂಜುನಾಥ ಮಾನೆ, ತುಕಾರಾಮ ಮಾನೆ, ವಿಶಾಲ ಮಾನೆ, ಧಿನೇಶ ಕ್ಷೀರಸಾಗರ, ಹೇಮಂತ ವಡ್ಡೆಪಲ್ಲಿ, ಶ್ರೀನಿವಾಸ ಕೊಟೇಕಲ್ಲ, ಸುರೇಶ ಬುದೂರ, ಪರಶುರಾಮ ದಾವಣಗೇರಿ, ವಿಕ್ರಮ ಕ್ಷೀರಸಾಗರ, ಗಣೇಶ ಕಡಮೂರ, ಪ್ರಕಾಶ ಬುದೂರ, ಸುನೀಲ ರಾಯಚೂರ, ಕೃಷ್ಣಾ ಬುದೂರ, ವೆಂಕಟೇಶ ಕೊಟೇಕಲ್ಲ, ವಿಜಯ ಬುದೂರ, ತುಕಾರಾಮ ವಡ್ಡೆಪಲ್ಲೆ, ರಾಹೂಲ ಕೊಟೇಕಲ್ಲ, ಆದರ್ಶ ಮಾನೆ, ರಾಹೂಲ ಮೋಮ್ಮಗ, ವಿನಾಯಕ ರಾಯಚೂರ ಹಾಗೂ ಸಮಾಜದ ನೂರಾರು ಬಾಂಧವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande