ಅಕ್ಕಿ ಸಾಗಾಟ ಆರೋಪಿಗಳ ಬಂಧನ
ವಿಜಯಪುರ, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುವಾಗ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿಯಾಗಿ ದಾಳಿಗೈದಿರುವ ಘಟನೆ ವಿಜಯಪುರ ನಗರದ ವಿಜಯಾ ಟೈರ್ಸ್ ಬಳಿ ನಡೆದಿದೆ.‌ ಬೆಳಗಾವಿ ಜಿಲ್ಲೆಯ ನಿವಾಸಿಗಳಾದ ಗಜಾನನ ಭೀರಪ್ಪ ಮಕಾಳೆ, ಮಾ
ಅಕ್ಕಿ


ವಿಜಯಪುರ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುವಾಗ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿಯಾಗಿ ದಾಳಿಗೈದಿರುವ ಘಟನೆ ವಿಜಯಪುರ ನಗರದ ವಿಜಯಾ ಟೈರ್ಸ್ ಬಳಿ ನಡೆದಿದೆ.‌

ಬೆಳಗಾವಿ ಜಿಲ್ಲೆಯ ನಿವಾಸಿಗಳಾದ ಗಜಾನನ ಭೀರಪ್ಪ ಮಕಾಳೆ, ಮಾರುತಿ ದೊಡಮನಿ ಹಾಗೂ ಇಕ್ಬಾಲ್ ತಹಶಿಲ್ದಾರ ಆರೋಪಿಗಳು. ಇನ್ನು ಆರೋಪಿಗಳಿಂದ ಅಶೋಕ ಲೈಲಾಂಡ್ ಲಾರಿ, 1,426 ಕೆಜಿ ಅಕ್ಕಿ ಸೇರಿದಂತೆ 4,76,310 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಸ್‌ಐ ಸೀತಾರಾಮ ಲಮಾಣಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande