ರಾಯಚೂರು, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ವಿಭಾಗೀಯ ಡಾಕ್ ಅದಾಲತ್‌ನ್ನು ರಾಯಚೂರು ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಸೆ.29ರಂದು ಬೆಳಗ್ಗೆ 11 ಗಂಟೆಗೆ ನಗರದ ಕನಕದಾಸ ವೃತ್ತದ ಬಳಿಯಲ್ಲಿರುವ ಅಂಚೆ ಕಚೇರಿಗಳ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಸಾರ್ವಜನಿಕರು ಅಂಚೆ ಸೇವೆಗಳ ಬಗ್ಗೆ ತಮ್ಮ ದೂರುಗಳನ್ನು ಸೆ.26ರೊಳಗೆ, ಅಂಚೆ ಕಚೇರಿಗಳ ಅಧೀಕ್ಷಕರ ಕಾರ್ಯಾಲಯ, ರಾಯಚೂರು ವಿಭಾಗ – 584102 ಇಲ್ಲಿಗೆ ಸಲ್ಲಿಸಬೇಕು ಎಂದು ಅಂಚೆ ಅಧೀಕ್ಷಕರ ಕಚೇರಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್