ಗದಗ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗದ ಭಗತ್‌ಸಿಂಗ್ ಅಭಿಮಾನಿ ಬಳಗ ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವಿರುದ್ಧ ಕಿಡಿಕಾರಿದೆ. ಇವತ್ತೇ ನಡೆಯಲಿರುವ ಭಾರತ–ಪಾಕ್ ಕ್ರಿಕೆಟ್ ಪಂದ್ಯಾವಳಿಯನ್ನು ಯಾರೂ ನೋಡಬಾರದು ಎಂದು ಸಂಘಟನೆ ಮನವಿ ಮಾಡಿದೆ.
ಬಳಗದ ಕಾರ್ಯಕರ್ತರು ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, ಇತ್ತೀಚಿನ ಪೆಹಾಲ್ಗಾಮ್ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರನ್ನು ನೆನಪಿಸಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ. “ನಮ್ಮ ದೇಶದ ಜವಾನರು ರಕ್ತ ಹರಿದು ಪ್ರಾಣ ಬಲಿದಾನ ಮಾಡಿದರೂ, ಬಿಸಿಸಿಐ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವ ಧೈರ್ಯ ತೋರಿದೆ. ಇದು ನಮ್ಮ ಹುತಾತ್ಮರ ಬಲಿದಾನಕ್ಕೆ ಅವಮಾನ. ದೇಶದ ಭದ್ರತೆಗಿಂತಲೂ ವ್ಯಾಪಾರ, ಪ್ರಚಾರ, ಹಣದ ಆಟವೇ ಮುಖ್ಯವಾಯಿತೇ?” ಎಂದು ಪ್ರಶ್ನಿಸಿದ್ದಾರೆ.
ಅವರು ದೇಶಪ್ರೇಮದ ಮುಖವಾಡ ತೊಟ್ಟಿರುವ ರಾಜಕೀಯ ನಾಯಕರು, ಕ್ರೀಡಾ ನಿರ್ವಾಹಕರು, ಸಮಾಜದ ಹೊಣೆಗಾರಿಕೆ ಹೊಂದಿರುವ ಜನಪ್ರತಿನಿಧಿಗಳ ಮೌನವನ್ನು ಟೀಕಿಸಿದರು. “ನಮ್ಮ ಸೈನಿಕರ ತ್ಯಾಗಕ್ಕೆ ಬೆಲೆ ಇಲ್ಲವೇ? ನಮ್ಮ ದೇಶದ ಹುತಾತ್ಮರನ್ನು ಮರೆತು ಪಾಕಿಸ್ತಾನದ ಜೊತೆ ಪಂದ್ಯ ನಡೆಯಬೇಕೇ? ಇದು ದೇಶಪ್ರೇಮಕ್ಕೆ ಧಕ್ಕೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಗದ ಸದಸ್ಯರು ದೇಶದ ಜನತೆಯನ್ನು ಜಾಗೃತಗೊಳಿಸುತ್ತಾ, “ಹುತಾತ್ಮರ ನೆನಪಿಗಾಗಿ, ರಾಷ್ಟ್ರ ಭಕ್ತಿಗಾಗಿ ಈ ಪಂದ್ಯವನ್ನು ಬಹಿಷ್ಕರಿಸಬೇಕು. ಟಿವಿ ಮುಂದೆ ಕುಳಿತು ಕ್ರಿಕೆಟ್ ನೋಡುವುದಕ್ಕಿಂತ ನಮ್ಮ ಯೋಧರಿಗೆ ಗೌರವ ಸಲ್ಲಿಸೋಣ. ಪಾಕಿಸ್ತಾನದೊಂದಿಗೆ ಕ್ರೀಡೆ, ಸಂಭಾಷಣೆ, ವ್ಯವಹಾರ ಎಲ್ಲವೂ ನಿಲ್ಲಿಸಬೇಕು” ಎಂದು ಮನವಿ ಮಾಡಿದರು.
ಸಭೆಯಲ್ಲಿ “ಅಮರ ರಹೇ ವೀರ ಜವಾನ, ಜೈ ಜವಾನ ಜೈ ಕಿಸಾನ್” ಘೋಷಣೆಗಳು ಮೊಳಗಿದವು.
ಹಿಂದೂಸ್ತಾನ್ ಸಮಾಚಾರ್ / lalita MP