ಬೆಂಗಳೂರು, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ 3 ಪುರುಷ ಜನಪ್ರತಿನಿಧಿಗಳ ಪೈಕಿ ಒಬ್ಬರು ರಾಜಕೀಯ ಕುಟುಂಬದಿಂದ ಬಂದವರಾಗಿದ್ದಾರೆ. ಮಹಿಳಾ ಸದಸ್ಯರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದಾರೆ. ಇದು ಮಹಿಳೆಯರ ರಾಜಕೀಯ ಪ್ರವೇಶದಲ್ಲಿ ಕುಟುಂಬ ರಾಜಕಾರಣ ಮಹತ್ವದ ಪಾತ್ರ ವಹಿಸಬಹುದು ಎಂಬುದನ್ನು ಸೂಚಿಸುತ್ತದೆ. ಪುರುಷ ಸದಸ್ಯರಲ್ಲಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದವರ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಆದರೆ ಅವರ ಹೆಚ್ಚಿನ ಪ್ರಾತಿನಿಧ್ಯದ ಅನುಪಾತದ ದೃಷ್ಟಿಯಿಂದ ನೋಡಿದರೆ ಸಂಖ್ಯೆ ತುಂಬಾ ಹೆಚ್ಚಿದೆ.
ರಾಜಕೀಯ ಕುಟುಂಬಗಳಿಂದ : ಪ್ರಿಯಾಂಕಾ ಸತೀಶ್ ಜಾರಕಿಹೊಳಿ, ಡಾ.ಪ್ರಭಾ ಮಲ್ಲಿಕಾರ್ಜುನ್, ಮಂಜುಳಾ ಎಸ್, ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್, ಇ.ಅನ್ನಪೂರ್ಣ, ನಯನಾ ಮೋಟಮ್ಮ, ಕನೀಜ್ ಫಾತಿಮಾ, ರೂಪ ಕಲಾ ಮತ್ತು ಎಂ.ಲತಾ ಮಲ್ಲಿಕಾರ್ಜುನ್.
- ರಾಜ್ಯದ ಒಟ್ಟು 28 ಲೋಕ ಸಭಾ ಸದಸ್ಯರ ಪೈಕಿ 14 ಮಂದಿ ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರು.
- ರಾಜ್ಯ ಸಭೆಯಲ್ಲಿ ಕೇವಲ 2 ಸದಸ್ಯರು ಮಾತ್ರ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.
- ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿರುವ 14 ಮಂದಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ.
- ರಾಜ್ಯ ವಿಧಾನ ಸಭೆಯ 224 ಸದಸ್ಯರ ಪೈಕಿ 64 ಮಂದಿ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ