ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿ ಪಾತ್ರ ಮಹತ್ತರ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಬಳ್ಳಾರಿ, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಕ್ಕಳಲ್ಲಿ ಸಂಸ್ಕಾರ - ಸಂಸ್ಕøತಿ, ಧರ್ಮ ಮತ್ತು ಧಾರ್ಮಿಕ ವಿಷಯಗಳ ಕುರಿತು ಅರಿವು ಮೂಡಿಸುವ ಮಹತ್ತರವಾದ ಜವಾಬ್ದಾರಿಯು ತಾಯಂದಿರದ್ದು ಎಂದು ಜಗದ್ಗುರು ಕೊಟ್ಟೂರು ಬಸವಸಂಗನ ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಹಾನಗಲ್ಲ ಕುಮಾರ ಮಹಾಶಿವಯೋಗಿಗಳ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾದದ್ದು : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾದದ್ದು : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾದದ್ದು : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾದದ್ದು : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಬಳ್ಳಾರಿ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಕ್ಕಳಲ್ಲಿ ಸಂಸ್ಕಾರ - ಸಂಸ್ಕøತಿ, ಧರ್ಮ ಮತ್ತು ಧಾರ್ಮಿಕ ವಿಷಯಗಳ ಕುರಿತು ಅರಿವು ಮೂಡಿಸುವ ಮಹತ್ತರವಾದ ಜವಾಬ್ದಾರಿಯು ತಾಯಂದಿರದ್ದು ಎಂದು ಜಗದ್ಗುರು ಕೊಟ್ಟೂರು ಬಸವಸಂಗನ ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158ನೆಯ, ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 87ನೇ ಜಯಂತ್ಯೋತ್ಸವದ ಎರಡನೆಯ ದಿನವಾದ ಭಾನುವಾರ 1111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದ ಶ್ರೀಗಳು, ಬಾಲ್ಯದಲ್ಲಿಯೇ ಮಕ್ಕಳಲ್ಲಿ ಧರ್ಮ-ಸಂಸ್ಕಾರಗಳ ಕುರಿತು ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಶಾಂತಿ - ನೆಮ್ಮದಿಯನ್ನು ತರಬೇಕು ಎಂದು ಹೇಳಿದರು.

ಜಗತ್ತು ನಿರಂತರ ಬದಲಾಗುತ್ತಿದೆ. ಬದಲಾವಣೆ ಜಗತ್ತಿನ ನಿಯಮವಾಗಿದೆ. ಬದಲಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಎದುರಾಗುವ ಸವಾಲುಗಳನ್ನು - ಸಾಮಥ್ರ್ಯಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದ್ದವರಿಗೆ ಮಾತ್ರವೇ ಸಮಸ್ಯೆಗಳು - ಸವಾಲುಗಳು ಎದುರಾಗುತ್ತವೆ. ಪ್ರತಿಯೊಬ್ಬರೂ ಆಸೆಗಳನ್ನು - ಇತಿಮಿತಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಿರಂತರವಾದ ಜೀವನದಲ್ಲಿ ಪ್ರತಿಯೊಬ್ಬರೂ ಆಸೆ - ಬಯಕೆಗಳನ್ನು ಇತಿಮಿತಿಗಳಲ್ಲಿ ಇರಿಸಿಕೊಳ್ಳಬೇಕು ಎಂದರು.

ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು ಪ್ರಾಸ್ತಾವಿಕ ಭಾಷಣ ಮಾಡಿ, ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158ನೆಯ, ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 87ನೇ ಜಯಂತ್ಯೋತ್ಸವದದ ಮೂಲಕ ಈ ಮಹಾನೀಯರನ್ನು ಸ್ಮರಿಸುವುದು ಶ್ಲಾಘನೀಯ ಎಂದರು.

ಡಾ. ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಅವರು `ಮಕ್ಕಳ ಸಂಸ್ಕಾರದಲ್ಲಿ ತಾಯಂದಿರರ ಪಾತ್ರ' ವಿಷಯದ ಕುರಿತು ಉಪನ್ಯಾಸ ನೀಡಿ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಾಯಂದಿರರ ಪಾತ್ರವೇ ಮಹತ್ತರವಾದದ್ದು ಎನ್ನುವ ವಿಚಾರವನ್ನು ಅರ್ಥಪೂರ್ಣವಾಗಿ ತಿಳಿಸಿದರು.

ಮಾಜಿ ಮೇಯರ್ ಪಾರ್ವತಿ ಎಸ್. ಇಂದುಶೇಖರ್ ಅವರು ಮುತ್ತೈದೆ ಸ್ತ್ರೀಯ ಐದು ಗುಣಲಕ್ಷಣಗಳು ಮತ್ತು ಕುಂಕುಮ, ಹರಿಷಿಣ, ಬಳೆ, ತಾಳಿ, ಕಾಲುಂಗರ ಮತ್ತು ಮೂಗತಿಯ ಕುರಿತು ಹಾಗೂ ಜೋಳಿಗೆ ಹಿಡಿದು ನಾಡನ್ನು ಸುತ್ತಿ ಧರ್ಮ ಮತ್ತು ಸಂಘಟನೆಗಾಗಿ ಶ್ರಮಿಸಿದ ಹಾನಗಲ್ಲ ಕುಮಾರೇಶ್ವರ ಶ್ರೀಗಳು ಶ್ರಮಿಸಿದ್ದನ್ನು ಸ್ಮರಿಸಿದರು. ಎಸ್. ಸುರೇಖಾ ಮಲ್ಲನಗೌಡ ಅವರು, ಪ್ರಸಾದ ಮತ್ತು ಪ್ರಸಾದದ ಮಹತ್ವದ ಕುರಿತು ಮಾತನಾಡಿದರು.

ಸೋಮಸಮುದ್ರ ಸಿದ್ದಲಿಂಗ ಸ್ವಾಮಿಗಳು, ಸಿರಿಗೇರಿ - ಬೂದಗುಂಪ ಮಠದ ಸಿದ್ದೇಶ್ವರ ಸ್ವಾಮಿಗಳು, ಕುರುಗೋಡುನ ನಿರಂಜನಪ್ರಭು ಮಹಾಸ್ವಾಮಿಗಳು, ದರೂರುನ ಕೊಟ್ಟೂರು ಮಹಾಸ್ವಾಮಿಗಳು, ಸಂಗನಹಾಳದ ವಿಶ್ವೇಶ್ವರ ದೇವರು ಅವರಿ ಸಾನಿಧ್ಯವಹಿಸಿದ್ದರು.

ವೇದಿಕೆಯಲ್ಲಿ ಡಾ. ಭಾಗ್ಯಲಕ್ಷ್ಮಿ, ಕಾತ್ಯಾಯಿನಿ ಎಂ. ಮರಿದೇವಯ್ಯ, ಎಸ್. ಸುರೇಖಾ ಮಲ್ಲನಗೌಡ, ಪಲ್ಲೇದ ಮೈತ್ರಿ, ಡಾ. ರೇಣುಕ ಮಂಜುನಾಥ್, ಸುಮಾರೆಡ್ಡಿ, ಅವರು ವೇದಿಕೆಯಲ್ಲಿದ್ದರು.

ಡಾ. ಎಸ್.ಜೆ.ವಿ. ಮಹಿಪಾಲ್, ಬಿ.ವಿ. ಬಸವರಾಜ್, ಚೊಕ್ಕ ಬಸವನಗೌಡ, ಪಲ್ಲೇದ ಪೊಂಪಾಪತಿ, ದರೂರು ಪುರುಷೋತ್ತಮಗೌಡ, ಸಿರಿಗೇರಿ ಪನ್ನರಾಜ್, ಜಾನೆಕುಂಟೆ ಬಸವರಾಜ್, ಚಾನಾಳ್ ಶೇಖರ್, ನಂದೀಶ್ ಮಠಂ, ಬಿ. ಪಂಚಾಕ್ಷರಪ್ಪ, ಅಂದ್ರಾಳು ಚಿದಾನಂದಪ್ಪ, ಯ್ಯಾಳ್ಪಿ ಪೊಂಪನಗೌಡ,

ಪೌರೋಹಿತ್ಯವನ್ನು ವೇದಮೂರ್ತಿ ಈಶ್ವರಯ್ಯ ಶಾಸ್ತ್ರಿಗಳು ಮತ್ತು ವೇದಮೂರ್ತಿ ಚಂದ್ರಶೇಖರ ಶಾಸ್ತ್ರಿಗಳು ಮತ್ತು ತಂಡ ನೆರವೇರಿಸಿತು.

ಉಪನ್ಯಾಸಕಿ ಡಾ. ಭ್ರಮರಾಂಭ ಅವರು ಸ್ವಾಗತ ಕೋರಿದರು. ಮಧುಮತಿ ರಮೇಶ್ ಪಾಟೀಲ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ಈರಮ್ಮ ಅವರು ವಂದನಾರ್ಪಣೆ ಸಲ್ಲಿಸಿದರು. ಲೇಖಕಿ ಮಧುಮತಿ ರಮೇಶ್ ಪಾಟೀಲ್ ಅವರು ಬರೆದಿರುವ `ಮುಕ್ತಕ್ಕ ಕಾವ್ಯದಲ್ಲಿ ಹಂಡೆ ಅರಸ ಹನುಮಪ್ಪ ನಾಯಕ' ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande