ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ 95ನೇ ವಾರ್ಷಿಕ ಸಾಮಾನ್ಯ ಸಭೆ
ವಿಜಯಪುರ, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರದ ಪ್ರತಿಷ್ಠಿತ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೩೦,೭೫,೧೮೯ ರೂ. ನಿವ್ವಳ ಲಾಭಗಳಿಸುವ ಮೂಲಕ ಪ್ರಗತಿಯತ್ತ ದಾಪುಗಾಲು ಇರಿಸಿದೆ ಎಂದು ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಪ್ರಕಟಿಸಿದರು
ಸಭೆ


ವಿಜಯಪುರ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರದ ಪ್ರತಿಷ್ಠಿತ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೩೦,೭೫,೧೮೯ ರೂ. ನಿವ್ವಳ ಲಾಭಗಳಿಸುವ ಮೂಲಕ ಪ್ರಗತಿಯತ್ತ ದಾಪುಗಾಲು ಇರಿಸಿದೆ ಎಂದು ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಪ್ರಕಟಿಸಿದರು.

ವಿಜಯಪುರದ ಶ್ರೀ ಸಂಗನ ಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಶ್ರೀ ಮಹಾಲಕ್ಷೀ ಸಹಕಾರಿ ಬ್ಯಾಂಕ್ ೯೫ ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಪ್ರಗತಿಯನ್ನು ವಿಶ್ಲೇಷಿಸಿದ ಅವರು, ಬ್ಯಾಂಕ ದಿನದಿಂದ ದಿನಕ್ಕೆ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಸಿಬ್ಬಂದಿಯ ಕಾರ್ಯದಕ್ಷತೆ ಹಾಗೂ ಸದಸ್ಯರ ಸಹಕಾರವೇ ಕಾರಣ ಎಂದರು.

ಪ್ರಸ್ತಕ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಒಟ್ಟು ಲಾಭಾಂಶ ೪೬.೪೮ ಲಕ್ಷ ರೂ. ಇದ್ದು ಅದರಲ್ಲಿ ೯.೭೩ ಲಕ್ಷ ರೂ. ತೆರಿಗೆ ಪಾವತಿ ಮಾಡಲಾಗಿದ್ದು ಆ ಮೂಲಕ ೩೦,೭೫,೧೮೯ ರೂ. ನಿವ್ವಳ ಲಾಭ ಗಳಿಸಿದೆ, ಶೇ.೬ ರಷ್ಟು ಲಾಂಭಾಶ (ಡಿವಿಡೆಂಟ್) ಘೋಷಣೆ ಮಾಡಲಾಗಿದೆ ಎಂದರು.

ಒಟ್ಟು ೭೮೮೫ ಸದಸ್ಯರನ್ನು ಹೊಂದಿರುವ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮಾಸಾಂತ್ಯಕ್ಕೆ ೨೯೨.೬೦ ಲಕ್ಷ ರೂ. ಷೇರು ಬಂಡವಾಳ, ಪ್ರಸಕ್ತ ವರ್ಷ ಕಾಯ್ದಿಟ್ಟ ನಿಧಿಗಳ ಪ್ರಮಾಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ೩೩.೩೮ ಲಕ್ಷ ರೂ. ಹೆಚ್ಚಾಗಿದ್ದು ಪ್ರಸಕ್ತ ಆರ್ಥಿಕ ವರ್ಷಕ್ಕೆ ೪೬೨.೫೫ ಲಕ್ಷ ರೂ. ನಿಧಿ ಹೊಂದಿದ್ದು, ಪ್ರಸಕ್ತ ವರ್ಷದ ಮಾಸಾಂತ್ಯಕ್ಕೆ ೯೨೦೦.೧೯ ಲಕ್ಷ ರೂ. ಠೇವುಗಳನ್ನು ಹಿಹೊಂದಿದೆ ಎಂದರು. ಪ್ರಸಕ್ತ ವರ್ಷದ ಮಾಸಾಂತ್ಯಕ್ಕೆ ೪೯೮೩.೦೭ ಲಕ್ಷ ರೂ. ಸಾಲ ವಿತರಿಸಿದೆ, ಪ್ರತಿ ವರ್ಷಕ್ಕಿಂತ ಎನ್‌ಪಿಎ ಪ್ರಮಾಣ ಈ ವರ್ಷ ಶೇ.೧.೬೭ ರಷ್ಟು ಕಡಿಮೆಯಾಗಿರುವುದು ಸಂತೋಷದ ಸಂಗತಿ ಎಂದರು.

ಆರ್ಥಿಕ ಚಟುವಟಿಕೆಗಳ ಜೊತೆಗೆ ಅನೇಕ ರೀತಿಯಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿಯೂ ಮಹಾಲಕ್ಷ್ಮಿ ಬ್ಯಾಂಕ್ ತೊಡಗಿಸಿಕೊಂಡಿದೆ, ಗ್ರಾಹಕರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಸೇವೆ ಒದಗಿಸುವ ದೃಷ್ಟಿಯಿಂದ ಸಂಪೂರ್ಣ ಬ್ಯಾಂಕ್ ಗಣಕೀಕೃತಗೊಳಿಸಲಾಗಿದೆ ಎಂದು ವಿವರಿಸಿದರು.

*ಮೊಬೈಲ್ ಆ್ಯಪ್ ಸೇವೆಗೆ*

ಮೊಬೈಲ್ ಮೂಲಕವೇ ಗ್ರಾಹಕರು ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಮೊಬೈಲ್ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ವಾರ್ಷಿಕ ಮಹಾಸಭೆಯಲ್ಲಿ ಈ ತಂತ್ರಾಶದ ಸೇವೆಗೆ ವಿದ್ಯುಕ್ತ ಚಾಲನೆ ದೊರಕಿತು.

ಮಾಜಿ ನಿರ್ದೇಶಕರಾದ ಪ್ರಕಾಶ ಅಕ್ಕಲಕೋಟ, ಗೋವಿಂದ ಜೋಶಿ, ಉದ್ಯಮಿ ಉದಯ ಕುಲಕರ್ಣಿ, ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ವಿಕಾಸ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ಗೋವಿಂದ ಜೋಶಿ, ಶ್ಯಾಮಸುಂದರ ಕುಲಕರ್ಣಿ, ಪವನಕುಮಾರ ಕುಲಕರ್ಣಿ, ಬಸವರಾಜ ಪತ್ತಾರ, ಸಚಿನ್ ಮದ್ದಿನಮಠ, ಪವನ ಮುರಾಳ, ವಿಶ್ವನಾಥ ತಳವಾರ, ರಾಧಾ ತಾವರಗೇರಿ, ವೀಣಾ ಟಂಕಸಾಲಿ, ವೃತ್ತಪರ ನಿರ್ದೇಶಕರಾದ ಸಮೀರ ಕುಲಕರ್ಣಿ, ಅಶೋಕ ಉಪಾಧ್ಯಾಯ, ವ್ಯವಸ್ಥಾಪಕರಾದ ಶ್ರೀಮತಿ ಪಿ.ವಿ. ಕುಲಕರ್ಣಿ, ಕೆ.ಬಿ. ಸಂಗಮ ಮೊದಲಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande