ಬಳ್ಳಾರಿ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಒಂದೂವರೆ ತಿಂಗಳ ನವಜಾತ ಶಿಶುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲು ಜಿಲ್ಲಾ ಆಸ್ಪತ್ರೆಯಲ್ಲಿ ಪರದಾಡುತ್ತಿದ್ದ ತಾಯಿಯನ್ನು ವಂಚಿಸಿ ಮಗುವನ್ನು ಅಪಹರಣ ಮಾಡಿ ಮಕ್ಕಳಿಲ್ಲದ ತೋರಣಗಲ್ಲುನ ಪೋಷಕರಿಗೆ ಮಾರಾಟ ಮಾಡಿದ್ದ ಮೂವರು ಮತ್ತು ಮಗುವನ್ನು ಖರೀದಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಳ್ಳಾರಿ ನಗರದ ಕೌಲ್‍ಬಜಾರ್‍ನ ಜವಾರಿ ಬೀದಿ ನಿವಾಸಿಗಳಾದ ಶಮೀಮ್ @ ಶಮೀನ್ ಗಂಡ ಹೆಚ್.ಎಂ ಇಸ್ಮಾಯಿಲ್ ಸಾಬ್ (35), ಹೆಚ್.ಎಂ.ಇಸ್ಮಾಯಿಲ್ ಸಾಬ್ ತಂದೆ ಲೇಟ್ ಯಾಕೂಬ್ ಸಾಬ್ (65), ತೋರಣಗಲ್ಲುನ ಪಾಂಡುರಂಗ ಲೇಔಟ್ ನಿವಾಸಿ ಭಾಷ @ ಮೆಹಬೂಬ್ ಬಾಷ ತಂದೆ ಲೇಟ್ ಯೂಸೂಫ್ ಸಾಬ್ (55) ಮತ್ತು ತೋರಣಗಲ್ಲು ನಿವಾಸಿ ಬಸವರಾಜ ಮಹಾಂತಪ್ಪ ಸಜ್ಜನ್ (43) ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್