ಕೋಲಾರ, ೧೪ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ಕಳೆದ ವಾರ ಕೋಲಾರ ನಗರದಲ್ಲಿ ಉದ್ಯಾನವನಗಳಲ್ಲಿ ಸಂಚರಿಸಿದ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರ ಕೆ.ಜಿ.ಎಫ್. ನಗರಕ್ಕೆ ಭೇಟಿ ನೀಡಿ ಸೈಕಲ್‌ನಲ್ಲಿ ಸಂಚರಿಸಿದರು. ನಗರದ ಹಲವಾರು ಉದ್ಯಾನವನಗಳಿಗೆ ಸೈಕಲ್ ಮೂಲಕ ಜಾಥಾ ನಡೆಸಿ ಪರಿಶೀಲಿಸಿದರು. ಯಾವುದೇ ಒಂದು ಸರ್ಕಾರಿ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಮತ್ತು ಭಾಗವಹಿಸುವಿಕೆ ಪ್ರಮುಖವಾದ ಪಾತ್ರವಹಿಸಲಿದೆ ಆದ್ದರಿಂದ ಕೆಜಿಎಫ್ ನಗರವನ್ನು ಕ್ಲಿನ್ ಸಿಟಿ ಗ್ನೀನ್ ಸಿಟಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಎಂ,ಆರ್.ರವಿ ಹೇಳಿದರು.
ಸ್ವಚ್ಚ ಭಾರತ್ ಮಿಷನ್ ಯೋಜನೆಯನ್ನು ಸರ್ಮಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಗರದ ಸೂರಜ್ ಮಲ್ ವೃತ್ತ,ಗಾಂಧಿವೃತ್ತ ಪಿಚರ್ಡ್ ರಸ್ತೆ ,ಕಿಂಗ್ ಜಾರ್ಜಹಾಲ್ ,ಸುಭಾಷಚಂದ್ರಬೋಸ್ ಪಾರ್ಕ್ಗಳಿಗೆ ಸೈಕಲ್ ಜಾಥ್‌ವನ್ನು ಜಿಲ್ಲಾಡಳಿತ ಹಾಗೂ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿತ್ತು .
ಬೆಳ್ಳಗ್ಗೆ ೬ ಗಂಟೆಗೆ ಆಗಮಿಸಿದ ಕೋಲಾರ ಜಿಲ್ಲಾಧಿಕಾರಿ ಎಂಆರ್,ರವಿ ಸೂರಜ್ ಮಲ್ ವೃತ್ತದಲ್ಲಿ ಸೈಕಲ್ ಜಾಥ್‌ಗೆ ಚಾಲನೆ ನೀಡಿ ನಗರವನ್ನು ಪ್ರದಕ್ಷಿಣೆ ಹಾಕುವುದು ಅಲ್ಲದೆ ನಗರದಲ್ಲಿ ನಡೆದಿರುವ ಕ್ಲಿನ್ ಬಗ್ಗೆ ಹಾಗೂ ಸಿಸಿ ಕ್ಯಾಮೆರ್‌ಗಳ ಅಳವಡಿಕೆಗಳ ಬಗ್ಗೆ ಪರಿವೀಕ್ಷಣೆ ನಡೆಸಿದರು.
ಗೀತಾ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕಿಂಗ್ ಜಾರ್ಜಹಾಲ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಒಳಗಿನ ಪಾರ್ಕ್ನಲ್ಲಿ ಸರಿಯಾಗಿ ಸ್ಚಚ್ಚತೆ ಇಲ್ಲದ್ದನ್ನು ಕಂಡು ನಗರದ ಹೃದಯ ಭಾಗದಲ್ಲಿರುವ ಪಾರ್ಕ್ನ ಪರಿಸ್ಥಿತಿ ಇದೆಯೇ ನಗರಸಭೆ ವ್ಯಾಪ್ತಿಯ ಒಂದು ಪಾರ್ಕ್ ಸರ್ಮಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಪೌರಾಯುಕ್ತರು ಎಇಇ ಗಂಗಾಧರ್‌ರವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಒಂದು ವಾರದ ಒಳಗೆ ಪಾರ್ಕ್ನಲ್ಲಿರುವ ಕಸ ವನ್ನು ತೆಗೆದು ಹಾಕಬೇಕು ಪಾರ್ಕ್ನಲ್ಲಿರುವ ಗಿಡಗಳನ್ನು ಟ್ರೀಮ್ ಮಾಡಬೇಕು ಎಂದು ಸೂಚಿಸಿ ಪಾರ್ಕ್ನಲ್ಲಿರುವ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಲೋರ್ಕಾಪಣೆಗೊಳಿಸಬೇಕು ಎಂದು ಹೇಳಿ ಕಿಂಗ್ ಜಾರ್ಜಹಾಲ್ ಯಾರದ್ದು ಎಂದು ಮಾಹಿತಿಯನ್ನು ಕೇಳಿ ಕಿಂಗ್‌ಜಾರ್ಜಹಾಲ್ ಯಾರ ಹೆಸರಿನಲ್ಲಿ ಇದೆ ಎಂಬ ವಿಚಾರದಲ್ಲಿ ಯಾವುದಾದರು ಒಂದು ಸರ್ಕಾರಿ ಆದೇಶ ಇರಬೇಕು ಆಲ್ಲವೇ ಕ್ಲಬ್‌ನ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ಎಂದು ಹೇಳಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕಸವನ್ನು ಹಾಕಿದರೆ ಯಾವುದೇ ಮುಲಾಜು ಇಲ್ಲದೆ ದಂಡ ಹಾಕಿ ನಂತರವು ಕಸ ಹಾಕಲು ಮುಂದಾದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಮೂಲದಲ್ಲೇ ಕಸವನ್ನು ವಿಂಗಡಿಸಿ ಒಣ ಹಾಗೂ ಹಸಿ ಕಸವನ್ನು ನೀಡಬೇಕು ನಿಮ್ಮ ನಗರವನ್ನು ಸೌಂದರ್ಯಕರಣಗೊಳಿಸುವಲ್ಲಿ ನಗರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಕುವೆಂಪು ಬಸ್ ನಿಲ್ದಾಣದಲ್ಲಿ ಮಧ್ಯದಂಗಡಿಗಳು ಇರುವುದು ಕೆಜಿಎಫ್ ನಗರದಲ್ಲಿ ಮಾತ್ರ ರಾಜ್ಯದ ಯಾವುದೇ ನಗರಗಳಲ್ಲಿರುವ ಬಸ್ ನಿಲ್ದಾಣದಲ್ಲಿ ಮಧ್ಯದಂಗಡಿಗಳು ಇಲ್ಲ ಮದ್ಯದಂಗಡಿಗಳಲ್ಲಿ ಕೇವಲ ಮಧ್ಯವನ್ನು ಮಾರಾಟ ಮಾಡಬಹುದು ಆದರೆ ಅಂಗಡಿಗಳಲ್ಲಿ ಕುಡಿಯಲು ಅವಕಾಶವಿರುವುದಿಲ್ಲ ಇನ್ನು ಮುಂದೆ ಮದ್ಯವನ್ನು ಬಸ್ ನಿಲ್ದಾಣದಲ್ಲಿ ಕುಡಿಯುವುದು ಕಂಡು ಬಂದರೆ ಪೊಲೀಸರು ನನಗೆ ಮಾಹಿತಿ ನೀಡಬೇಕು ಕಾನೂನು ಉಲ್ಲಂಘಿಸಿರುವುದು ನನಗೆ ಕಂಡು ಬಂದರೆ ಅವರ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಹೇಳಿದರು.
ಇನ್ನು ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಮತ್ತು ದುಪ್ಪಟ್ಟು ಹಣವನ್ನು ವಸೂಲಿ ಮಾಡುವಂತಿಲ್ಲ ಶೌಚಾಲಯದಲ್ಲಿ ಕೆಲಸ ನಿರ್ವಹಿಸುವವರು ಶೌಚಾಲಯದಲ್ಲಿ ಉಳಿಯುವಂತಿಲ್ಲ ಇಲ್ಲಿನ ಲೋಪಗಳು ಮರುಕಳಿಸಿದರೆ ನಿಮಗೆ ನೀಡಲಾಗಿರುವ ಟೆಂಡರ್ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ನಗರಸಭೆಯ ಎಂ.ಜಿ,ಮಾರುಕಟ್ಟೆಯಲ್ಲಿರುವ ೧೨೧೦ ಮಳಿಗೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಂಗಡಿಯಿ0ದ ವಸೂಲಿಯಾಗುವ ಹಣವನ್ನು ಶೇ:೨೦ ರಷ್ಟು ಹಣವನ್ನು ಮಾರುಕಟ್ಟೆಯ ಅಭಿವೃದ್ಧಿಗೆ ವಿನಿಯೋಗಿಸಬೇಕು ಇಲ್ಲಿನ ಅಂಗಡಿ ಮಾಲಿಕರು ಸಹ ನಗರಸಭೆಯ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಸುಭಾಷ ಚಂದ್ರ ಬೋಸ್ ಪಾರ್ಕ್ ಅನ್ನು ಒಂದು ವಾರದಲ್ಲಿ ಅಭಿವೃದ್ದಿ ಪಡಿಸಬೇಕು ಪಾರ್ಕ್ನಲ್ಲಿರುವ ಗಣ್ಯರ ಪ್ರತಿಮೆಗಳಿಗೆ ಮೇಲ್ಚವಣಿಯನ್ನು ಹಾಕಿಸಬೇಕು ಮತ್ತು ಪಾರ್ಕ್ ನಿರ್ವಹಣೆಗೆ ಅಗತ್ಯವಾದ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಿಟಿ ರೌಂಡ್ಸ್ ವೇಳೆ ನಗರಸಭೆ ಪೌರಾಯುಕ್ತ ಅಂಜನೇಯಲು,ನಗರಸಭೆ ಅಧ್ಯಕ್ಷೆ ಇಂಧಿರಾ ಗಾ0ಧಿ ದಯಶ0ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ತಹಶೀಲ್ದಾರ್ ಭರತ್ ನಗರಸಭೆ ಸದಸ್ಯರಾದ ಮಾಣಿಕ್ಯಂ, ಪ್ರವೀಣ್, ಕರುಣಕರನ್ ಹಾಗೂ ನಗರಸಭೆ ಎಇಇ ಗಂಗಾಧರ್ ಹಾಜರಿದ್ದರು.
ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭಾನುವಾರ ಕೆಜಿಎಫ್ ನಗರದಲ್ಲಿ ಸೈಕಲ್ ಜಾಥಾ ಮೂಲಕ ಉದ್ಯಾನವನಗಳನ್ನು ವೀಕ್ಷಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್