ಕೋಲಾರ, ೧೪ ಸೆಪ್ಟಂಬರ್ (ಹಿ.ಸ) :
ಆ್ಯಂಕರ್ : ಬದುಕು ಅಸಹನೀಯವಾಗಿದೆ. ಗಂಡ ಹೆಂಡತಿಯರಾಗಿ ಬಾಳಲು ಸಾಧ್ಯವೇ ಇಲ್ಲ. ವಿಚ್ಚೇದನವೇ ಪರಿಹಾರ. ಕವಲು ದಾರಿಯಲ್ಲಿ ಬದುಕು ಸಾಗಿದೆ. ನನ್ನ ದಾರಿ ನನಗೆ. ಅವರ ದಾರಿ ಅವರಿಗೆ. ವಿಚ್ಚೇಧನ ನೀಡಿ ವೈವಾಹಿಕ ಜೀವನದಿಂದ ಮುಕ್ತಿಗೊಳಿಸಿ ಎಂದು ನ್ಯಾಯಲಕ್ಕೆ ಹೋದವರು ಮತ್ತೆ ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಬಾಳಿಗೆ ಪಾದಾರ್ಪಣೆ ಮಾಡಿದರು.ಹೂವಿನ ಹಾರ ಹಾಕಿ ಪರಸ್ಪರ ಸಿಹಿ ತಿನಿಸಿ ದಂಪತಿಗಳು ನ್ಯಾಯಾಲಯದಿಂದ ಹೊರ ನಡೆದರು. ವಿಚ್ಚೇಧನ ಕೋರಿ ಬಂದವರು ನಗುಮುಖದಿಂದ ಮನೆಗೆ ತೆರಳಿದರು.
ಇಪ್ಪಂತೊ0ದು ದಂಪತಿಗಳು ಹೊಸ ಬದುಕಿಗೆ ಕಾಲಿಟ್ಟರು. ಇಂತಹ ಅಪರೂಪದ ಕ್ಷಣಕ್ಕೆ ಕೋಲಾರದ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಯಿತು. ನ್ಯಾಯಾಲಯದಲ್ಲಿ ನೆರದಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ನ್ಯಾಯಾಧೀಶರು ವಕೀಲರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಮದುವೇ ಮನೆಯ ಸಂಭ್ರಮ ಮನೆ ಮಾಡಿತ್ತು. ವಿಚ್ಚೇಧನ ಕೋರಿ ಬಂದವರಿಗೆ ಕೌಟುಂಬಿಕ ನ್ಯಾಯಲಯದ ನ್ಯಾಯಮೂರ್ತಿ ರಾಮಲಿಂಗೇಗೌಡರು ಕೌಟುಂಬಿಕ ಮತ್ತು ದಾಂಪತ್ಯ ಜೀವನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ದೊಡ್ಡವರ ಸ್ಥಾನದಲ್ಲಿ ನಿಂತು ಇಬ್ಬರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದರು. ಅಪ್ಪ ಅಮ್ಮ ದೂರವಾದರೆ ಮಕ್ಕಳ ಮೇಲೆ ಬೀರುವ ಪರಿಣಾಮಗಳನ್ನು ದಂಪತಿಗಳಿಗೆ ವಿವರಿಸಿದರು. ಅಪ್ಪ ಅಮ್ಮನ ಪ್ರೀತಿ ಕಳೆದಕೊಳ್ಳುವ ಮಕ್ಕಳನ್ನು ಅನಾಥ ಪ್ರಜ್ನೆ ಕಾಡುತ್ತದೆ. ಬ್ಯಾಲದಲ್ಲಿ ಮಾತೃವಾತ್ಸಲ್ಯ ಅಗತ್ಯ ಎಂದು ನ್ಯಾಯಮೂರ್ತಿಗಳು ಬುದ್ದಿವಾದ ಹೇಳಿದರು.
ನ್ಯಾಯಮೂರ್ತಿಗಳು ಮತ್ತು ವಕೀಲರು ನಡೆಸಿದ ಸಂಧಾನದಿ0ದ ದಂತಿಗಳು ಕಹಿ ನೆನಪುಗಳನ್ನು ಮರೆತು ಹೊಸ ಜೀವನ ಆರಭಿಸಿದರು. ಇದೆಲ್ಲ ಸಾಧ್ಯವಾದದ್ದು ಕೋಲಾರದಲ್ಲಿ ಶನಿವಾರ ನಡೆದ ರಾಷ್ಟಿಯ ಲೋಕ ಅದಾಲತ್‌ನಲ್ಲಿ.ಅದೊಂದು ಕಾಲವಿತ್ತು ವಿಚ್ಚೇಧನ ಕೋರಿ ನ್ಯಾಯಾಲಯಕ್ಕೆ ಹೋದವರು ಮರಳಿ ದಂಪತಿಗಳಾಗಿ ಬರುವುದಿಲ್ಲ ಎಂಬ ಕಲ್ಪನೆ ಇತ್ತು .ನ್ಯಾಯಾಲಯಕ್ಕೆ ಹೋದವರ ಬಗ್ಗೆ ಸಮಾಜ ತಿರಸ್ಕಾರದ ಭಾವನೆಯಿಂದ ನೋಡುತ್ತಿತ್ತು.ವರ್ಷಗಳು ಕಳೆದರು ಪ್ರಕರಣಗಳು ಇತ್ಯರ್ಥವಾಗುತ್ತಿರಲಿಲ್ಲ. ವಿಚ್ಚೇಧನ ಕೋರಿ ನ್ಯಾಯಾಲಯಕ್ಕೆ ಹೋದವರು ಬದುಕಿನ ಭರವಸೆ ಕಳೆದುಕೊಳ್ಳತ್ತಿದ್ದರು. ಆದರೆ ಈಗ ನ್ಯಾಯಾಲದ ಕಾರ್ಯವೈಖರಿ ಬದಲಾಗಿದೆ.ನ್ಯಾಯಮೂರ್ತಿಗಳು ಕೇವಲ ಕಾನುನ್ನು ನೋಡುವುದಿಲ್ಲ.ಯಾಂತ್ರಿಕವಾಗಿ ಸಾಕ್ಷಾಧಾರಗಳ ಮೇಲೆ ತೀರ್ಪು ನೀಡುವ ಬದಲು ಮಾನವೀಯ ನೆಲೆಘಟ್ಟಿನಲ್ಲಿ ಕೌಟುಂಬಿಕ ಪ್ರಕರಣಗಳನ್ನು ನೋಡುತ್ತಾರೆ. ಇದರಿಂದಾಗಿಯೇ ವಿಚ್ಚೇಧನ ಕೋರಿ ನ್ಯಾಯಾಲಯಕ್ಕೆ ಬಂದವರು ಮನಸು ಪರಿವರ್ತನೆಯಾಗಿ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗಿದೆ.
ದಾಂಪತ್ಯ ಜೀವನವು ಭರವಸೆ, ಸಹನೆ, ಪ್ರೀತಿಯ ಸಂಕೇತವಾಗಿದೆ. ಆದರೆ ಜೀವನದ ಕಠಿಣ ಕ್ಷಣಗಳು, ಅಸಮಾಧಾನಗಳು, ತಪ್ಪು ತಿಳುವಳಿಕೆಗಳು ಮತ್ತು ಬದಲಾಗುತ್ತಿರುವ ಭಾವನೆಗಳು ಕೆಲವು ವೇಳೆ ಈ ಬಂಧವನ್ನು ವಿರಸದಲ್ಲಿ ಮುರಿಯುವ ಹಾದಿಗೆ ಕರೆದೊಯ್ಯುತ್ತವೆ. ಇಂತಹ ಹಲವಾರು ಪ್ರಕರಣಗಳು ಕೋಲಾರ ಕೌಟುಂಬಿಕ ನ್ಯಾಯಾಲಯದ ಮುಂದೆ ಬಂದಿದ್ದವು. ಅದು ಅಂತಿಮವಾಗಿ ನ್ಯಾಯಮೂರ್ತಿಗಳ ಮಾನವೀಯತೆಯ, ಬುದ್ದಿವಾದದಿಂದ ದಂಪತಿಗಳು ಮತ್ತೆ ಸಾಮರಸ್ಯ ಜೀವನಕ್ಕೆ ಮರಳಿದರು.
ಮೇಲ್ನೋಟಕ್ಕೆ ಇದು ಸಾಮಾನ್ಯ ವಿಚ್ಛೇದನ ಅರ್ಜಿಯಂತೆ ಕಂಡರೂ, ನ್ಯಾಯಮೂರ್ತಿಗಳ ಮಾನವೀಯತೆ ಮತ್ತು ಪ್ರೌಢಮೆಯಿಂದ ವಿಚ್ಚೇದನ ಅರ್ಜಿ ಸಲ್ಲಿಸಿದವರು ನಾವು ದಂಪತಿಗಳಾಗಿ ಕೌಟುಂಬಿಕ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ ಎಂದು ಪರಿವರ್ತನೆಯಾದರು. ಕಾನೂನು ಭಾಷೆ ಮತ್ತು ತರ್ಕವನ್ನು ಮೀರಿ, ಜೀವನದ ಸತ್ಯ, ಸಂಬ0ಧಗಳ ಮೌಲ್ಯ, ಮಕ್ಕಳ ಭವಿಷ್ಯ ಮತ್ತು ಸ್ನೇಹದ ಬಲದ ಕುರಿತು ನ್ಯಾಯ ಮೂರ್ತಿಗಳು ದಂಪತಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನೀವು ಇಬ್ಬರೂ ಸತ್ಯವಾಗಿ ಬೇರ್ಪಡಬೇಕೆಂದಿದ್ದರೆ, ಅಳುತ್ತಿರುವ ಕಣ್ಣುಗಳನ್ನು ನೋಡಿ ಕಳವಳವಾಗುವುದೇಕೆ? ಮಾತುಗಳು ವಿಷಾದವಾದಾಗ ಮೌನದಿಂದ ಬಾಳಬಹುದು. ಆದರೆ ಪ್ರೀತಿಯ ನೆನಪುಗಳೆಂದೂ ಮರೆತುಹೋಗುವುದೆ? ಈ ಮಾತುಗಳನುಂತರ ನ್ಯಾಯಮೂರ್ತಿ ಒಂದು ಮಹತ್ವದ ಸಲಹೆ ನೀಡಿದರು: ಇನ್ನೊಮ್ಮೆ ಯೋಚನೆ ಮಾಡಿ. ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ಮರೆತು ಜೀವನ ನಡೆಸಬೇಕು. ಅವರು ಮನವಿ ಮಾಡಿದ ಪ್ರಕಾರ, ದಂಪತಿಗಳು ತಮ್ಮ ಸಮಸ್ಯೆಗಳನ್ನು ಸಂದಾನದ ಮೂಲಕ ಚರ್ಚಿಸಲು ಒಪ್ಪಿಕೊಂಡರು. ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳ ಹಿಂದಿರುವ ದುಃಖ, ನಿರೀಕ್ಷೆಗಳು ಮತ್ತು ಮಾತಾಡದೇ ಉಳಿದ ಭಾವನೆಗಳನ್ನು ಹಂಚಿಕೊAಡರು.
ಅವರೆಲ್ಲರೂ ಪರಸ್ಪರ ಹೂವಿನ ಹಾರವನ್ನು ವಿನಿಮಯ ಮಾಡಿಕೊಂಡರು. ಆ ದೃಶ್ಯ ಅಲ್ಲಿದ್ದ ಪ್ರತಿಯೊಬ್ಬನ ಮನಸ್ಸಿಗೆ ಸ್ಪರ್ಶಿಸಿತು. ಕೇವಲ ಕಾನೂನು ಪ್ರಕ್ರಿಯೆಯಲ್ಲ, ಅದು ಜೀವನದ ನವಚೇತನಕ್ಕೆ ಸಾಕ್ಷಿಯಾಯಿತು. ಶನಿವಾರ ಕೌಟುಂಬಿಕ ನ್ಯಾಯಾಲಯದಲ್ಲಿ ಒಂದುಗೂಡಿದ ದಂಪತಿಗಳು ವಕೀಲರು ಸಂದಾನಕಾರರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ನೆರೆದಿದ್ದು, ನ್ಯಾಯಾಲಯ ದಿಬ್ಬಣದ ಮನೆಯಂತೆ ಸಂಭ್ರಮಿಸಿತು.
ಸ0ಬ0ಧಗಳು ಮುರಿಯುವುದಕ್ಕೂ ಮುನ್ನ ಮಾತಾಡಬೇಕು. ಪ್ರೀತಿಯ ನೆನಪುಗಳು ಮತ್ತೆ ಸೇರಿಸಲು ಪ್ರೇರಣೆಯಾಗಬಹುದು. ನ್ಯಾಯಮೂರ್ತಿಗಳ ಮಾನವೀಯ ದೃಷ್ಟಿಕೋನ ಸಾಮಾಜಿಕ ಬದಲಾವಣೆ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯಿತು. ಇದು ಕೇವಲ ವಿಚ್ಛೇದನ ತಪ್ಪಿದ ಘಟನೆಯಲ್ಲ; ಇದು ಬುದ್ದಿವಾದ, ಸಂವಾದ ಮತ್ತು ಪ್ರೀತಿಯ ಮನವರಿಕೆಯ ಕಥನವಾಗಿದೆ. ದಾಂಪತ್ಯವೆAದರೆ ತಪ್ಪಿಲ್ಲದ ಸಂಬ0ಧವಲ್ಲ, ತಪ್ಪಿನಲ್ಲಿಯೂ ಒಪ್ಪಿಕೊಳ್ಳುವ ಮನಸ್ಸು ಎಂಬುದು ದಂಪತಿಗಳಿಗೆ ಅರಿವಾಯಿತು
ಕೌಟುಂಬಿಕ ಪ್ರಕರಣಗಳಲ್ಲಿ ವಿಚಾರಣೆ ಮಂಡಿಸುವ ಮೊದಲು ನ್ಯಾಯಾಧೀಶರು ಪರಸ್ಪರ ದಂಪತಿಗಳೊAದಿಗೆ ಕೊಠಡಿಯಲ್ಲಿ ಸಮಾಲೋಚನೆ ನಡೆಸುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ವಿಚ್ಚೇದನ ಬದಲು ಪರಸ್ಪರ ಅರಿತು ಬಾಳಬೇಕು. ಕುಟುಂಬ ಎಂದರೆ ದಂಪತಿಗಳ ನಡುವೆ ಬಿನ್ನಾಭಿಪ್ರಾಯಗಳು ಬರುವುದು ಸಹಜ. ಬಿನ್ನಾಭಿಪ್ರಾಯಗಳನ್ನು ತೊರೆದ ಸಾಮರಸ್ಯದಿಂದ ಬದುಕಬಹುದು ಎಂದು ಮನವರಿಕೆ ಮಾಡಿಕೊಡುತ್ತಾರೆ. ಹಿಂದಿನ0ತೆ ಕೌಟುಂಬಿಕ ಕಲಹಗಳ ವ್ಯಾಜ್ಯಗಳು ವರ್ಷಗಟ್ಟಲೆ ನಡೆಯುವುದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ರಾಷ್ಟೀಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲದ ನ್ಯಾಯಾಧೀಶರು ಸಮಾಲೋಚನೆ ನಡೆಸುತ್ತಾರೆ. ಸಮಾಲೋಚನೆಯಿಂದಾಗಿ ಜಡ್ಡುಗಟ್ಟಿದ ಮನಸ್ಸುಗಳು ಸಡಿಲವಾಗುತ್ತವೆ. ಮರು ಹೊಂದಾಣಿಕೆಯಿAದ ದಂಪತಿಗಳು ಒಂದುಗೂಡಿ ನಿರಾಳವಾಗಿ ತೆರಳುತ್ತಾರೆ. ಅವರ ನಡುವಿನ ಮನಸ್ತಾಪಗಳು ಲೊಕ ಅದಾಲತ್‌ನಲ್ಲಿ ಮಂಜಿನAತೆ ಕರಗುತ್ತವೆ. ಬಿರುಕುಬಿಟ್ಟ ಮನಸ್ಸುಗಳನ್ನು ಒಂದುಗೂಡಿಸುತ್ತಿರುವುದು ರಾಷ್ಟಿçÃಯ ಲೋಕ ಅದಾಲತ್ ದೊಡ್ಡ ಸಾಧನೆಯಾಗಿದೆ. ಎಲ್ಲವನ್ನೂ ಕಾನೂನಿನ ಅಡಿಯಲ್ಲಿ ನೋಡದೆ, ಮಾನವೀಯ ಅಂತಃಕರಣ ಮತ್ತು ಕೌಟುಂಬಿಕ ನೆಲೆಗಟ್ಟಿನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಇದರಿಂದಲೇ ವಿಚ್ಚೇದನ ಕೋರಿ ಬಂದವರು ನಾವು ದಂಪತಿಗಳಾಗಿ ಬದುಕು ನಡೆಸುತ್ತೇವೆ ಎಂದು ಪರಿವರ್ತನೆಯಾಗುತ್ತಾರೆ.
ರೈತರು ಸಾಲಪಡೆದು ತೀರಿಸಲಾಗದೆ ಹೈರಾಣ ಆಗುತ್ತಾರೆ.ಬಡ್ಡಿಗೆ ಬಡ್ಡಿ ಬೆಳೆದು ರೈತರು ಋಣಮುಕ್ತರಾಗಲು ಹೆಣಗಾಡುತ್ತಾರೆ.ಆದರೆ ಪ್ರತಿ ತಿಂಗಳು ನಡೆಯುವ ಲೋಕ ಅದಾಲತ್‌ನಲ್ಲಿ ನ್ಯಾಯಾಧಿಶರು ಬ್ಯಾಂಕ್ ಅಧಿಕಾರಿಗಳು ಸಂಧಾನ ನಡೆಸಿ ಸಾಲದ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾರೆ.ಪ್ರತಿ ಲೋಕ ಅದಾಲತ್‌ನಲ್ಲಿ ನೂರಾರು ಮಂದಿ ರೈತರು ಋಣಮುಕ್ತರಾಗುತ್ತಾರೆ.ರಾಷ್ಟಿçÃಕೃತ ಬ್ಯಾಂಕುಗಳು ಧಾರಾಳವಾಗಿ ಸಾಲದ ಮೊತ್ತದಲ್ಲಿ ತೀರುವಳಿ ಮಾಡುತ್ತಾರೆ. ಕೋಲಾರ ಜಿಲ್ಲೆಯಾದ್ಯಂತ್ಯ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು ಎಪ್ಪೆಂಟು ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಸಿವಿಲ್ ,ಕ್ರಿಮಿನಲ್ ಮೋಟಾರು ವಾಹನದ ಪ್ರಕರಣಗಳನ್ನು ಇತ್ಯರ್ಥಪಡಿಸಿ ಮೂವತ್ತು ಮೂರು ಕೋಟಿ ರೂಪಾಯಿ ಪರಿಹಾರ ಕಲ್ಪಿಸಲಾಯಿತು. ಕೋಲಾರ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾಯಾಧೀಶರಾದ ಜಿ.ಎ. ಮಂಜುನಾಥ್, ಹೆಚ್ಚುವರಿ ಒಂದನೇ ಸೆಷನ್ಸ್ ನ್ಯಾಯಾಧೀಶರಾದ ಜಯಶ್ರೀ, ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮುಂತಾದವರು ಲೋಕ ಅದಾಲತ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಕರಣಗಳನ್ನು ಸಂದಾನದ ಮೂಲಕ ಇತ್ಯರ್ಥಪಡಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಚಿತ್ರ : ಕೋಲಾರ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಚೇತನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳು ಪುನರ್ ಮಿಲನವಾಗಿ ಪರಸ್ಪರ ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಂಡು ಹೊಸ ಬದುಕು ಆರಂಭಿಸಿದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಮುರ್ತಿ ರಾಮಲಿಂಗೇಗೌಡ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಮುನೇಗೌಡ ಚಿತ್ರದಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್