ರಸಾಯನಭರಿತ ಆಹಾರದಿಂದ ಮಧ್ಯೆ ವಯಸ್ಸಿನಲ್ಲೇ ಹಲವಾರು ರೋಗ
ಬಳ್ಳಾರಿ, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಭವಿಷ್ಯದ ಆಹಾರಗಳು ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಸೆ.11 ರಿಂದ ಎರಡು ದಿನಗಳ ಕಾಲ ಕೃಷಿ ವಿಜ್ಞಾನಗಳ ವಿಶ್ವವ
ರಸಾಯನಭರಿತ ಆಹಾರದಿಂದ ಮಧ್ಯೆ ವಯಸ್ಸಿನಲ್ಲೇ ಹಲವಾರು ರೋಗ


ಬಳ್ಳಾರಿ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಭವಿಷ್ಯದ ಆಹಾರಗಳು ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಸೆ.11 ರಿಂದ ಎರಡು ದಿನಗಳ ಕಾಲ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಅಶೋಕ್ ದಳವಾಯಿ ಅವರು ಮಾತನಾಡಿ, ಬದಲಾಗುತ್ತಿರುವ ಆಹಾರ ಪದ್ಧತಿಗಳಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ ಭವಿಷ್ಯತ್ತಿಗಾಗಿ ಶೇಖರಣೆ ಮಾಡಿ ಇಡುವುದು ಕೂಡ ಬಹುಮುಖ್ಯವಾಗಿದೆ ಎಂದು ಹೇಳಿದರು.

ಈಗಿನ ಕಾಲದಲ್ಲಿ ಆಹಾರ ಪದ್ಧತಿಯಲ್ಲಿರುವ ಅಪೌಷ್ಟಿಕತೆ ಹಾಗೂ ರಾಸಾಯನ ಭರಿತ ಆಹಾರಗಳಿಂದಾಗಿ ಹಲವು ರೋಗಗಳು ಮಧ್ಯವಯಸ್ಸಿನಲ್ಲಿಯೇ ಬರುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಆಹಾರದ ಬೇಡಿಕೆಗಳನ್ನು ಪೂರೈಸಲು ಪರ್ಯಾಯ ಆಹಾರಗಳ ಮೂಲಗಳನ್ನು ಮತ್ತು ಸುಸ್ಥಿರ ತಂತ್ರಜ್ಞಾನವನ್ನು ಬಳಸಿಕೊಂಡು ಪೌಷ್ಟಿಕಾಂಶ ಭದ್ರತೆ ಹೆಚ್ಚಿಸಬೇಕು. ಆಹಾರ ಧಾನ್ಯಗಳ ಉತ್ಪತ್ತಿಯನ್ನು ಮತ್ತು ಶೇಖರಣ ಪದ್ಧತಿಗಳನ್ನು ತಕ್ಕಮಟ್ಟಿಗೆ ಸುಧಾರಣೆ ಮಾಡಬೇಕು. ಭಾರತದ ಬೆನ್ನೆಲುಬಾಗಿರುವ ಎಲ್ಲಾ ರೀತಿಯ ಆಹಾರ ಉತ್ಪಾದನೆ ಮಾಡುವ ರೈತರಿಗೆ ಸಮತಟ್ಟಾದ ಪರಿಹಾರವನ್ನು ಸಂಬ0ಧ ಪಟ್ಟ ಇಲಾಖೆಗಳು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯು ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

ಪೌಷ್ಟಿಕ ಆಹಾರದ ಪ್ರಾಮುಖ್ಯತೆ, ಸಮತೋಲನ ಆಹಾರ ಪದ್ಧತಿ, ಭವಿಷ್ಯತ್ತಿನ ಆಹಾರಗಳ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಎಣ್ಣೆ ಬೀಜಗಳ ಉತ್ಪಾದನೆ, ಸಸ್ಯಹಾರ ಪದ್ಧತಿಗಳ ಬಗ್ಗೆ ಹಾಗೂ ಇನ್ನು ಹಲವು ನೈಸರ್ಗಿಕ ಆಹಾರ ಪದ್ಧತಿಗಳ ಬಗ್ಗೆ ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೌರವಾನ್ವಿತ ಕುಲಪತಿಗಳಾದ ಡಾ.ಎಂ ಹನುಮಂತಪ್ಪ ಅವರು ಮಾತನಾಡಿ, ಆರ್ಥಿಕವಾಗಿ ಲಾಭದಾಯಕವಾದ ಆಹಾರ ಪದ್ಧತಿಗಳು ಮತ್ತು ಸಾಮಾಜಿಕವಾಗಿ ಸ್ವೀಕೃತವಾದ ಆಹಾರಗಳು ನಮ್ಮ ಭವಿಷ್ಯದ ಬಹುಮುಖ್ಯ ಆಹಾರಗಳಾಗಿವೆ.

ಭವಿಷ್ಯತ್ತಿನಲ್ಲಿ ಆಹಾರ ಪದಾರ್ಥಗಳನ್ನು ಉತ್ಪಾದಿಸಲು ಹೈಡ್ರೋಫೋನಿಕ್ಸ್, ಏರೋಫೋನಿಕ್ಸ್ ನಂತಹ ಸುಧಾರಿತ ನವೀನ ತಂತ್ರಜ್ಞಾನಗಳನ್ನು ರೈತರು ಅಳವಡಿಕೆ ಮಾಡಿಕೊಳ್ಳಬೇಕು ಹಾಗೂ ಸೆಕೆಂಡರಿ ಅಗ್ರಿಕಲ್ಚರ್ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿನ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ ವಿಷಯಗಳನ್ನು ಕೃಷಿ ಕ್ಷೇತ್ರದಲ್ಲಿ ಬಳಸಿಕೊಂಡು ನಿಖರ ಕೃಷಿ ಮಾಡುವುದರ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ಸದಸ್ಯರಾದ ಬಸನಗೌಡ ಬ್ಯಾಗವಾಟ್, ಮಲ್ಲಿಕಾರ್ಜುನ ಡಿ., ಮಲ್ಲೇಶ್ ಕೊಲುಮಿ, ಕುಲ ಸಚಿವರಾದ ಶರಣಬಸಪ್ಪ ಕೋಟೆಪ್ಪಗೋಳ್, ಆಡಳಿತ ಅಧಿಕಾರಿಗಳಾದ ಡಾ.ಜಾಗೃತಿ ದೇಶಮಾನ್ಯ, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಮತ್ತು ಸಮ್ಮೇಳನದ ಸಂಚಾಲಕರಾದ ಡಾ.ಮಲ್ಲಿಕಾರ್ಜುನ ಎಸ್ ಅಯ್ಯನಗೌಡ, ಉಪ ಸಂಘಟನಾ ಕಾರ್ಯದರ್ಶಿಗಳಾದ ಡಾ.ಉದಯ್ ಕುಮಾರ್ ನಿಡೋನಿ ಉಪಸ್ಥಿತರಿದ್ದರು.

ಜಂಕ್ ಆಹಾರವನ್ನು ಸಿರಿಧಾನ್ಯಗಳಿಂದ ಪೌಷ್ಠಿಕರೀಸಿ: ಮೊದಲ ದಿನ ಸಮಾರಂಭವನ್ನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ.ಹನುಮಂತಪ್ಪ ಎಂ. ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಂಜಾವೂರಿನ ರಾಷ್ಟ್ರ ಮಟ್ಟದ ಎನ್‌ಐಎಫ್‌ಟಿಇಎಂ ಸಂಸ್ಥೆ ನಿರ್ದೇಶಕರಾದ ಪ್ರೊ.ವಿ.ಪಳನಿಮುತ್ತು ಅವರು ಭಾಗವಹಿಸಿ ಆಹಾರ ಪದ್ಧತಿಯಲ್ಲಿ ಕಾಲಕ್ರಮೇಣ ಆಗುತ್ತಿರುವ ಬದಲಾವಣೆಗಳನ್ನು ವಿವರಿಸಿದರು. ಇಂದಿನ ಪೀಳಿಗೆ ತಿನ್ನುವ ಜಂಕ್ ಆಹಾರಗಳನ್ನು ಸಿರಿಧಾನ್ಯಗಳಿಂದ ಪೌಷ್ಠಿಕರೀಸಿ ಮಾರ್ಪಾಡು ಮಾಡಿ ಕೊಡಬೇಕು ಅತೀ ಜರೂರು ಇದೆ ಎಂದು ಸಲಹೆ ಮಾಡಿದರು.

159 ವೈಜ್ಞಾನಿಕ ಲೇಖನಗಳ ಮಂಡನೆ: ಮೂರು ತಾಂತ್ರಿಕ ವಿಭಾಗಗಳಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ನಡೆಯಿತು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ 159 ಜನರು ಮೌಕಿಕ ಮತ್ತು ಪೋಸ್ಟರ್ ಪ್ರಸ್ತುತಿಯಲ್ಲಿ ವೈಜ್ಞಾನಿಕ ಲೇಖನಗಳನ್ನು ಮಂಡಿಸಿದರು. ಪ್ರತಿ ತಾಂತ್ರಿಕ ವಿಭಾಗದಿಂದ ಆಯ್ದ ವೈಜ್ಞಾನಿಕ ವಿಷಯಗಳ ಮಂಡನೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹೆಸರಾಂತ ವಿಜ್ಞಾನಿಗಳಾದ ಡಾ.ಚೇತನ್ ಹಂಚಾಟಿ ಅವರು ನವೀನ ಆಹಾರ ಉತ್ಪಾದನೆ ಮತ್ತು ಮೌಲ್ಯವರ್ಧನೆ ಬಗ್ಗೆ, ಡಾಕ್ಟರ್ ಡಿ.ವಿ. ಚಿದಾನಂದ ಅವರು ಸೂಕ್ಷ್ಮ ಉದ್ಯಮಿಗಳಿಗೆ ಲಭ್ಯವಿರುವ ತಂತ್ರಜ್ಞಾನಗಳ ಬಗ್ಗೆ, ಡಾಕ್ಟರ್ ರಾಮಚಂದ್ರ ಸಿಟಿ ಅವರು ಆಹಾರ ಉದ್ಯಮದಲ್ಲಿ ಅವಕಾಶಗಳು ಮತ್ತು ಸವಾಲುಗಳು ವಿಷಯದ ಬಗ್ಗೆ, ಡಾ.ದಯಾನಂದ ಕುಮಾರ್ ಅವರು ಮೆಗಾ ಫುಡ್ ಪಾರ್ಕ್ ವಲಯದ ಬಗ್ಗೆ, ಡಾ.ಸತ್ತೇನ್ ಯಾದವ್ ಅವರು ಸಿರಿಧಾನ್ಯಗಳ ದಶಕದ ಬಗ್ಗೆ ಹಾಗೂ ಡಾ.ಜಗನ್ನಾಥ್ ಜೆ ಅವರು ಆಹಾರ ಉದ್ಯಮದಲ್ಲಿ ಗುಣಮಟ್ಟದ ಭರವಸೆ ಎಂಬ ವಿಷಯಗಳ ಬಗ್ಗೆ ಮಂಡನೆ ಮಾಡಿದರು.

ವಿಸ್ಕೃತ ವರದಿ ಮಂಡನೆ: ಎರಡು ದಿನಗಳ ಕಾರ್ಯಕ್ರಮದ ವಿಸ್ಕೃತ ವರದಿಯನ್ನು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಶರಣಗೌಡ ಹಿರೇಗೌಡರ್ ಅವರು ಮಂಡಿಸಿದರು. ಡಾ.ರಾಮಪ್ಪ ಕೆ.ಟಿ. ಅವರು ವಂದಿಸಿದರು. ಡಾ.ಹೇಮಲತಾ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande