ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಏಷ್ಯಾ ಕಪ್‌ನ ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಲಿವೆ. ಪಂದ್ಯವು ರಾತ್ರಿ 8 ಗಂಟೆಗೆ (ಭಾರತೀಯ ಸಮಯ) ದುಬೈ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.
ಭಾರತ-ಪಾಕಿಸ್ತಾನ ನಡುವಿನ ಸ್ಪರ್ಧೆ ಸದಾ ಕ್ರಿಕೆಟ್ ಲೋಕದ ಗಮನ ಸೆಳೆಯುತ್ತದೆ. ಇತ್ತಿಚಿನ ಅಂಕಿಅಂಶಗಳ ಪ್ರಕಾರ, ಟಿ-20 ಫಾರ್ಮ್ಯಾಟ್‌ನಲ್ಲಿ ಇರುವುದು 13 ಪಂದ್ಯಗಳು, ಇದರಲ್ಲಿ ಭಾರತ 9-3 ಅಂತರದಿಂದ ಮುನ್ನಡೆ ಸಾಧಿಸಿದೆ.
ತಂಡಗಳ ಪಟ್ಟಿ:
ಭಾರತ (ಕ್ಯಾಪ್ಟನ್: ಸೂರ್ಯಕುಮಾರ್ ಯಾದವ್)
ಉಪನಾಯಕ: ಶುಭಮನ್ ಗಿಲ್
ಆಟಗಾರರು: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಚಕ್ರವರ್ತಿ, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಪಾಕಿಸ್ತಾನ (ಕ್ಯಾಪ್ಟನ್: ಸಲ್ಮಾನ್ ಆಗಾ)
ಆಟಗಾರರು: ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ, ಹರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೈನ್ ತಲಾತ್, ಖುಶ್ದಿಲ್ ಶಾಹ್, ಮೊಹಮ್ಮದ್ ಹರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್, ಸಾಹಿಬಜಾದ ಫರಹಾನ್, ಸಯೀಮ್ ಆಯುಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾಹ್ ಅಫ್ರಿದಿ, ಸುಫಿಯಾನ್ ಮೊಕಿಂ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa