ನೇಪಾಳ ಮೊದಲ ಮಹಿಳಾ ಪ್ರಧಾನಿಯಾಗಿ ಸುಶೀಲಾ ಕರ್ಕಿ
ಕಠ್ಮಂಡು, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ದೇಶದ 42ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರು ನೇಪಾಳದ ಮೊದಲ ಮಹಿಳಾ ಪ್ರಧಾನಮಂತ್ರಿ ಮತ್ತು ಕಾರ್ಯ ನಿರ್ವಾಹಕ ಮುಖ್ಯಸ್ಥರಾಗಿದ್ದಾರೆ. ಶುಕ್ರವಾರ ತಡರ
Nepal pm


ಕಠ್ಮಂಡು, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ದೇಶದ 42ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದ್ದಾರೆ.

ಅವರು ನೇಪಾಳದ ಮೊದಲ ಮಹಿಳಾ ಪ್ರಧಾನಮಂತ್ರಿ ಮತ್ತು ಕಾರ್ಯ ನಿರ್ವಾಹಕ ಮುಖ್ಯಸ್ಥರಾಗಿದ್ದಾರೆ.

ಶುಕ್ರವಾರ ತಡರಾತ್ರಿ ಶೀತಲ್ ನಿವಾಸದಲ್ಲಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಪ್ರಮಾಣ ವಚನ ಬೋಧಿಸಿದರು. ಅಧಿಕಾರ ಸ್ವೀಕರಿಸಿದ ತಕ್ಷಣವೇ ಕರ್ಕಿ ಅವರು ಸಂಸತ್ತನ್ನು ವಿಸರ್ಜಿಸಿ 2026ರ ಮಾರ್ಚ್ 5ರಂದು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡಿದರು, ಇದನ್ನು ರಾಷ್ಟ್ರಪತಿಗಳು ತಕ್ಷಣ ಅನುಮೋದಿಸಿದರು.

ಸಾಂವಿಧಾನಿಕ ಹೊಸ ಮಾರ್ಗ:

ಕರ್ಕಿ ಅವರನ್ನು ನೇಮಕ ಮಾಡಲು ಅಧ್ಯಕ್ಷರು ಸಂವಿಧಾನದ 61ನೇ ವಿಧಿ ಬಳಸಿದ್ದು, ಇದು 2015ರ ಸಂವಿಧಾನ ಜಾರಿಗೆ ಬಂದ ಬಳಿಕ ಪ್ರಥಮ ಬಾರಿಗೆ ಆಗಿದೆ. ಇದುವರೆಗೆ ಎಲ್ಲ ಸರ್ಕಾರಗಳು 76ನೇ ವಿಧಿಯ ಅಡಿಯಲ್ಲಿ ರಚನೆಯಾಗಿದ್ದವು. ಜೆನ್-ಝಡ್ ಚಳವಳಿ ಮತ್ತು ಯುವಕರ ಒತ್ತಡದಿಂದ ಈ ಹೊಸ ನಿರ್ಧಾರಕ್ಕೆ ದಾರಿ ಮಾಡಿಕೊಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande