ವೀರಶೈವ ಮಹಾಸಭೆ ಹೇಳಿಕೆಗೂ ಪಂಚಮಸಾಲಿ ಸಂಘಕ್ಕೂ ಸಂಬಂಧವಿಲ್ಲ : ಹರಿಹರ ಪೀಠದ ವಚನಾನಂದ ಶ್ರೀಗಳು
ಗದಗ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಾತಿ ಗಣತಿ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಸ್ಪಷ್ಟನೆ ನೀಡಿದರು. “ವೀರಶೈವ ಮಹಾಸಭೆಯ ಹೇಳಿಕೆಗೂ ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಜಾಗತೀಕ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒ
ಪೋಟೋ


ಗದಗ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಾತಿ ಗಣತಿ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಸ್ಪಷ್ಟನೆ ನೀಡಿದರು. “ವೀರಶೈವ ಮಹಾಸಭೆಯ ಹೇಳಿಕೆಗೂ ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಜಾಗತೀಕ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಪಂಚಮಸಾಲಿ ಸಂಘವು ಬೇರೆ ಬೇರೆ ಸಂಸ್ಥೆಗಳು. ಸಮಾಜದವರು ಧರ್ಮಪೀಠಗಳ ನಿರ್ಧಾರಗಳಿಗೆ ಬದ್ಧರಾಗಿರಬೇಕು” ಎಂದು ಅವರು ನುಡಿದರು.

ನಗರದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, “ರಾಜ್ಯಾದ್ಯಂತ ಈಗಾಗಲೇ 11 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದ್ದೇನೆ. ಇನ್ನೂ 8 ಜಿಲ್ಲೆಗಳಲ್ಲಿ ಪ್ರವಾಸ ಮುಂದುವರಿಯಲಿದೆ. ಭಕ್ತರ ಜೊತೆ ಸಮಾಲೋಚನೆ ನಡೆಸಿ ಸಮಾಜದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ” ಎಂದರು.

ನಾಗಮೋಹನದಾಸ್ ಆಯೋಗ ವರದಿಯಲ್ಲಿ ಜಾತಿ ದಾಖಲಾತಿ ಗೊಂದಲ ಉಂಟಾಗಿದೆ ಎಂದು ವಚನಾನಂದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು. “ಮೊದಲು 2 ಪಂಚಮಸಾಲಿ ವರ್ಗಗಳಿದ್ದವು. ಆದರೆ ಇತ್ತೀಚೆಗೆ ‘ಜೈನ ಪಂಚಮಸಾಲಿ’ ಎಂಬ ಹೆಸರಿನ ಹೊಸ ವರ್ಗ ಸೇರಿಸಲಾಗಿದೆ. ಹಿಂದೂಳಿದ ವರ್ಗಗಳ ಆಯೋಗಕ್ಕೆ ಈ ಮಾಹಿತಿ ಹೇಗೆ ಸಿಕ್ಕಿತು ಎಂಬುದು ಸ್ಪಷ್ಟವಿಲ್ಲ. ಸಮೀಕ್ಷೆ ಮಾಡುವಾಗ ತಪ್ಪು ತಿದ್ದುಪಡಿ ಮಾಡಿ ನಿಜಸ್ಥಿತಿ ತೋರಿಸಬೇಕು” ಎಂದು ಆಗ್ರಹಿಸಿದರು.

ಆಯೋಗದ ವರದಿಯಲ್ಲಿ ಎ 0868 ಲಿಂಗಾಯತ ಪಂಚಮಸಾಲಿ ಹಾಗೂ ಎ 1526 ವೀರಶೈವ ಪಂಚಮಸಾಲಿ ಎಂದು ನಮೂದಿಸಿರುವುದನ್ನು ಉಲ್ಲೇಖಿಸಿ, “ಈ ವಿಷಯದ ಕುರಿತು ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಮಾಲೋಚನೆ ನಡೆಸುತ್ತಿದ್ದೇವೆ. ಅಭಿಪ್ರಾಯ ಸಂಗ್ರಹಿಸಿ ಸಮಾಜದ ಮುಂದೆ ಸ್ಪಷ್ಟನೆ ನೀಡುತ್ತೇವೆ” ಎಂದು ತಿಳಿಸಿದರು.

2014 ರಿಂದ 2017 ರ ಸಮೀಕ್ಷೆಯಲ್ಲಿ ಪಂಚಮಸಾಲಿ ಜನಸಂಖ್ಯೆಯನ್ನು ಕೇವಲ 10 ಲಕ್ಷ ಎಂದು ತೋರಿಸಿದ್ದು, ವಾಸ್ತವದಲ್ಲಿ 1990 ರಲ್ಲೇ 84 ಲಕ್ಷ ಜನಸಂಖ್ಯೆ ಹೊಂದಿದ್ದೆವು ಎಂದು ಶ್ರೀಗಳು ವಾದಿಸಿದರು. “ಹೀಗಾಗಿ ಆ ವರದಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಸಮಾಜದವರು ಮೊದಲು ಜಾಣರಾಗಬೇಕು” ಎಂದು ಕಿವಿಮಾತು ನೀಡಿದರು.

ಧರ್ಮದ ಅಂಶದಲ್ಲೂ ಗೊಂದಲ ತೋರಿಸಲಾಗಿದೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. “ಧರ್ಮದ ಕಾಲಂನಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ನಾಸ್ತಿಕ ಸೇರಿ 11 ಕಾಲಂಗಳನ್ನು ತೋರಿಸಲಾಗಿದೆ. ಈ ರೀತಿಯ ಗೊಂದಲಕಾರಿ ವರದಿ ಯಾಕೆ ತಯಾರಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಪಂಚಮಸಾಲಿಗಳು ಕೇವಲ ಜಾತಿ ಕಾಲಂನಲ್ಲಿ ಮಾತ್ರ ದಾಖಲಿಸಿಕೊಳ್ಳಬೇಕು” ಎಂದು ಸ್ಪಷ್ಟನೆ ನೀಡಿದರು.

ಸೆಪ್ಟೆಂಬರ್ 17ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಿರ್ಣಾಯಕ ಸಭೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು, ವಿವಿಧ ಪೀಠಾಧಿಪತಿಗಳು, ಹಿರಿಯರು, ಶಿಕ್ಷಣ ತಜ್ಞರು, ಕಾನೂನು ಸಲಹೆಗಾರರು, ಯುವಕರು ಹಾಗೂ ಮಹಿಳೆಯರು ಭಾಗಿಯಾಗಲಿದ್ದಾರೆ. “ಇಲ್ಲಿಯವರೆಗೆ ಪಂಚಮಸಾಲಿಗಳನ್ನು ಉಪಯೋಗಿಸಿ ರಾಜಕೀಯ ಪ್ರಯೋಜನ ಪಡೆದುಕೊಂಡಿದ್ದಾರೆ. ಸಣ್ಣ ಸಮುದಾಯಗಳು ನಮ್ಮ ಮೇಲೆ ಆಳುತ್ತಿವೆ. ಇನ್ನು ಮುಂದೆ ಅದು ನಡೆಯುವುದಿಲ್ಲ. ಧರ್ಮಪೀಠ ಹೇಳಿದಂತೆ ಸಮಾಜ ಕೂಡ ಕೇಳಿಕೊಳ್ಳಬೇಕು” ಎಂದು ವಚನಾನಂದ ಶ್ರೀಗಳು ಸ್ಪಷ್ಟಪಡಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಂಗನಗೌಡ ಪಾಟೀಲ, ರಾಜ್ಯ ಉಪಾಧ್ಯಕ್ಷ ಎಫ್. ವ್ಹಿ. ಮರಿಗೌಡ್ರ, ಹಾಗೂ ಅನೇಕ ಸಮಾಜ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande