ಕೋಲಾರ, ೧೨ ಸೆಪ್ಟಂಬರ್ (ಹಿ.ಸ) :
ಆ್ಯಂಕರ್ : ವೋಟ್ ಚೋರ್ -ಗದ್ದಿ ಚೋಡ್ ಅಭಿಯಾನದ ಸಮಯದಲ್ಲಿ ಪುಂಡಾಟಿಕೆ ನಡೆಸಿ ಅಖಿಲ ಭಾರತ ಯುವ ಕಾಂಗ್ರೆಸ್ ಹಾಗು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಅಗೌರವ ತೋರಿದ ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರಿದ್ ಸೇರಿದಂತೆ ಕೋಲಾರ ಜಿಲ್ಲಾ ಆರು ತಾಲ್ಲೂಕುಗಳ ಅಧ್ಯಕ್ಷರಿಗೆ ಕಾರಣ ಕೇಳಿ ನೋಟೀಸ್ ನೀಡಿ ಕಾರಣ ಕೇಳಲಾಗಿದೆ.ನೋಟೀಸ್‌ಗೆ ವಿವರವಾದ ಉತ್ತರ ನೀಡಬೇಕೆಂದು ನೋಟಿಸ್‌ನಲ್ಲಿ ತಾಕೀತು ಮಾಡಲಾಗಿದೆ.
ಕಳೆದ ಭಾನುವಾರ ಕೋಲಾರದಲ್ಲಿ ನಡೆದ ವೋಟ್ ಚೋರ್ -ಗದ್ದಿ ಚೋಡ್ ಅಭಿಯಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಚೆಬ್ ಕರ್ನಾಟಕ ಉಸ್ತುವಾರಿ ಉದಯ ಭಾನು ಭಂಡಾರಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಕೋಲಾರದ ಇಟಿಸಿಎಂ ಸರ್ಕಲ್‌ನಲ್ಲಿ ಪಂಜಿನ ಮೆರವಣಿಗೆ ಏರ್ಪಡಿಸಲಾಗಿತ್ತು. ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಮತ್ತೊಂದು ಕಡೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಲೂರಿನ ಸುನಿಲ್ ನಂಜೇ ಗೌಡರ ನೇತೃತ್ವದಲ್ಲಿ ಪ್ರತ್ಯೇಕವಾದ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕೋಲಾರ ನಗರದ ಹೊರವಲಯದ ಫ್ಲೈಓವರ್ ಬಳಿ ಪ್ರತ್ಯೇಕ ಮೆರವಣಿಗೆಯ ಮೂಲಕ ಯುವ ಕಾಂಗ್ರೆಸ್ ನಾಯಕರನ್ನು ಕರೆತರಲಾಯಿತು.
ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಯ ಸರ್ಕಲ್ ತನಕ ಮೆರವಣಿಗೆಗೆ ಪೋಲೀಸರು ಅನುಮತಿ ನೀಡಿದ್ದರು. ಆದರೆ ಮೆರವಣಿಗೆ ಇ.ಟಿ.ಸಿ.ಎಂ ಸರ್ಕಲ್ ತನಕ ಮೆರವಣಿಗೆ ನಡೆಯಿತು.
ಮತ್ತೊಂದು ಮೆರವಣಿಗೆ ಯುವ ಕಾಂಗ್ರೆಸ್ ಕೋಲಾರ ಜಿಲ್ಲಾ ಅಧ್ಯಕ್ಷ ಸೈಯದ್ ಅಫ್ರಿದ್ ನೇತೃವದಲ್ಲಿ ಸಂಘಟಿಸಲಾಗಿತ್ತು.
ಎರಡು ಗುಂಪುಗಳು ಮುಖಾ ಮುಖಿ ಆಗಿ ಪರಸ್ಪರ ಸಂಘರ್ಷಕ್ಕೆ ಮುಂದಾಗಿದ್ದರು. ಎರಡು ಗುಂಪುಗಳ ಕಾರ್ಯಕರ್ತರು ಘೋಷಣೆಗಳನ್ನು ಹಾಕಿದರು.
ಪೋಲೀಸರು ಮಧ್ಯಪ್ರವೇಶ ಮಾಡಿ ಸಂಭವಿನೀಯ ಘರ್ಷಣೆಯನ್ನು ತಪ್ಪಿಸಿದರು. ಇದರಿಂದಾಗಿ ರಾಷ್ಟ್ರೀಯ ಹಾಗು ರಾಜ್ಯದ ನಾಯಕರು ತೀವ್ರ ಮುಜುಗಗರಕ್ಕೆ ಒಳಗಾದರು.
ಎರಡು ಗುಂಪುಗಳು ಮಾದ್ಯಮಗಳಿಗೆ ಹೇಳಿಕೆ ನೀಡಿ ಪಕ್ಷದ ವರ್ಚಸಿಗೆ ದಕ್ಕೆ ತಂದಿದರು.ಇದರಿಂದಾಗಿ ನಾಯಕರು ತೀವ್ರ ಮುಜುಗರ ಅನುಭವಿಸಿದ್ದರು.
ಘಟನೆಯನ್ನು ಗಂಭಿರವಾಗಿ ಪರಿಗಣಿಸಿರುವ ಅಖಿಲ ಭಾರತ ಯುವ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಿದೆ. ಶಿಸ್ತು ಕ್ರಮಕ್ಕೆ ಹೆದರಿದ ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರಿದ್ ಹಾಗು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ ನಂಜೇಗೌಡ ರಾಜೀ ಸಂಧಾನಕ್ಕೆ ಮುಂದಾಗಿದ್ದು ಆಯಿತು.
ಪತ್ರಿಕಾ ಘೋಷ್ಠಿ ನಡೆಸಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.ಎಲ್ಲವು ಆಕಸ್ಮಿಕವಾಗಿ ನಡೆಯಿತು ಎಂದು ಹೇಳೊಣ ಎಂದು ನಿರ್ಧರಿಸಿದ್ದರಂತೆ.
ಆದರೆ ಇದುವರೆಗು ಯಾರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.
ಕರ್ನಾಟಕ ಯುವ ಕಾಂಗ್ರೆಸ್ ಬಾಹುಬಲಿ ನೋಟೀಸ್ ನೀಡಿ ವಿವರಣೆ ಕೇಳಿದ್ದಾರೆ.
ನೋಟೀಸ್ ತಲುಪಿದ ಕೂಡಲೇ ಪುಂಡಾಟಿಕೆ ನಡೆಸಿದವರು ಬೆದರಿದ್ಧಾರೆ. ಅಶಿಸ್ತಿನಿಂದ ವರ್ತಿಸಿದ ಸಚಿವ ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿತ್ತು.
ಚಿತ್ರ ; ವೋಟ್ ಚೋರ್ -ಗದ್ದೆ ಚೋಡ್ ಅಭಿಯಾನದ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೋಲಾರದಲ್ಲಿ ಮೆರವಣಿಗೆ ನಡೆಸಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್