ಉತ್ತರ ಕರ್ನಾಟಕದ ವಿಶೇಷ ಜೋಳದ ತಾಲಿಪಟ್ಟು
ಹುಬ್ಬಳ್ಳಿ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದಸರಾ ಹಬ್ಬ ಬಂದರೆ ಸಂಭ್ರಮ, ಸಡಗರದೊಂದಿಗೆ ಮನೆಮನೆಗಳಲ್ಲಿ ವೈವಿಧ್ಯಮಯ ಖಾದ್ಯಗಳು ತಯಾರಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಖಾರಪ್ರಿಯರಿಗೆ ವಿಶೇಷ ಸ್ಥಾನವಿರುವ ಜೋಳದ ತಾಲಿಪಟ್ಟು ದಸರಾ ಹಬ್ಬದ ಸಂದರ್ಭದಲ್ಲೇ ಹೆಚ್ಚು ಪ್ರಸಿದ್ಧ. ಜೋಳದ ಹಿಟ್ಟಿಗೆ ಗೋಧ
talipattu


ಹುಬ್ಬಳ್ಳಿ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದಸರಾ ಹಬ್ಬ ಬಂದರೆ ಸಂಭ್ರಮ, ಸಡಗರದೊಂದಿಗೆ ಮನೆಮನೆಗಳಲ್ಲಿ ವೈವಿಧ್ಯಮಯ ಖಾದ್ಯಗಳು ತಯಾರಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಖಾರಪ್ರಿಯರಿಗೆ ವಿಶೇಷ ಸ್ಥಾನವಿರುವ ಜೋಳದ ತಾಲಿಪಟ್ಟು ದಸರಾ ಹಬ್ಬದ ಸಂದರ್ಭದಲ್ಲೇ ಹೆಚ್ಚು ಪ್ರಸಿದ್ಧ.

ಜೋಳದ ಹಿಟ್ಟಿಗೆ ಗೋಧಿ ಹಾಗೂ ಕಡಲೆ ಹಿಟ್ಟು ಸೇರಿಸಿ, ಜೀರಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಖಾರದ ಪುಡಿ, ಈರುಳ್ಳಿ, ಕ್ಯಾರೆಟ್, ಕೊತ್ತಂಬರಿ ಮುಂತಾದವುಗಳನ್ನು ಸೇರಿಸಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ತಯಾರಿಸಲಾಗುತ್ತದೆ. ಬಾಳೆ ಎಲೆಯ ಮೇಲೆ ತಟ್ಟಿ, ಕಾವಲಿನಲ್ಲಿ ಎರಡೂ ಬದಿಗಳೂ ಚೆನ್ನಾಗಿ ಬೇಯಿಸಿದರೆ ತಾಲಿಪಟ್ಟು ಸವಿಯಲು ಸಿದ್ಧವಾಗುತ್ತದೆ.

ಈ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಕ್ಕೆ ಕಾಯಿ ಚಟ್ನಿ, ಹುರಿಗಡಲೆ ಚಟ್ನಿ ಅಥವಾ ಟೊಮೆಟೋ ಚಟ್ನಿ ಜೊತೆಯಾದರೆ ಹಬ್ಬದ ರುಚಿ ಮತ್ತಷ್ಟು ಹೆಚ್ಚುತ್ತದೆ. ದಸರಾ ಸಂಭ್ರಮದಲ್ಲಿ ಸವಿಯುವ ಈ ಜೋಳದ ತಾಲಿಪಟ್ಟು, ಮನೆಮನೆಗಳಲ್ಲಿ ಹಬ್ಬದ ವೈಶಿಷ್ಟ್ಯವನ್ನು ತೋರಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande