ಬಳ್ಳಾರಿಯಲ್ಲಿ “ನಿದ್ರಾದೇವಿ ನೆಕ್ಸ್ಟ್ ಡೋರ್” ಸಿನಿಮಾಗೆ ಭರ್ಜರಿ ಸ್ವಾಗತ
ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ “ನಿದ್ರಾದೇವಿ ನೆಕ್ಸ್ಟ್ ಡೋರ್” ಸಿನಿಮಾಗೆ ನಗರದ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಲಭಿಸಿದೆ. ಬಳ್ಳಾರಿ ನಗರದ ಸಂಗಮ್ ಸರ್
ಬಳ್ಳಾರಿಯಲ್ಲಿ “ನಿದ್ರಾದೇವಿ ನೆಕ್ಸ್ಟ್ ಡೋರ್” ಸಿನಿಮಾಗೆ ಭರ್ಜರಿ ಸ್ವಾಗತ


ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ “ನಿದ್ರಾದೇವಿ ನೆಕ್ಸ್ಟ್ ಡೋರ್” ಸಿನಿಮಾಗೆ ನಗರದ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಲಭಿಸಿದೆ.

ಬಳ್ಳಾರಿ ನಗರದ ಸಂಗಮ್ ಸರ್ಕಲ್ ಹತ್ತಿರವಿರುವ ಎಸ್ ಎಲ್ ಏನ್ ಮಾಲ್ ನಲ್ಲಿರುವ ಮೂವಿ ಟೈಮ್ಸ್ ಚಿತ್ರಮಂದಿರದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಹರ್ಷೋದ್ಗಾರದಿಂದ ಸುತ್ತಮುತ್ತಲಿನ ವಾತಾವರಣವೇ ಕಂಗೊಳಿಸಿತು. ಬೆಳಗ್ಗೆಯಿಂದಲೇ ಅಭಿಮಾನಿಗಳು ಪಟಾಕಿ ಸಿಡಿಸಿ ಪೋಸ್ಟರ್‌ಗೆ ಹೂವಿನ ಹಾರ ಹಾಕಿ, ಡೊಳ್ಳಿನ ನಾದಕ್ಕೆ ಕುಣಿದು ಕುಪ್ಪಳಿಸಿ,ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ವಿ. ಹೆಚ್.ಹುಲುಗಪ್ಪ, ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಮತ್ತು ತಾಲೂಕು ಹಾಗೂ ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರವೀರ್ ಶೆಟ್ಟಿಯ ಚಲನಚಿತ್ರ ಬದುಕಿಗೆ ಶುಭ ಹಾರೈಸಿ,“ ಹೊಸ ಪ್ರತಿಭೆಗಳು ಹೊರಹೊಮ್ಮಬೇಕೆಂಬ ಆಶಯ ನಮಗಿದೆ. ಪ್ರೇಕ್ಷಕರ ಪ್ರೀತಿ, ಆಶೀರ್ವಾದ ಸಿಕ್ಕರೆ ಚಿತ್ರ ಖಂಡಿತ ಯಶಸ್ವಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ನಮ್ಮ ಪ್ರವೀರ್ ಶೆಟ್ಟಿ ದೊಡ್ಡ ಹೀರೋ ಆಗಬೇಕು” ಎಂದು ಹರ್ಷೋದ್ಗಾರ ಕೂಗಿದರು. ಕೆಲವರು ಹೂವಿನ ತಟ್ಟೆಗಳು, ಸಿಹಿತಿಂಡಿಗಳನ್ನು ಹಂಚಿ ಸಂಭ್ರಮ ಹಂಚಿಕೊಂಡರು.

ಚಿತ್ರ ಬಿಡುಗಡೆಯ ದಿನವೇ ನಡೆದ ಈ ಅದ್ಧೂರಿ ಸ್ವಾಗತ ಕಾರ್ಯಕ್ರಮ, ಬಳ್ಳಾರಿಯ ಚಿತ್ರರಸಿಕರ ಆತುರ, ಉತ್ಸಾಹ, ಅಭಿಮಾನಿಗಳ ಭಾವನೆ ಒಂದೇಗೂ ಸೇರಿಕೊಂಡಂತೆ ಕಂಡಿತು.

ಈ ಸಂದರ್ಭದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ರಾಜ್ಯ ಸಂಚಾಲಕರು ಅದಿಗೇರಿ ರಾಮಣ್ಣ, ಜಿಲ್ಲಾ ಸಂಚಾಲಕ ಅಸುಂಡಿ ಸೂರಿ, ವಿ.ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಕೆ.ಆನಂದ್, ವೀರಾ ರೆಡ್ಡಿ, ಗೌರವಾಧ್ಯಕ್ಷ ವೆಂಕಟರೆಡ್ಡಿ, ಕೆ ಉಮೇಶ್, ವೆಂಕಪ್ಪ, ಎರ್ರಿಸ್ವಾಮಿ, ಜಿಲ್ಲಾ ಕಾರ್ಯದರ್ಶಿ ವಿ. ವೆಂಕಟೇಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ವೆಂಕಟೇಶ್, ಜಿಲ್ಲಾ ಮುಖಂಡರಾದ ಜೀವಿ ಮಂಜುನಾಥ್,ಲಾಯರ್ ವೆಂಕಟೇಶ್ ಯಾದವ್,ಮಲ್ಲಿಕಾರ್ಜುನ ಹರಿವಾಣ, ಬಿ.ಚಂದ್ರ, ಬಿ ಕೇಶವ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande