ಕೊಪ್ಪಳ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ರಾಜ್ಯದ ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದ ಕ್ರೀಡಾಪಟುಗಳು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನೆಟ್‍ಬಾಲ್, ಕುಸ್ತಿ ಹಾಗೂ ಟೆಕ್ವಾಂಡೋ ಕ್ರೀಡೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ವಿಷಯ ನಿರ್ವಾಹಕರಾದ ಕೀರ್ತಿವರ್ಧನ್, ಮೊ.ಸಂ: 7676343554, ಖೋಖೋ ತರಬೇತುದಾರರಾದ ಯತಿರಾಜು ಮೊ.ಸಂ: 9448633146 ಇವರನ್ನು ಸಂಪರ್ಕಿಸಬಹುದು.
ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಟೆನ್ನಿಸ್, ಈಜು, ಜುಡೋ ಕ್ರೀಡೆಗಳು, ಕೆ.ಎಚ್.ಬಿ. ಅಕ್ಕಮಹಾದೇವಿ ಕಾಲೋನಿ ಬಾಸ್ಕೆಟ್‍ಬಾಲ್ ಕ್ರೀಡಾಂಗಣದಲ್ಲಿ ಬಾಸ್ಕೆಟ್‍ಬಾಲ್ ಕ್ರೀಡೆ, ಹೆಚ್.ಇ.ಇ ಪಾಳಿಟೆಕ್ನಿಕ್ ಕ್ರೀಡಾಂಗಣದಲ್ಲಿ ಹ್ಯಾಂಡ್‍ಬಾಲ್, ವೀರೇಂದ್ರ ಪಾಟೀಲ ಬಡಾವಣೆ, ಎಂ.ಬಿ.ನಗರ ಫುಟ್‍ಬಾಲ್ ಅಂಕಣದಲಲಿ ಫುಟ್‍ಬಾಲ್ ಕ್ರೀಡೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಹಾಕಿ ತರಬೇತುದಾರರಾದ ಸಂಜಯ್ ಬಾಣದ್, ಮೊ.ಸಂ: 9844029235, ಬಾಸ್ಕೆಟ್‍ಬಾಲ್ ತರಬೇತುದಾರರಾದ ಪ್ರವೀಣಕುಮಾರ ಮೊ.ಸಂ: 8884774416 ಇವರನ್ನು ಸಂಪರ್ಕಿಸಬಹುದು.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ, ವುಶು, ಕಬಡ್ಡಿ, ಬಾಕ್ಸಿಂಗ್ ಕ್ರೀಡೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಹಾಕಿ ತರಬೇತುದಾರರಾದ ಜಾಕೀರ್, ಮೊ.ಸಂ: 9036335986, ಫುಟ್ಬಾಲ್ ತರಬೇತುದಾರರಾದ ಮಸೂದ್, ಮೊ.ಸಂ: 9886688858 ಇವರನ್ನು ಸಂಪರ್ಕಿಸಬಹುದು.
ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಹಾಗೂ ಒಳಾಂಗಣ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲ್‍ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಕ್ರೀಡೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಅಧೀಕ್ಷಕರಾದ ಸಂತೋಷ ಕರಮುಡಿ, ಮೊ.ಸಂ: 6362238100, ನರಸಿಂಹಲು, ಮೊ.ಸಂ: 9035130056, ಚನ್ನಪ್ಪ, ಮೊ.ಸಂ: 7338647270 ಇವರನ್ನು ಸಂಪರ್ಕಿಸಬಹುದು.
ಬೀದರ್‍ನ ಪಶುವೈದ್ಯಕೀಯ ವಿಶ್ವವಿದ್ಯಾಲಯ, ನಂದಿನಗರ, ಕಮಠಾಣಾದಲ್ಲಿ ವಾಲಿಬಾಲ್ ಹಾಗೂ ಯೋಗ ಕ್ರೀಡೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಅಧೀಕ್ಷಕರಾದ ಪದ್ಮಾವತಿ, ಮೊ.ಸಂ: 8884694472, ಹಾಕಿ ತರಬೇತುದಾರರಾದ ಖುದ್ದೂಸ್, ಮೊ.ಸಂ: 6361488733 ಇವರನ್ನು ಸಂಪರ್ಕಿಸಬಹುದು.
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಖೋಖೋ, ಥ್ರೋಬಾಲ್, ವೇಟ್ ಲಿಫ್ಟಿಂಗ್ ಕ್ರೀಡೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಅಧೀಕ್ಷಕರಾದ ಗೋವಿಂದಪ್ಪ, ಮೊ.ಸಂ: 9108197572 ಇವರನ್ನು ಸಂಪರ್ಕಿಸಬಹುದು.
ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳು ಸೆಪ್ಟೆಂಬರ್ 15 ರಂದು ಮೇಲೆ ತಿಳಿಸಿದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿವೆ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್