ಕೋಲಾರ, ೧೨ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಭೂಮಿ ಪೂಜೆಯನ್ನು ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬರುತ್ತಿರುವುದರಿಂದ ಎಲ್ಲಾ ಇಲಾಖೆಗಳು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾಲೂರು ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿರುವ ಕುರಿತು ಚರ್ಚೆ ನಡೆಸಿ ಎಲ್ಲಾ ಪೂರ್ವಸಿದ್ಧತೆಗಳನ್ನು ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹ, ಕಾನೂನು ಪದವೀದರರ ಶಿಷ್ಯ ವೇತನ, ನಗರಸಭೆಯ ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ,ಎ ಮತ್ತು ಬಿ ಇ-ಖಾತೆ ವಿತರಣೆ, ಶಿಶು ಅಭಿವೃದ್ದಿ ಯೋಜನೆ ಸಕ್ಷಮ್ ಅಂಗನವಾಡಿ ಯೋಜನೆ ಯಡಿಯಲ್ಲಿ ಭಾಗ್ಯಲಕ್ಷ್ಮಿ-ಸುಕನ್ಯ ಸಮೃದ್ದಿ ಯೋಜನೆ,ಮಾತೃ ವಂದನಾ ಯೋಜನೆ ಉದ್ಯೋಗಿನಿ ಯೋಜನೆ, ಮೀನುಗಾರಿಕೆ ಇಲಾಖೆಯ ಮಸ್ಯಾಶ್ರಯ ಯೋಜನೆಯಡಿ ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆಗೆ ಸಹಾಯಧನ ಮೀನು ಮಾರಾಟ ಮಾಡಲು ದ್ವಿ ಚಕ್ರ ವಾಹನ ಖರೀದಿ,ಕೃಷಿ ಹೊಂಡ ಮತ್ತು ಬಾವಿಗಳಲ್ಲಿ ಮೀನು ಮರಿ ದಾಸ್ತಾನು ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳು ಮನೆ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಚಂದ್ರಿಕೆ,ಹನಿ ನೀರಾವರಿ ಸಹಾಯಧನ ಕೃಷಿ ಇಲಾಖೆ ಕೃಷಿ ಯಾಂತ್ರೀಕರಣ ಯೋಜನೆ,ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ,ಹನಿ ನೀರಾವರಿ ಘಟಕಕ್ಕೆ ಸಹಾಯಧನ, ಕೃಷಿ ಭಾಗ್ಯ ಯೋಜನೆಯಡಿ, ಕೃಷಿಹೊಂಡ ನಿರ್ಮಾಣ ಕೃಷಿ ಉತ್ಪನ್ನ ಸಂಸ್ಕರಣಾ ಯೋಜನೆ ಆರೋಗ್ಯ ಇಲಾಖೆ ಆಶಾಕಿರಣ ದೃಷ್ಟಿ ಕೋನ ಕಾರ್ಯಕ್ರಮ,ಪಶುಪಾಲನೆ ಇಲಾಖೆ ಆಕಸ್ಮಿಕ ಜಾನುವಾರು ಮರಣ ಮಾಲೀಕರಿಗೆ ಪರಿಹಾರಧನ,ಆಕಸ್ಮಿಕ ಕುರಿ/ಮೇಕೆ ಮರಣ ಹೊಂದಿದ ಮಾಲೀಕರಿಗೆ ಪರಿಹಾರ ವಿತರಣೆ ಕಾರ್ಮಿಕ ಇಲಾಖೆಯಿಂದ ಮದುವೆ ಧನ ಸಹಾಯ,ಕಾರ್ಮಿಕರಿಗೆ ಪಿಂಚಣಿ ಯೋಜನೆ, ಅಪಘಾತ ಸಹಾಯ,ಹೆರಿಗೆ ಸಹಾಯ, ಅಂತ್ಯಕ್ರಿಯೆಯ ವೆಚ್ಚ ಮತ್ತು ಮರಣ ಧನ ಸಹಾಯ,ತಾಯಿ ಮಗು ಹಸ್ತ ಧನಸಹಾಯ ತೋಟಗಾರಿಕೆ ಇಲಾಖೆಯ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಇನ್ನಷ್ಟು ಯೋಜನೆಗಳ ಒಟ್ಟು ೮೧೩೧ ಫಲಾನುಭವಿಗಳಿಗೆ ೧೬೯.೧೯ ಕೋಟಿ ರೂಪಾಯಿಯ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಶ್ರೀ.ಮಹರ್ಷಿ ವಾಲ್ಮೀಕಿ ಭವನ ಮಾಲೂರು ಟೌನ್ ೧ಕೋಟಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮಾಲೂರು ಟೌನ್ ೫.೫೦ ಲಕ್ಷ ರುಪಾಯಿ.ಮತ್ತು ಶಿಶು ಅಭಿವೃದ್ಧಿ ಇಲಾಖೆಯಿಂದ ಕೊತ್ತೂರು೧೮ ಲಕ್ಷ,ಕೊಡಗಿನ ಬೆಲೆ೨೦ ಲಕ್ಷ,ಅರಣಿಘಟ್ಟ೨೦ ಲಕ್ಷ, ಸಿದ್ನಹಳ್ಳಿ ೨೦.ಲಕ್ಷ,ಆರ್.ಪಿ ಬಡಾವಣೆ ೨೦ ಲಕ್ಷ, ವರದಾಪುರ ೧೦ ಲಕ್ಷ ,ತಿಪ್ಪಸಂದ್ರ೧೦ ಲಕ್ಷ, ದೊಡ್ಡನಾಯಕನಹಳ್ಳಿ ೧೩.ಲಕ್ಷ, ನಲ್ಲತಿಮ್ಮನಹಳ್ಳಿ ೧೩ಲಕ್ಷ, ಚಿಕ್ಕಕಲ್ಲಹಳ್ಳಿ ೧೩ ಲಕ್ಷ. ಈ ಎಲ್ಲಾ ಗ್ರಾಮಗಳಲ್ಲಿಯೂ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಕ್ಕೂರು ಗ್ರಾಮದಲ್ಲಿ ೨ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ, ಬೆಸ್ಕಾಂ ವತಿಯಿಂದ ಟೇಕಲ್ ಸೋಲಾರ್ ಪ್ಲಾಂಟ್ ಉದ್ಘಾಟನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಜಲಜೀವನ್ ಮಿಷನ್ ಯೋಜನೆ, ಕಾಮಗಾರಿಗಳ ಉದ್ಘಾಟನೆ, ಲೋಕೋಪಯೋಗಿ ಇಲಾಖೆ ರಸ್ತೆಗಳ ನಿರ್ಮಾಣ (ಉದ್ದ.೩೪.೮೫ ಕಿ.ಮೀ) ೩೯೬.೫೦, ಠೇವಣಿ ವಂತಿಕೆ-ರಸ್ತೆಗಳ ನಿರ್ಮಾಣ (ಉದ್ದ.೦.೪೦ ಕಿ.ಮೀ) ೨೫೦, ಕಟ್ಟಡಗಳ ನಿರ್ಮಾಣ ಯೋಜನೆಯಡಿ-ಕಟ್ಟಡಗಳು ೧೬೪, ಎಸ್.ಹೆಚ್.ಡಿ.ಪಿ ಯೋಜನೆ-ರಸ್ತೆಗಳು (ಉದ್ದ.೧೩.೦೫ ಕಿ.ಮೀ)೩೦೦ ಒಟ್ಟು೧೫೭೩.೫೦ ಲಕ್ಷ ರೂಪಾಯಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ಶಂಕುಸ್ಥಾಪನೆ : ಸಮಾಜ ಕಲ್ಯಾಣ ಇಲಾಖೆ ಡಾ||ಬಿ.ಆರ್.ಅಂಬೇಡ್ಕರ್, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮಾಲೂರು ಟೌನ್ ೫.೫೦.ನಗರ ಸಭೆ ಹೊಸದಾಗಿ ವಾಣಿಜ್ಯ ಸಂಕೀರ್ಣದೊಂದಿಗೆ ಪುರಸಭೆಯ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ೨೦.೫೨, ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ದಿ ಕಾಮಗಾರಿ೨೦.೦೦, ಐ.ಡಿ.ಎಸ್.ಎಂ.ಟಿ ಹಾಗೂ ಡಿ.ಎಂ.ಎಫ್ ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರ ಅಭಿವೃದ್ದಿ ಕಾಮಗಾರಿ೧.೫೨, ನಗರಸಭೆಯ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗದವರು ವಾಸಿಸುವ ಸ್ಥಳಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ೪.೦೦ ವಿಪತ್ತು ನಿರ್ವಹಣಾ ಅನುದಾನದಡಿಯಲ್ಲಿ ರಾಜಕಾಲುವೆ ಅಭಿವೃದ್ದಿ ಕಾಮಗಾರಿ (Sಆಖಈ)೪.೦೦, ಎಸ್.ಬಿ.ಎಂ ೨.೦ ರಡಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯವಿರುವ ನೀರು ಸರಬರಾಜು ಕೊಳವೆ ಮಾರ್ಗಗಳ ಅಳವಡಿಕೆ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಾರ ನಿರ್ಮಾಣ ಕಾಮಗಾರಿ೪೨.೦೦, ನಗರಸಭೆ ಮಾಲೂರು ಇಂದಿರಾ ಕ್ಯಾಂಟೀನ್ ಕಾಮಗಾರಿ೧.೧೩, ಶಾಲಾ ಶಿಕ್ಷಣ ಇಲಾಖೆ ಗುರುಭವನ ಕಟ್ಟಡ ಭೂಮಿ ಪೂಜೆ ಮಾಲೂರು ಟೌನ್೫. ೫೦,ಕರ್ನಾಟಕ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಅನುದಾನದಡಿಯಲ್ಲಿ ಮಾಸ್ತಿ ಕೆ.ಪಿ.ಎಸ್ ಶಾಲೆಯಲ್ಲಿ ೧೩ ಶಾಲಾ ಕೊಠಡಿಗಳ ಭೂಮಿ ಪೂಜೆ ೨. ೫೪, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೂತನ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ೪೧.೦೦, ಬೆಸ್ಕಾಂ ಲಕ್ಕೂರು ಹೋಬಳಿ ಬಾಳಿಗಾನಹಳ್ಳಿ ಸೋಲಾರ್ ಪ್ಲಾಂಟ್ ಶಂಕುಸ್ಥಾಪನೆ, ಲಕ್ಕೂರು ಹೋಬಳಿ ಲಕ್ಕೂರು ಮತ್ತು ಕೋಡೂರು ಗ್ರಾಮಗಳಲ್ಲಿ ಸೋಲಾರ್ ಪ್ಲಾಂಟ್ ಶಂಕುಸ್ಥಾಪನೆ, ಪಂಚಾಯತ್ ರಾಜ್ ಇಂಜನಿಯರಿಂಗ್ ಉಪವಿಭಾಗ ಗ್ರಾಮೀಣ ರಸ್ತೆಗಳ ಯೋಜನೆ (೨೯ ರಸ್ತೆಗಳು-೩೯.೨೪ ಏಒ ಉದ್ದ)೨೦.೦೦,ಗ್ರಾಮೀಣ ರಸ್ತೆಗಳ ಪ.ಜಾ/ಪ.ಪಂ ಯೋಜನೆ (೦೨ ರಸ್ತೆಗಳು-೨.೨೪ ಏಒ ಉದ್ದ)೧.೦೦,ಗ್ರಾಮೀಣ ರಸ್ತೆಗಳ ಪ.ಜಾ/ಪ.ಪಂ ಯೋಜನೆ (೦೫ ರಸ್ತೆಗಳು-೧.೨೦ ಏಒ ಉದ್ದ) ೧.೦೦,ಗ್ರಾಮೀಣ ರಸ್ತೆಗಳ ಯೋಜನೆ (೨೦ ರಸ್ತೆಗಳು-೩೧.೫೦ಏಒ ಉದ್ದ)೧೬.೦೦, ೨೫೧೫ ಜಿಲ್ಲಾ ಪಂಚಾಯತಿ ಅಭಿವೃದ್ದಿ (ಶಾಸನಬದ್ದ) ಯೋಜನೆ ೦.೯೩, ಲೋಕೋಪಯೋಗಿ ಇಲಾಖೆ ೫೦೫೪ ರಸ್ತೆಗಳ ನಿರ್ಮಾಣ (ಉದ್ದ.೨೭.೮೧ ಕಿ.ಮೀ)೪೧.೬೦ ಸಿ.ಆರ್.ಎಫ್ ಯೋಜನೆ-ರಸ್ತೆಗಳ ನಿರ್ಮಾಣ (ಉದ್ದ.೨.೬೫ ಕಿ.ಮೀ)೬.೦೦ ಒಟ್ಟು ೨೨೬.೨೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಶಿಷ್ಟಾಚಾರ ಅನುಸಾರ ಎಲ್ಲವನ್ನು ಪಾಲನೆ ಮಾಡಬೇಕು.ಯಾವುದೇ ಲೋಪಗಳಿಗೆ ಅವಕಾಶವಾಗಬಾರದು.ಎಲ್ಲ ಸಿದ್ದತಾ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ ಭಾಗೇವಾಡಿ, ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ., ಉಪ ವಿಭಾಗಾಧಿಕಾರಿ ಡಾ.ಎಸ್.ಮೈತ್ರಿ, ಮಾಲೂರು ತಹಶೀಲ್ದಾರ್ ರೂಪ, ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾಲೂರು ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿರುವ ಕುರಿತು ಚರ್ಚೆ ನಡೆಸಿ ಎಲ್ಲಾ ಪೂರ್ವಸಿದ್ಧತೆಗಳನ್ನು ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್