ಕೋಲಾರ, ೧೨ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕ್ಷೇತ್ರನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಾಲೆಗೆ ಬಂದಿಲ್ಲ ಎಂದು ಶಿಕ್ಷಕಿ ಮಂಜುಳ ಪ್ರಶ್ನೆ ಮಾಡಿದ ಕಾರಣ ವಿಧ್ಯಾರ್ಥಿ ತಂದೆ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯವಾಗಿದ್ದು ಕೂಡಲೇ ಹಲ್ಲೆ ಮಾಡಿದ ಚೌಡಪ್ಪ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಜಯ್ ಕುಮಾರ್ ಒತ್ತಾಯ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿ ಅವರು ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿ ಹೇಳುವ ಬದಲಾಗಿ ಶಾಲೆಗೆ ಬಂದು ಶಿಕ್ಷಕಿ ಮಂಜುಳ ಮೇಲೆಯೇ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತರಗತಿಯಿಂದ ಹೊರಗೆ ತಳ್ಳಿದ್ದು ಗಾಯಗಳು ಆಗಿದೆ ಹಲ್ಲೆ ಮಾಡಿದ ವಿಧ್ಯಾರ್ಥಿ ತಂದೆ ಚೌಡಪ್ಪನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು.
ಕರ್ತವ್ಯನಿರತ ಸರ್ಕಾರಿ ನೌಕರರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅದರಲ್ಲಿಯೂ ಶಿಕ್ಷಕ ನೌಕರರ ಮೇಲೆ ಸಣ್ಣಪುಟ್ಟ ಕಾರಣಗಳಿಗಾಗಿ ಪದೇ ಪದೇ ಹಲ್ಲೆ ನಡೆಯುತ್ತಿದ್ದು, ನೌಕರರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿದೆ ಇಂತಹ ಘಟನೆಗಳು ಮತ್ತೆ ನಡೆಯದಂತೆ ಸರ್ಕಾರವು ಕಾನೂನು ರೂಪಿಸಬೇಕು ಎಂದು ಅಧ್ಯಕ್ಷ ಅಜಯ್ ಕುಮಾರ್ ಒತ್ತಾಯ ಮಾಡಿದ್ದಾರೆ.
ಚಿತ್ರ : ಅಜಯ್ ಕುಮಾರ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್