ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಕ್ಕೆ ತಂದೆಯಿಂದ ಶಿಕ್ಷಕಿ ಮೇಲೆ ಹಲ್ಲೆ
ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿ ತಂದೆಯಿಂದ ಶಿಕ್ಷಕಿ ಮೇಲೆ ಹಲ್ಲೆ
ಚಿತ್ರ : ಹಲ್ಲೆಗೆ ಒಳಗಾಗಿರುವ ಮಾಲುರು ತಾಲ್ಲೂಕಿನ ಟೇಕಲ್ನ ಕ್ಷೇತ್ರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ. ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾಗಿರುತ್ತದೆ.


ಕೋಲಾರ, ೧೨ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಶಿಕ್ಷಕಿ ಮೇಲೆ ವಿದ್ಯಾರ್ಥಿ ತಂದೆ ಬಂದು ಶಾಲೆಯಲ್ಲಿ ಹಲ್ಲೆ ಮಾಡಿರುವ ಘಟನೆ ಟೇಕಲ್ನ ಕ್ಷೇತ್ರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.

ಮಾಲೂರು ತಾಲ್ಲೂಕು ಟೇಕಲ್ನ ಕ್ಷೇತ್ರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ ಮೇಲೆ ಹಲ್ಲೆಯಾಗಿದ್ದು ಗ್ರಾಮದ ವಿದ್ಯಾರ್ಥಿ ಪೋಷಕ ಚೌಡಪ್ಪ ಎಂಬಾತನಿಂದ ಶಾಲೆಗೆ ಬಂದು ಹಲ್ಲೆ ನಡೆಸಿದ್ದು ಶುಕ್ರವಾರ ಏಕಾಏಕಿ ಶಾಲೆಯೊಳಗೆ ಬಂದು ಆಕೆಯನ್ನು ತಳ್ಳಿ ಹಲ್ಲೆ ಮಾಡಿದ್ದು ತಳ್ಳಿದ ವೇಳೆ ಶಿಕ್ಷಕಿ ತಲೆಗೆ ಬಾಗಿಲು ತಗುಲಿ ಗಾಯವಾಗಿದ್ದು ತಕ್ಷಣ ಆಕೆಯನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ತಲೆಯ ಪೆಟ್ಟಿನಿಂದ ಹೆಚ್ಚು ರಕ್ತಸ್ರಾವವಾಗಿದ್ದು ಹೊಲಿಗೆಯನ್ನು ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.

ಟೇಕಲ್ನ ಕ್ಷೇತ್ರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾರವರು ಕಳೆದ ಎರಡು ದಿನದಿಂದ ಶಾಲೆಯಲ್ಲಿ ಪರೀಕ್ಷೆ ನಡೆದ ಹಿನ್ನಲೆ ೬ನೇ ತರಗತಿ ಶರಣ್ ಎಂಬ ವಿದ್ಯಾರ್ಥಿ ಎರಡು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದು ಶಾಲೆಗೆ ಬಂದ ನಂತರ ಏಕೆ ಶಾಲೆಗೆ ಬಂದಿಲ್ಲವೆಂದು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಹಾಗೂ ಪೋಷಕರು ಹೇಳುವಂತೆ ವಿದ್ಯಾರ್ಥಿಯ ಕೈಗೆ ಹೊಡೆದರೆಂದು ಆರೋಪಿಸಿದ್ದು ಶರಣ್ ತಂದೆ ಚೌಡಪ್ಪನವರು ನನ್ನ ಮಗನನ್ನು ಏಕೆ ಹೊಡೆದರೆಂದು ಶಾಲೆಗೆ ಬಂದು ಪ್ರಶ್ನೆ ಮಾಡಿ ಶಿಕ್ಷಕಿ ಮಂಜುಳರ ಮೇಲೆ ಹಲ್ಲೆ ನಡೆಸಿದ್ದಾರೆ.

ಆಕೆಯ ಮೇಲೆ ಹಲ್ಲೆ ಮಾಡಿದ ವೀಡಿಯೋ ವೈರಲ್ : ಕ್ಷೇತ್ರನಹಳ್ಳಿ ಶಿಕ್ಷಕಿ ಮಂಜುಳರವರ ಮೇಲೆ ನಡೆದ ಹಲ್ಲೆಯು ಶಿಕ್ಷಕಿರವರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು ಈ ವೀಡಿಯೋ ಎಲ್ಲಾ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಮಾಲೂರು ಸರ್ಕಾರಿ ಆಸ್ಪತ್ರೆ ಬಿಇಒ ಕೆಂಪಯ್ಯನವರು ಶಿಕ್ಷಕಿ ಯೋಗಕ್ಷೇಮ ವಿಚಾರಿಸಿ ಮಾಹಿತಿ ಪಡೆದರು. ಕ್ಷೇತ್ರನಹಳ್ಳಿ ಸರ್ಕಾರಿ ಶಾಲೆ ಘಟನಾ ಸ್ಥಳಕ್ಕೆ ಮಾಸ್ತಿ ಪಿಐ ಓಂಪ್ರಕಾಶ್ಗೌಡ ಹಾಗೂ ಎಸ್ಐ ವರಲಕ್ಷ್ಮಮಮ್ಮ, ಟೇಕಲ್ ಹೊರಠಾಣೆ ಎಎಸ್ಐ ರಾಮಣ್ಣ ಬೇಟಿ ನೀಡಿದರು. ಈ ಹಿನ್ನಲೆಯಲ್ಲಿ ಪೋಷಕ ಚೌಡಪ್ಪನ ಮೇಲೆ ಮಾಸ್ತಿ ಪೋಲಿಸ್ ಠಾಣೆ ಕೇಸು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಚಿತ್ರ : ಹಲ್ಲೆಗೆ ಒಳಗಾಗಿರುವ ಮಾಲುರು ತಾಲ್ಲೂಕಿನ ಟೇಕಲ್ನ ಕ್ಷೇತ್ರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande