ಸೆ.17 ರಂದು ಕುಕನೂರು ಐಟಿಐ ನಲ್ಲಿ ಅಪ್ರೆಂಟಿಷಿಪ್ ಕ್ಯಾಂಪಸ್ ಸಂದರ್ಶನ
ಕೊಪ್ಪಳ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲ್ಲೂಕಿನ ಬೇವಿನಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಕಂಪನಿಯಿಂದ ಅಪ್ರೆಂಟಿಷಿಪ್ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಸೆ.17 ರಂದು ಕುಕನೂರು ಐಟಿಐ ನಲ್ಲಿ ಅಪ್ರೆಂಟಿಷಿಪ್ ಕ್ಯಾಂಪಸ್ ಸಂದರ್ಶನ


ಕೊಪ್ಪಳ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲ್ಲೂಕಿನ ಬೇವಿನಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಕಂಪನಿಯಿಂದ ಅಪ್ರೆಂಟಿಷಿಪ್ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಡೀಸೆಲ್ ಮೆಕ್ಯಾನಿಕ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಗಳಲ್ಲಿ ಉತ್ತೀರ್ಣಗೊಂಡ 18 ರಿಂದ 24 ವರ್ಷದ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಬಹುದು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.13,000/- ಗಳ ಸ್ಟೈಫಂಡ್ ನೀಡಲಾಗುವುದು.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ಪ್ರಮಾಣಪತ್ರಗಳು, ಅಂಕಪಟ್ಟಿಗಳ ಮೂಲ ಪ್ರತಿಗಳು ಹಾಗೂ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಆಧಾರ್ ಹಾಗೂ ಪ್ಯಾನ್ ಕಾರ್ಡ್‍ಗಳ ಜೆರಾಕ್ಸ್ ಪ್ರತಿಗಳು, ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರಗಳು ಮತ್ತು ಬಯೋಡೆಟಾದೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9964247098, 8618952961 ಮತ್ತು 9945789400 ಗೆ ಸಂಪರ್ಕಿಸಬಹುದು ಎಂದು ಕುಕನೂರು ಐಟಿಐ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande