ಗದಗ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಶಿವರಾಜ ಹನಮಂತಪ್ಪತ ಮೂಲಿಮನಿ (19) ಎಂಬ ಯುವಕ ಕಳೆದ ಒಂದು ತಿಂಗಳಿನಿಂದ ಕಾಣೆಯಾಗಿರುವ ಬಗ್ಗೆ ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ವಿದ್ಯಾರ್ಥಿಯಾಗಿರುವ ಶಿವರಾಜನು ಆಗಸ್ಟ್ 12, 2025 ರಂದು ಸಂಜೆ 4.30ರ ಹೊತ್ತಿಗೆ ಅಬ್ಬಿಗೇರಿಯಲ್ಲಿರುವ ಮನೆಯಿಂದ ಹೊರಟು ಹೋಗಿ ಹಿಂತಿರುಗಲೇ ಇಲ್ಲ. ಹುಡುಕಾಡಿದರೂ ಸುಳಿವು ಸಿಗದ ಹಿನ್ನೆಲೆ, ಕುಟುಂಬಸ್ಥರು ನರೇಗಲ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಶಿವರಾಜನ ಲಕ್ಷಣಗಳು ಹೀಗಿವೆ: ಎತ್ತರ ಸುಮಾರು 5 ಅಡಿ 4 ಇಂಚು, ಸಾಧಾರಣ ಮೈಕಟ್ಟು, ಸಾದಗಪ್ಪು ಮೈಬಣ್ಣ, ಕೋಲುಮುಖ, ಕಪ್ಪು ಕೂದಲು, ಚೂಪಾದ ಮೂಗು. ಕನ್ನಡ ಮಾತನಾಡುತ್ತಾನೆ. ಕಾಣೆಯಾಗುವಾಗ ಬಿಳಿ ಬಣ್ಣದ ಚುಕ್ಕಿಗಳಿರುವ ಪೂರ್ಣ ತೋಳಿನ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದ.
ಯುವಕನ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ನರೇಗಲ್ಲ ಪೊಲೀಸ್ ಠಾಣೆ (08381-268233 / 9480804454), ಗದಗ ಕಂಟ್ರೋಲ್ ರೂಮ್ (9480804400), ನರಗುಂದ ಡಿವಿಷನ್ ಡಿಎಸ್ಪಿ (9480804408) ಅಥವಾ ರೋಣ ಸಿಪಿಐ (9480804434) ಅವರನ್ನು ಸಂಪರ್ಕಿಸಲು ಪೊಲೀಸರು ವಿನಂತಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ವ್ಹಿ. ನಾಗರಾಳ ತನಿಖೆ ಮುಂದುವರೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP