ಗದಗ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಆಡಳಿತ ಗದಗ ಜಿಲ್ಲಾ ಪಂಚಾಯತ್ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ ಗದಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಗದಗ ಹಾಗೂ ಸಂಕನೂರು ಶುಶ್ರೂಷ ವಿಜ್ಞಾನ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿತು.
ಗದಗ ನಗರದ ಸಂಕನೂರು ಶುಶ್ರೂಷ ವಿಜ್ಞಾನ ಸಂಸ್ಥೆ ಗದಗದಲ್ಲಿ ಶ್ರೀಮತಿ ರಶ್ಮಿ ಪಾಟೀಲ್, ಸಹ ಪ್ರಾಧ್ಯಾಪಕರು ಶುಶ್ರೂಷ ವಿಜ್ಞಾನ ಸಂಸ್ಥೆ ಗದಗ ಇವರ ಅಧ್ಯಕ್ಷತೆಯಲ್ಲಿ ವಿಶ್ವ ಸ್ಕಿಝೋಫ್ರೀನಿಯಾ ದಿನಾಚರಣೆ-2025 ಅಂಗವಾಗಿ ಜಾಗೃತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಡಾ ರಾಜೇಂದ್ರ.ಸಿ. ಬಸರೀಗಿಡದ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳು ಹಾಗೂ ಜಿಲ್ಲಾ ಮಾನಸಿಕ ಆರೊಗ್ಯ ಕಾರ್ಯಕ್ರಮ ಅಧಿಕಾರಿಗಳು, ಗದಗ ಇವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ, ಸ್ಕಿಝೋಫ್ರೀನಿಯಾದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಆರೈಕೆ ಮನೋ ಸಾಮಾಜಿಕ ಬೆಂಬಲ ಚಿಕಿತ್ಸೆ ನೀಡಿದಲ್ಲಿ ಅವರು ಸಾಮಾನ್ಯರಂತೆ ಜೀವನ ನಡೆಸಬಹುದು ಹಾಗೂ ಸ್ಕಿಝೋಫ್ರಿನಿಯಾ ಕಾಯಿಲೆಗೆ ಸಂಬಂಧಿಸಿದ, ಸಮಾಜದಲ್ಲಿರುವ ಮೂಢಂನಂಬಿಕೆ ಹಾಗೂ ತಾರತಮ್ಯಗಳನ್ನು ಎಲ್ಲರೂ ಒಗ್ಗೂಡಿ ಹೋಗಲಾಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ್ದ ಶ್ರೀಮತಿ ರಶ್ಮಿ ಪಾಟೀಲ್ ಸಹ ಪ್ರಾಧ್ಯಾಪಕರು ಶುಶ್ರೂಷ ವಿಜ್ಞಾನ ಸಂಸ್ಥೆ, ಗದಗ ಇವರು ಮಾತನಾಡಿ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಧನ್ಯವಾದವನ್ನು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಸ್ಕಿಝೋಫ್ರೀನಿಯಾ ಖಾಯಿಲೆ ಮತ್ತು ಚಿಕಿತ್ಸೆ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ತಿಳಿಸಿದರು.
ಡಾ ಪ್ರೀತ್ ಖೋನಾ, ತಾಲೂಕಾ ಆರೋಗ್ಯ ಅಧಿಕಾರಿಗಳು, ಗದಗ, ಮಾತನಾಡಿ ಸ್ಕಿಝೋಫ್ರೀನಿಯಾ ಕಾಯಿಲೆ ಕುರಿತು ಮಾಹಿತಿ ನೀಡಿ ಚಿಕಿತ್ಸೆಗಳ ಬಗ್ಗೆ ವಿವರಿಸಿದರು. ಮಾನಸಿಕ ಅಸ್ವಸ್ಥರಿಗೆ ಸಮಾಜದ ಕಾಳಜಿ ಅತ್ಯವಶ್ಯವಾಗಿದೆ ಎಂದು ತಿಳಿಸಿ ಭಾರತ ಸರ್ಕಾರವು ಪ್ರಾರಂಭಿಸಿರುವ ಟೆಲಿ-ಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಸೇವೆ ಪಡೆಯಬಹುದು ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಮಾನಸಿಕ ಆರೊಗ್ಯ ಅತ್ಯವಶ್ಯಕವಿದ್ದು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜಾಗೃತಿ ಮೂಡಿಸುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ವಿದ್ಯಾಬ್ಯಾಸದ ಜೊತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೂ ಸಮಾಜವು ಮಾನಸಿಕ ಕಾಯಿಲೆ ಇದ್ದ ವ್ಯಕ್ತಿಗೆ ಕಾಳಜಿ ವಹಿಸಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕೆಂದು ಕರೆ ನೀಡಿ ಉಪನ್ಯಾಸ ಮಾಡಿದರು.
ಅತಿಥಿಯಾಗಿ ರೂಪಸೇನ ಚವ್ಹಾಣ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಗದಗ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಿಸಿದರು ನವೀನಪೌಲ ಗೌಡರ ಶಿಕ್ಷಕರು ಸ್ವಾಗತಿಸಿದರು ಶ್ರೀಮತಿ ರಾಜೇಶ್ವರಿ .ಟಿ. ಶಿಕ್ಷಕಿ ವಂದನಾರ್ಪಣೆ ಮಾಡಿದರು ಕು.ಮಧು ರೋಣದ ಶಿಕ್ಷಕಿಯರು ವಂದಿಸಿದರು, ಕಾರ್ಯಕ್ರಮದಲ್ಲಿ ಸಂಕನೂರು ಶುಶ್ರೂಷ ವಿಜ್ಞಾನ ಸಂಸ್ಥೆ, ಗದಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / lalita MP