ವಾಷಿಂಗ್ಟನ್, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಬಲಪಂಥೀಯ ಯುವ ನಾಯಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಚಾರ್ಲಿ ಕಿರ್ಕ್ (31) ಹತ್ಯೆ ದೇಶವನ್ನು ಬೆಚ್ಚಿಬೀಳಿಸಿದೆ.
ಬುಧವಾರ ಮಧ್ಯಾಹ್ನ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಟರ್ನಿಂಗ್ ಪಾಯಿಂಟ್ ಯುಎಸ್ಎ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಪರಿಚಿತ ಬಂದೂಕುದಾರಿಯೊಬ್ಬ ಗುಂಡು ಹಾರಿಸಿದ್ದು, ಗಂಭೀರ ಗಾಯಗೊಂಡ ಕಿರ್ಕ್ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ.
ಘಟನೆ ನಂತರ, ಶ್ವೇತಭವನದ ಮೇಲಿರುವ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಯಿತು. ಅಧ್ಯಕ್ಷ ಟ್ರಂಪ್ ತಮ್ಮ ಪ್ರತಿಕ್ರಿಯೆಯಲ್ಲಿ, “ಅಮೆರಿಕದ ಯುವಕರ ಹೃದಯಗಳನ್ನು ಚಾರ್ಲಿಗಿಂತ ಚೆನ್ನಾಗಿ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಟರ್ನಿಂಗ್ ಪಾಯಿಂಟ್ ಯುಎಸ್ಎ ಸಹ-ಸ್ಥಾಪಕನಾಗಿದ್ದ ಕಿರ್ಕ್, ಬಲಪಂಥೀಯ ವಲಯದಲ್ಲಿ ಟ್ರಂಪ್ ಆಪ್ತರಾಗಿ ಪ್ರಖ್ಯಾತರಾಗಿದ್ದರು. ಅವರ ಸಾವಿನಿಂದ ಅಮೆರಿಕಾದಲ್ಲಿ ಬಂದೂಕು ನಿಯಂತ್ರಣ ಕಾನೂನುಗಳ ಕುರಿತು ಮತ್ತೊಮ್ಮೆ ತೀವ್ರ ಚರ್ಚೆ ಆರಂಭವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa