ದುಲ್ಕರ್ ಸಲ್ಮಾನ್ 41ನೇ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ 41ನೇ ಚಿತ್ರಕ್ಕೆ ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಅಧಿಕೃತವಾಗಿ ಘೋಷಣೆಗೊಂಡಿದೆ. ಈ ಚಿತ್ರವನ್ನು ರವಿ ನೆಲಕುಡಿಟಿ ನಿರ್ದೇಶಿಸಲಿದ್ದಾರೆ. ಎಸ್‌ಎಲ್‌ವಿ ಸಿ
Pooja


ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ 41ನೇ ಚಿತ್ರಕ್ಕೆ ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಅಧಿಕೃತವಾಗಿ ಘೋಷಣೆಗೊಂಡಿದೆ.

ಈ ಚಿತ್ರವನ್ನು ರವಿ ನೆಲಕುಡಿಟಿ ನಿರ್ದೇಶಿಸಲಿದ್ದಾರೆ. ಎಸ್‌ಎಲ್‌ವಿ ಸಿನೆಮಾಸ್ ಅಡಿ ಚೇರುಕುಡಿ ಸುಧಾಕರ್ ನಿರ್ಮಾಣ ಮಾಡಲಿರುವ ಈ ಬೃಹತ್‌ಬಜೆಟ್ ಸಿನಿಮಾಗೆ ಜಿ.ವಿ. ಪ್ರಕಾಶ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅನಯ್ ಗೋಸ್ವಾಮಿ ಛಾಯಾಗ್ರಹಣ ಹಾಗೂ ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ವಹಿಸಿಕೊಂಡಿದ್ದಾರೆ.

ದುಲ್ಕರ್ ಸಲ್ಮಾನ್ ಈಗಾಗಲೇ ತನ್ನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿರುವ ನಟ. ಈ ಬಾರಿ ಪೂಜಾ ಹೆಗ್ಡೆಯ ಜೋಡಿ ಅವರೊಂದಿಗೆ ಕಾಣಿಸಿಕೊಳ್ಳುವುದರಿಂದ ಚಿತ್ರಕ್ಕೆ ಹೆಚ್ಚಿನ ಆಕರ್ಷಣೆ ಸಿಗಲಿದೆ.

ಚಿತ್ರದ ಶೀರ್ಷಿಕೆ ಹಾಗೂ ಕಥೆಯ ಕುರಿತ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ನಿರ್ಮಾಪಕರು ಘೋಷಿಸುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande