ಕರಕುಶಲ ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ
ಗದಗ, 11 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಭಾರತ ಸರಕಾರದ ಮಿನಿಸ್ಟರಿ ಆಫ್ ಟೆಕ್ಸಟೈಲ್ ಇವರ ಸಹಯೋಗದಲ್ಲಿ ಬಿಎ/ಬಿಕಾಂ/ಬಿಎಸ್ಸಿ ವಿದ್ಯಾರ್ಥಿಗಳಿಗೆ ಕರಕುಶಲ ಪ್
ಪೋಟೋ


ಗದಗ, 11 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಭಾರತ ಸರಕಾರದ ಮಿನಿಸ್ಟರಿ ಆಫ್ ಟೆಕ್ಸಟೈಲ್ ಇವರ ಸಹಯೋಗದಲ್ಲಿ ಬಿಎ/ಬಿಕಾಂ/ಬಿಎಸ್ಸಿ ವಿದ್ಯಾರ್ಥಿಗಳಿಗೆ ಕರಕುಶಲ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ನಿರ್ದೇಶಕರಾದ ಶ್ರಿಮತಿ ರಾಜೇಶ್ವರಿ ಕೆ.ಎಂ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು ಮತ್ತು ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರಕುಶಲ ಕೈಗಾರಿಕೆ ಕುರಿತು ಇರುವ ಪಶ್ನೆಗಳಿಗೆ ಉತ್ತರ ಬರೆಯಲು ಅನುಕೂಲವಾಗುತ್ತದೆಯಲ್ಲದೆ ಭವಿಷ್ಯದಲ್ಲಿ ಸ್ವಯಂ ಉದ್ಯೋಗ ಮಾಡಲು ಸಕಾರಾತ್ಮಕ ಜ್ಞಾನ ದೊರೆಯುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ ಎಂ. ಎಂ. ಬುರುಡಿಯವರು ಮಾತನಾಡಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರೆ ಕಲೆಯಿಂದ ಬೆಲೆ ಎನ್ನುವ ಹಾಗೆ ಕೇವಲ ನಮ್ಮ ಜ್ಞಾನ ಮಾತ್ರವಲ್ಲದೆ ವ್ಯಕ್ತಿತ್ವ ಹಾಗೂ ಜೀವನ ಎರಡೂ ವಿಕಾಸಗೋಳ್ಳುತ್ತವೆ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೋಳ್ಳಬೇಕೆಂದು ತಿಳಿಸಿದರು.

ವೇದಿಕೆಯ ಮೇಲೆ ಶ್ರೀಮತಿ ಪಾರ್ವತಿ ತಳವಾರ, ಶ್ರೀಮತಿ ಸುಮಾ ಕೆ ಗುಡದಳ್ಳಿ, ಮೈಲಾರಪ್ಪ ಆರ್ ಗಂಗಾಧರ, ಶಿವರಾಮ ನಾಯಕ, ಪೃತ್ವಿರಾಜ ವಾಲ್ಮಿಕಿ ಮತ್ತು ಸಂತೋಷ ನಾಯಕ ಇವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande