ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದೇಶೀಯ ಷೇರು ಮಾರುಕಟ್ಟೆ ಇಂದು ಬಲದಿಂದ ಆರಂಭಗೊಂಡಿದ್ದು, ಖರೀದಿಯ ಒತ್ತಡದಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಲ್ಲಿವೆ. ಬೆಳಿಗ್ಗೆ 10:15ಕ್ಕೆ ಸೆನ್ಸೆಕ್ಸ್ 421.84 ಅಂಕ ಏರಿ 81,523.16 ಅಂಕಗಳಲ್ಲಿ ಹಾಗೂ ನಿಫ್ಟಿ 136.50 ಅಂಕ ಏರಿ 25,005.10 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.
ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಟಿಸಿಎಸ್, ಜಿಯೋ ಫೈನಾನ್ಷಿಯಲ್, ಎಸ್‌ಬಿಐ ಲೈಫ್ ಷೇರುಗಳು ಲಾಭ ಕಂಡರೆ, ಮಾರುತಿ, ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾ, ಟಾಟಾ ಮೋಟಾರ್ಸ್ ಷೇರುಗಳಲ್ಲಿ ಕುಸಿತ ಕಂಡಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa