ಅಬುಧಾಬಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಏಷ್ಯಾ ಕಪ್ 2025 ರ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನವು ಹಾಂಗ್ ಕಾಂಗ್ ಮೇಲೆ 94 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಿ20 ಏಷ್ಯಾ ಕಪ್ ಇತಿಹಾಸದಲ್ಲಿಯೇ ಇದು ಅತಿದೊಡ್ಡ ರನ್ ಅಂತರದ ಜಯವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 188/5 ರನ್ ಗಳಿಸಿತು. ಸಾದಿಖುಲ್ಲಾ ಅಟಲ್ 73, ಅಜ್ಮತುಲ್ಲಾ ಉಮರ್‌ಜೈ 53 (20 ಎಸೆತಗಳಲ್ಲಿ ಅರ್ಧಶತಕ), ಮೊಹಮ್ಮದ್ ನಬಿ 33 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಹಾಂಗ್ ಕಾಂಗ್ 94 ರನ್‌ಗಳಿಗೆ ಸರ್ವ ಪತನ ಕಂಡಿತು. ಬಾಬರ್ ಹಯಾತ್ 39, ನಾಯಕ ಯಾಸಿಮ್ ಮುರ್ತಾಜಾ 16 ರನ್ ಗಳಿಸಿದರು.
ಫಜಲ್ಹಕ್ ಫಾರೂಕಿ, ಗುಲ್ಬಾದಿನ್ ನೈಬ್ ತಲಾ 2 ವಿಕೆಟ್ ಪಡೆದರೆ, ರಶೀದ್ ಖಾನ್, ಅಜ್ಮತುಲ್ಲಾ ಉಮರ್‌ಜೈ ಮತ್ತು ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa