ಯೋಧರಿಗಾಗಿ ರಾಖಿ ತಯಾರಿಸಿ ಕಳುಹಿಸಿದ ವಿಶೇಷ ಚೇತನ ಮಕ್ಕಳು
ವಿಜಯಪುರ, 08 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರದಲ್ಲಿ ವಿಶೇಷ ಚೇತನ ಮಕ್ಕಳು ಈ ಬಾರಿಯ ರಕ್ಷಾ ಬಂಧನದ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸೋಕೆ ಮುಂದಾಗಿದ್ದಾರೆ. ವಿಜಯಪುರದ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಸಂಸ್ಥೆ ಮಕ್ಕಳು ರಾಖಿ ತಯಾರಿಸಿದ್ದಾರೆ. ರಕ್ಷಾ ಬಂಧನದ ಹಬ್ಬದಲ್ಲಿ ನಮ
ರಾಖಿ


ವಿಜಯಪುರ, 08 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರದಲ್ಲಿ ವಿಶೇಷ ಚೇತನ ಮಕ್ಕಳು ಈ ಬಾರಿಯ ರಕ್ಷಾ ಬಂಧನದ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸೋಕೆ ಮುಂದಾಗಿದ್ದಾರೆ.

ವಿಜಯಪುರದ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಸಂಸ್ಥೆ ಮಕ್ಕಳು ರಾಖಿ ತಯಾರಿಸಿದ್ದಾರೆ. ರಕ್ಷಾ ಬಂಧನದ ಹಬ್ಬದಲ್ಲಿ ನಮ್ಮ ದೇಶದ ಗಡಿ ಕಾಯುವ ಯೋಧರಿಗೆ ರಾಖಿಯನ್ನು ಕಳುಹಿಸಿ ಕೊಡುವ ನಿಟ್ಟಿನಲ್ಲಿ ಮುಂದಾಗಿದ್ದು, 500 ರಾಖಿ ಜೊತೆಗೆ ಗ್ರೀಟಿಂಗ್ಸ್ ತಯಾರಿಸಿ ನಮ್ಮನ್ನು ರಕ್ಷಿಸುವ ಯೋಧರಿಗೆ 200 ರಕ್ಷಾ ಬಂಧನದ ರಾಖಿಗಳನ್ನು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಪಂಜಾಬ್ ನಲ್ಲಿನ ಆರ್ಮಿ ಬಟಾಲಿಯನ್ ಗೆ ಕಳುಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande