ವಿಜಯಪುರ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾತ್ರಿ ವೇಳೆ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರನ್ನು ಕರೆದೊಯ್ದು ಹಾಸ್ಟೆಲ್ ವಾರ್ಡನ್ ಪಾರ್ಟಿ, ಡಾನ್ಸ್ ಮಾಡಿರುವ ಘಟನೆ ನಡೆದಿದೆ.
ವಿಜಯಪುರ ನಗರದ ಮಾರುತಿ ಕಾಲೋನಿಯಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯ ವಸತಿ ನಿಲಯದ ವಾರ್ಡನ್‌ನಿಂದ ಪಾರ್ಟಿ ಆಯೋಜನೆ ಮಾಡಲಾಗಿದೆ.
ಕುಕ್ ಬರ್ಥಡೇ ಹಿನ್ನೆಲೆ ಹಾಸ್ಟೇಲ್ ಹುಡುಗಿಯರನ್ನು ರಾತ್ರಿ ವೇಳೆ ಹೊಟೇಲ್ ಗೆ ಕರೆದೊಯ್ದು ವಾರ್ಡನ್ ಶಕುಂತಲಾ ರಜಪೂತ ಪಾರ್ಟಿ, ಡ್ಯಾನ್ಸ್ ಮಾಡಿದ್ದಾರೆ.
ಇನ್ನು ಹಾಸ್ಟೆಲ್ ಕುಕ್ ರಿಜ್ವಾನ್ ಮುಲ್ಲಾ ಭರ್ಜರಿ ಬರ್ಥಡೇ ಪಾರ್ಟಿ ಮಾಡಲಾಗಿದೆ. ಇಂಡಿ ಹಾಸ್ಟೇಲ್‌ನಲ್ಲಿದ್ದಾಗ ಇದೆ ರೀತಿ ಪಾರ್ಟಿ ಮಾಡಿ ರಿಜ್ವಾನ್‌ಬೇಗಂ ಮುಲ್ಲಾ ಅಮಾನತು ಆಗಿದ್ದರು.
ಸಂಜೆ ಹಾಸ್ಟೇಲ್ ವಿದ್ಯಾರ್ಥಿನಿಯರನ್ನು. ಹೊರಗೆ ಕಳುಹಿಸುವಂತಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಹಾಸ್ಟೇಲ್ ವಾರ್ಡನ್ ಹಾಗೂ ಕುಕ್ ವರ್ತಿಸಿದ್ದಾರೆ. ಹಾಸ್ಟೇಲ್ ವಾರ್ಡನ್ ಹಾಗೂ ಕುಕ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande