ಯೂರಿಯಾ ಗೊಬ್ಬರಕ್ಕಾಗಿ ಚಪ್ಪಲಿ ಸರತಿಸಾಲಿನಲ್ಲಿ ; ನಿಲ್ಲದ ಗೋಳಾಟ
ಗದಗ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಇನ್ನೂ ಮುಕ್ತವಾಗಿಲ್ಲ. ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಯಲ್ಲಿಯೇ ಉತ್ಪನ್ನ ಮಾರಾಟ ಸಹಕಾರಿ ಸಂಘದ ಎದುರು ರೈತರು ಚಪ್ಪಲಿ, ಚೀಲ ಇಟ್ಟು ಸರತಿ ಸಾಲಿನಲ್ಲಿ ನಿಂತಿರುವುದು ನಿತ್ಯದ ದೃಶ್ಯವಾಗಿದೆ
ಪೋಟೋ


ಗದಗ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಇನ್ನೂ ಮುಕ್ತವಾಗಿಲ್ಲ. ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಯಲ್ಲಿಯೇ ಉತ್ಪನ್ನ ಮಾರಾಟ ಸಹಕಾರಿ ಸಂಘದ ಎದುರು ರೈತರು ಚಪ್ಪಲಿ, ಚೀಲ ಇಟ್ಟು ಸರತಿ ಸಾಲಿನಲ್ಲಿ ನಿಂತಿರುವುದು ನಿತ್ಯದ ದೃಶ್ಯವಾಗಿದೆ. ಸರಬರಾಜಿನ ಕೊರತೆಯಿಂದಾಗಿ ಒಂದೇ ಚೀಲ ಗೊಬ್ಬರ ವಿತರಣೆಯಾಗುತ್ತಿರುವ ಈ ಸ್ಥಿತಿಗೆ ರೈತರು ಕಂಗಾಲಾಗಿದ್ದಾರೆ.

ಮಳೆಯೊಂದಿಗೆ ಹಲವೆಡೆ ಜೋಳ, ಮೆಕ್ಕೆಜೋಳ, ಸೊಯಾಬಿನ್ ಹೂರಣ ಆರಂಭವಾಗಿದೆ. ಈ ಸಮಯದಲ್ಲಿ ಯೂರಿಯಾ ಅತ್ಯಂತ ಅವಶ್ಯಕ. ಆದರೆ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದರಿಂದ ಲಕ್ಷ್ಮೇಶ್ವರದ ಮಾತ್ರವಲ್ಲದೆ, ಹರದಗಟ್ಟಿ, ದೊಡ್ಡೂರು, ಬಟ್ಟೂರು, ಮುನಿಯನ ತಾಂಡಾ, ರಾಮಗೇರಿ ಮುಂತಾದ ಗ್ರಾಮಗಳ ರೈತರು ಪಟ್ಟಣಕ್ಕೆ ಆಗಮಿಸಿ, ಗೊಬ್ಬರಕ್ಕಾಗಿ ಗಂಟೆಗಳ ಕಾಲ ಕಾಯುತ್ತಿದ್ದಾರೆ.

ಚಪ್ಪಲಿ ಕ್ಯೂ –ಜಾಗ ಉಳಿಸಿಕೊಳ್ಳಲು ಅನಿವಾರ್ಯ ಆಯ್ದ ಮಾರ್ಗ ಸಾಲು ತಪ್ಪದಂತೆ, ಹತ್ತಾರು ರೈತರು ತಮ್ಮ ಚಪ್ಪಲಿ, ಚೀಲಗಳನ್ನು ಸಾಲಿನಲ್ಲಿ ಇಟ್ಟು ಜಾಗ ಕಾಯಿಸುತ್ತಿದ್ದಾರೆ. ಕೆಲವರು ತಮ್ಮ ಪತ್ನಿ ಅಥವಾ ಮಗನನ್ನು ಜಾಗದಲ್ಲಿಟ್ಟು ತಾವೇ ರೈತ ಕೆಲಸದ ಕಡೆ ಹೋಗುವುದು ದಿನಚರಿ ಆಗಿಬಿಟ್ಟಿದೆ.

ಇದು ರೈತರನ್ನು ನಿರ್ಲಜ್ಜವಾಗಿ ನಿರೀಕ್ಷಿಸುವಂತೆ ಮಾಡುತ್ತಿರುವ ವ್ಯವಸ್ಥೆ ಸ್ಥಳೀಯ ರೈತರು ಆಕ್ರೋಶ ಹಗಲು ರಾತ್ರಿ ಸಾಲಿನಲ್ಲಿ ನಿಂತು, ಅದೂ ಒಂದೇ ಚೀಲ ಗೊಬ್ಬರ ಸಿಕ್ಕರೆ ಅದಕ್ಕೇ ದೇವ್ರು ಕೃಪೆ ಅನ್ನೋ ಸ್ಥಿತಿ ಇದೆ. ಸರ್ಕಾರ ಗೊಬ್ಬರ ಪೂರೈಕೆಯಲ್ಲಿ ಸ್ಪಷ್ಟತೆ ತರಬೇಕು ಎಂದು ರಾಮಗೇರಿ ಗ್ರಾಮದ ರೈತ ಶಿವಣ್ಣ ಒತ್ತಾಯಿಸಿದರು.

ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಿಲ್ಲ

ಈ ಕುರಿತಂತೆ ಸಂಬಂಧಿತ ಸಹಕಾರ ಸಂಘ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ ಸ್ಥಳೀಯವಾಗಿಯೇ ಗೊಬ್ಬರ ಸ್ಟಾಕ್ ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ವಿತರಣೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande