ಸ್ಕೂಟಿ-ಕಾರ್ ಅಪಘಾತ : ಖಾಸಗಿ ಶಾಲಾ ಶಿಕ್ಷಕಿ ಉಷಾರಾಣಿ ಸಾವು
ಕೊಪ್ಪಳ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಸಂಜೆ 6 ಗಂಟೆ ಸುಮಾರಿಗೆ ಸ್ಕೂಟಿಗೆ ಕಾರ್ ಡಿಕ್ಕಿ ಹೊಡೆದ ಕಾರಣ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನಗರದ ಕಿನ್ನಾಳ ರಸ್ತೆಯಲ್ಲಿ ನಡೆದಿದೆ. ಎಸ್ ಎಫ್ ಐ ಶಿಕ್ಷಕಿ ಉಷಾ ರಾಣಿ ಬಡಿಗೇರ್ ಶಾಲೆ ಮುಗಿಸಿಕೊಂಡು ಮನೆಗೆ ಹೋಗ
ಸ್ಕೂಟ, ಕಾರ್ ಅಪಘಾತ: ಖಾಸಗಿ  ಶಾಲಾ ಶಿಕ್ಷಕಿ ಉಷಾರಾಣಿ ಸಾವು


ಕೊಪ್ಪಳ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಸಂಜೆ 6 ಗಂಟೆ ಸುಮಾರಿಗೆ ಸ್ಕೂಟಿಗೆ ಕಾರ್ ಡಿಕ್ಕಿ ಹೊಡೆದ ಕಾರಣ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನಗರದ ಕಿನ್ನಾಳ ರಸ್ತೆಯಲ್ಲಿ ನಡೆದಿದೆ.

ಎಸ್ ಎಫ್ ಐ ಶಿಕ್ಷಕಿ ಉಷಾ ರಾಣಿ ಬಡಿಗೇರ್ ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಖಾಸಗಿ ಶಾಲೆಯ ಶಿಕ್ಷಕಿ ಸ್ಕೂಟಿಗೆ, ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಶಿಕ್ಷಕಿ ಮೃತಪಟ್ಟಿದ್ದು ಕಾರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಶಿಕ್ಷಕಿಯು ಶಾಲೆಯಿಂದ ಮಗಳೊಂದಿಗೆ ಮನೆಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಪ್ಪಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande