ನವದೆಹಲಿ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಚಿನಿವಾರ ಮಾರುಕಟ್ಟೆಯಲ್ಲಿ ಸತತ ಮೂರನೇ ದಿನವೂ ಏರಿಕೆಯಾಗಿದೆ.
ಚಿನ್ನದ ಬೆಲೆ 10 ಗ್ರಾಂಗೆ ₹100 ರಿಂದ ₹110 ರವರೆಗೆ ಹೆಚ್ಚಳವಾಗಿದ್ದು, ಬೆಳ್ಳಿಯ ದರವು ಪ್ರತಿ ಕಿಲೋಗ್ರಾಂಗೆ ₹1,000 ರೂಪಾಯಿ ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರಗಳು ಹೀಗಿವೆ:
24 ಕ್ಯಾರೆಟ್ ಚಿನ್ನ (10 ಗ್ರಾಂ):
ದೆಹಲಿ, ಲಕ್ನೋ, ಜೈಪುರ: ₹1,02,490
ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಭುವನೇಶ್ವರ: ₹1,02,340, ಅಹಮದಾಬಾದ್, ಪಾಟ್ನಾದಲ್ಲಿ ₹1,02,390
22 ಕ್ಯಾರೆಟ್ ಚಿನ್ನ (10 ಗ್ರಾಂ): ದೆಹಲಿ, ಲಕ್ನೋ, ಜೈಪುರ ₹93,960, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಭುವನೇಶ್ವರ: ₹93,810, ಅಹಮದಾಬಾದ್, ಪಾಟ್ನಾ ₹93,860.
ಬೆಳ್ಳಿ 1 ಕಿಲೋಗ್ರಾಂ ದೆಹಲಿ ಮಾರುಕಟ್ಟೆಯಲ್ಲಿ ₹1,16,100 ರೂ.ಗಳಲ್ಲಿ ಮಾರಾಟವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa