ಕುಲ್ಗಾಮ್ ಅಖಾಲ್ ಅರಣ್ಯದಲ್ಲಿ ಮುಂದುವರೆದ ಕಾರ್ಯಾಚರಣೆ
ಕುಲ್ಗಾಮ್, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧದ ಭದ್ರತಾ ಪಡೆಗಳ ಕಾರ್ಯಾಚರಣೆ ಗುರುವಾರ 7ನೇ ದಿನವೂ ಮುಂದುವರೆದಿದೆ. ಕಳೆದ ವಾರ ಭಯೋತ್ಪಾದಕರ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ನಂತರ ಈ ಶೋಧ ಕಾರ್ಯಾಚರಣೆ
ಕುಲ್ಗಾಮ್ ಅಖಾಲ್ ಅರಣ್ಯದಲ್ಲಿ ಮುಂದುವರೆದ ಕಾರ್ಯಾಚರಣೆ


ಕುಲ್ಗಾಮ್, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧದ ಭದ್ರತಾ ಪಡೆಗಳ ಕಾರ್ಯಾಚರಣೆ ಗುರುವಾರ 7ನೇ ದಿನವೂ ಮುಂದುವರೆದಿದೆ.

ಕಳೆದ ವಾರ ಭಯೋತ್ಪಾದಕರ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ನಂತರ ಈ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಆರಂಭದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನು ಹತನಾಗಿದ್ದಾನೆ ಮತ್ತು ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ರಾತ್ರಿಯವರೆಗೂ ಗುಂಡಿನ ಚಕಮಕಿ ಮತ್ತು ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಕಾರ್ಯಾಚರಣೆ ಮುಂದುವರೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಆಪರೇಷನ್‌ ಅಖಾಲ್ ಕಳೆದ ದಶಕದಲ್ಲೇ ಉದ್ದವಾದ ಭದ್ರತಾ ಕಾರ್ಯಚಟುವಟಿಕೆಯಾಗಿ ಪರಿಗಣಿಸಲಾಗಿದೆ.

ಇನ್ನೊಂದೆಡೆ, ಉತ್ತರ ಕಮಾಂಡ್‌ನ ಲೆ. ಜನರಲ್ ಪ್ರತೀಕ್ ಶರ್ಮಾ ದೇವ್ಸರ್‌ಗೆ ಭೇಟಿ ನೀಡಿ ದಕ್ಷಿಣ ಕಾಶ್ಮೀರದ ಭದ್ರತಾ ಸ್ಥಿತಿ ಮತ್ತು ಕಾರ್ಯಾಚರಣಾ ಸನ್ನದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು. ಸೇನೆ ರುದ್ರ ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಪ್ಯಾರಾ ಕಮಾಂಡೋಗಳನ್ನು ಬಳಸಿ ಭಯೋತ್ಪಾದಕರ ಪರಾರಿಯ ಸಾಧ್ಯತೆ ತಡೆಗಟ್ಟುತ್ತಿದೆ. ಒಳನಾಡಿನ ಭದ್ರತಾ ಸ್ಥಿತಿಗತಿಗಳ ನಡುವೆ ನಿಯಂತ್ರಣ ರೇಖೆಯ ಭದ್ರತೆಗೆ ಸೇನೆಯು ಸಂಪೂರ್ಣ ಸಜ್ಜಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande