ನಾಲ್ಕು ಮರಿಗೆ ಜನ್ಮ ನೀಡಿದ ಆಡು : ಮಾಲೀಕ ಸಂತಸ
ವಿಜಯಪುರ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ರೈತ ಲಾಲ್‌ಸಾಹೇಬ್ ಹುಸೇನ್‌ಸಾಹೇಬ್ ಚಿತ್ತರಗಿಯವರ ಉಪನಾಳ ತೋಟದಲ್ಲಿನ ಆಡುವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಆಡು ಪ್ರತಿ ಸಲ ಮೂರಿ ಮರಿಗಳಿಗೆ ಜನ್ಮ ನೀಡುತ್ತಿತ್ತು. ಈ ಸಾರಿ ವಿಶೇಷವಾಗಿ ನಾಲ್ಕು ಮರಿಗಳಿಗೆ ಜನ್ಮ
ಆಡು ಮರಿ


ವಿಜಯಪುರ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ರೈತ ಲಾಲ್‌ಸಾಹೇಬ್ ಹುಸೇನ್‌ಸಾಹೇಬ್ ಚಿತ್ತರಗಿಯವರ ಉಪನಾಳ ತೋಟದಲ್ಲಿನ ಆಡುವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

ಆಡು ಪ್ರತಿ ಸಲ ಮೂರಿ ಮರಿಗಳಿಗೆ ಜನ್ಮ ನೀಡುತ್ತಿತ್ತು. ಈ ಸಾರಿ ವಿಶೇಷವಾಗಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ನಾಲ್ಕು ಮರಿಗಳು ಸಹ ಹೆಣ್ಣು ಮರಿಗಳಿವೆ. ನಾಲ್ಕು ಮರಿಗಳು ಆರೋಗ್ಯವಾಗಿ ಸದೃಢವಾಗಿವೆ ಎಂದು ಮಾಲೀಕ ಸಂತಸಗೊಂಡಿದ್ದಾರೆ.

ಈ ಕುರಿತು ರೈತ ಬಸನಗೌಡ ಪಾಟೀಲ ಮಾತನಾಡಿ, ರೈತರು ಇಂತಹ ತಳಿಗಳನ್ನು ಉಳಿಸಿಕೊಂಡು ತಳಿಯ ಅಭಿವೃದ್ಧಿ ಮಾಡಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande