ಆ. 10ರಂದು ಡಾ. ಮೋಹನ್ ಭಾಗವತ್ ಮಧ್ಯಪ್ರದೇಶ ಭೇಟಿ
ಭೋಪಾಲ್, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಆಗಷ್ಟ್ 10ರಂದು ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಭೇಟಿ ನೀಡಲಿದ್ದಾರೆ. ಮಾಲ್ವಾ ಪ್ರಾಂತ್ಯದ ಸಂಘಟನೆ ನೇತೃತ್ವದಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾಮಾಜಿಕ ಸಾಮರಸ್ಯ,
Bhagwat


ಭೋಪಾಲ್, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಆಗಷ್ಟ್ 10ರಂದು ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಭೇಟಿ ನೀಡಲಿದ್ದಾರೆ.

ಮಾಲ್ವಾ ಪ್ರಾಂತ್ಯದ ಸಂಘಟನೆ ನೇತೃತ್ವದಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾಮಾಜಿಕ ಸಾಮರಸ್ಯ, ಸೇವಾ ಚಟುವಟಿಕೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಂಘದ ಸಕ್ರಿಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆಗಷ್ಟ್ ೧೦ರಂದು ಸಾಮಾಜಿಕ ಸಾಮರಸ್ಯ ಸಭೆ ನಡೆಯಲಿದ್ದು, ಮಾಲ್ವಾ ಪ್ರಾಂತ್ಯದ 14 ಸರ್ಕಾರಿ ಜಿಲ್ಲೆಗಳು ಹಾಗೂ ಸಂಘ ರಾಷ್ಟ್ರದ 28 ಜಿಲ್ಲೆಗಳ ಹಿಂದೂ ಸಮಾಜದ ವಿವಿಧ ಜಾತಿ ಮತ್ತು ಸಮುದಾಯಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಭೆಯು ಸಮಾಜದಲ್ಲಿ ಸೌಹಾರ್ದತೆ ಮತ್ತು ಏಕತೆಯ ಸಂಕಲ್ಪವನ್ನು ಬಲಪಡಿಸುವ ಉದ್ದೇಶದಿಂದ ನಡೆಯಲಿದೆ.

ನಂತರ ಸಂಘದ ಸೇವಾ ಚಟುವಟಿಕೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದ್ದು, ಸೇವಾ ಕಾರ್ಯಕ್ಷೇತ್ರದಲ್ಲಿ ಸಂಘದ ಭೂಮಿಕೆ ಕುರಿತು ಚರ್ಚೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಘದ ಚಟುವಟಿಕೆಗಳ ವಿಸ್ತರಣೆಯ ಕುರಿತೂ ಚರ್ಚೆ ನಡೆಯಲಿದೆ.

ತೃತೀಯ ಕಾರ್ಯಕ್ರಮದಲ್ಲಿ, ಡಾ. ಭಾಗವತ್ ಅವರು 'ಮಾಧವ ಸೃಷ್ಟಿ ಆರೋಗ್ಯ ಕೇಂದ್ರ ಮತ್ತು ಕ್ಯಾನ್ಸರ್ ಆರೈಕೆ ಆಸ್ಪತ್ರೆ'ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಆಸ್ಪತ್ರೆ 96 ಕೋಟಿ ರೂಪಾಯಿ ವೆಚ್ಚದಲ್ಲಿ, ಸಾರ್ವಜನಿಕ ಪಾಲ್ಗೊಳ್ಳಿಕೆ ಹಾಗೂ ಉದ್ಯಮಗಳ ಸಿಎಸ್‌ಆರ್ ಅನುದಾನಗಳ ಮೂಲಕ ನಿರ್ಮಾಣಗೊಂಡಿದೆ. ಮೊದಲ ಹಂತದ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಕೀಮೋಥೆರಪಿ ಘಟಕ, ರೇಡಿಯೇಷನ್ ಚಿಕಿತ್ಸಾ ಘಟಕ ಹಾಗೂ ಅತಿ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ ಘಟಕಗಳನ್ನು ಸ್ಥಾಪಿಸುವ ಯೋಜನೆಯೂ ರೂಪಗೊಂಡಿದೆ.

ಈ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು 2021ರಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತ ಕಾರ್ಯಕಾರಿ ಸದಸ್ಯ ಸುರೇಶ್ ಸೋನಿ ಉದ್ಘಾಟಿಸಿದ್ದರು. ಈಗ ಅದು ಸಂಪೂರ್ಣ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿ ವಿಸ್ತರಿಸಲ್ಪಟ್ಟಿದೆ. ಇದರ ನಿರ್ವಹಣೆ ಶ್ರೀ ಗುರೂಜಿ ಸೇವಾ ನ್ಯಾಸ್ ಎಂಬ ಸಂಘದ ಸೇವಾ ವಿಭಾಗದ ಮೂಲಕ ನಡೆಯಲಿದೆ.

ಈ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಮಾಲ್ವಾ ಪ್ರಾಂತ ಸಂಘ ಚಾಲಕ ಪ್ರಕಾಶ್ ಶಾಸ್ತ್ರಿಯವರು ಡಾ. ಭಾಗವತ್ ಅವರ ಜೊತೆ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande