ಡೋಣಿ ನದಿ ಅಬ್ಬರ ಜೋರು ! ಸಾತಿಹಾಳ ಸೇತುವೆ ಮುಳುಗಡೆ
ವಿಜಯಪುರ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಅಬ್ಬರ ಜೋರಾಗಿದೆ. ಡೋಣಿ ನದಿಗೆ ಅಪಾರ ಪ್ರಮಾಣದ ಒಳ ಹರಿವು ದಾಖಲಾಗಿದೆ.‌ ಇಂದು ಮಳೆ ಕಡಿಮೆಯಾಗಿದ್ದರೂ ಡೋಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.‌ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿಯ ಸೇತುವೆ ಮುಳುಗಡೆ
ಡೋಣಿ


ವಿಜಯಪುರ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಅಬ್ಬರ ಜೋರಾಗಿದೆ. ಡೋಣಿ ನದಿಗೆ ಅಪಾರ ಪ್ರಮಾಣದ ಒಳ ಹರಿವು ದಾಖಲಾಗಿದೆ.‌ ಇಂದು ಮಳೆ ಕಡಿಮೆಯಾಗಿದ್ದರೂ ಡೋಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.‌ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿಯ ಸೇತುವೆ ಮುಳುಗಡೆ ಆಗಿದ್ದು,

ಡೋಣಿ ನದಿಗೆ ಕಟ್ಟಿರುವ ಸಾತಿಹಾಳ ಗ್ರಾಮದ ಬಳಿಯ ಸೇತುವೆ ಜಲಾವೃತಗೊಂಡಿದೆ.‌

ಸೇತುವೆ ಮುಳುಗಿದ ಪರಿಣಾಮ ಬಸವನಬಾಗೆವಾಡಿ ಸಾತಿಹಾಳ ದೇವರಹಿಪ್ಪರಗಿ ಸಂಪರ್ಕ ಕಡಿತವಾಗಿದೆ.

ಜಲಾವೃತವಾದ ಸೇತುವೆ ಮೇಲೆ ಅಪಾಯವನ್ನೂ ಲೆಕ್ಕಿಸದೇ ಜಲಾವೃತವಾದ ಸೇತುವೆಯಲ್ಲಿ ಜನತೆ ಓಡಾಟ ನಡೆಸಿದ್ದಾರೆ. ನೀರಲ್ಲಿ ಮುಳುಗಿರುವ ಸೇತುವೆ ಮೇಲೆ ಬೈಕ್ ಹಾಗೂ ಇತರೆ ವಾಹನಗಳ ಸಂಚಾರ ಮಾಡಲಾಗುತ್ತಿದೆ.‌ ಅದಕ್ಕಾಗಿ

ಸಾತಿಹಾಳ ಸೇತುವೆಯನ್ನು ಎತ್ತರಿಸಬೇಕೆಂದು ಸ್ಥಳಿಯರು ಮನವಿ ಮಾಡಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande