ಬೆಂಗಳೂರು, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಗೆ ದಿಕ್ಕು ನೀಡುವ ಅನೇಕ ಪ್ರಮುಖ ನಿರ್ಣಯಗಳು ಕೈಗೊಳ್ಳಲಾಗಿದೆ. ಕೃಷಿ ಶೀತಲ ಘಟಕಗಳಿಂದ ಹಿಡಿದು, ಆಸ್ಪತ್ರೆಗಳ ವಿಸ್ತರಣೆ, ನೀರಾವರಿ ಯೋಜನೆಗಳು ಹಾಗೂ ಸಾಮಾಜಿಕ ಸಮೀಕ್ಷೆಗಳವರೆಗೆ ಹಲವು ಕ್ಷೇತ್ರಗಳಿಗೆ ಗಮನ ಹರಿಸಲಾಗಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
ಕೃಷಿ ವಲಯಕ್ಕೆ ಬಲ
2021-22ನೇ ಸಾಲಿನ ನಬಾರ್ಡ್ ನ RIDF-27 ಯೋಜನೆಯಡಿಯಲ್ಲಿ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣಕ್ಕೆ ರೂ.171.91 ಕೋಟಿ ವ್ಯಯಕ್ಕೆ ಅನುಮೋದನೆ ನೀಡಲಾಗಿದೆ. ಹೆಚ್ಚುವರಿ ರೂ.47.81 ಕೋಟಿ ಸೇವಾ ಶುಲ್ಕದ ಮೂಲಕ ಭರಿಸಲಾಗುವುದು.
ಆರೋಗ್ಯ ಸೇವೆ ವಿಸ್ತರಣೆ:
ಬೆಳಗಾವಿಯ ಕಿತ್ತೂರಿನಲ್ಲಿ 100 ಹಾಸಿಗೆ ಆಸ್ಪತ್ರೆ (ರೂ.33.78 ಕೋಟಿ), ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಜಿಲ್ಲಾಮಟ್ಟದ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ. ಯಲಬುರ್ಗಾ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ರೂ.41.91 ಕೋಟಿ ಬಿಡುಗಡೆ.
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ನೆರವು
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕಡ್ಡಾಯ ಶೇಕಡಾವಾರು ಪ್ರಮಾಣವನ್ನು ತೆಗೆದುಹಾಕಿ, ಪ್ರತಿ ಹೆಣ್ಣು ವಿದ್ಯಾರ್ಥಿನಿ ಕಾಲೇಜಿಗೆ ಹಾಸ್ಟೇಲ್ ಕಟ್ಟಡ ನಿರ್ಮಾಣದ ಯೋಜನೆಗೆ ರೂ.87.60 ಕೋಟಿ ಮಂಜೂರಾಯಿತು.
ನೀರಾವರಿ ಯೋಜನೆಗಳಿಗೆ ಹಸಿರು ನಿಶಾನೆ
ಹಾವೇರಿ ಜಿಲ್ಲೆಯ ವರದಾ ನದಿ ನೀರಾವರಿ ಯೋಜನೆಗೆ ರೂ.220 ಕೋಟಿ, ಬಾಗಲಕೋಟೆಯ ಸೊಕನಾದಗಿ ಏತ ನೀರಾವರಿ ಯೋಜನೆಗೆ ರೂ.17 ಕೋಟಿ, ರಾಮದುರ್ಗದ 8 ಕೆರೆಗಳಿಗೆ ನವಿಲುತೀರ್ಥದಿಂದ ನೀರು ತುಂಬಿಸುವ ಯೋಜನೆಗೆ ಅನುಮೋದನೆ ದೊರಕಿದೆ. ಮರೂರು ಶಾಖಾ ನಾಲೆ, ಮದ್ದೂರು ಕಾಲುವೆ, ಹೇಮಾವತಿ ಡಿಸ್ಟ್ರಿಬ್ಯೂಟರಿ-64 ಸೇರಿದಂತೆ ಹಲವು ಕಾಲುವೆಗಳ ಆಧುನೀಕರಣಕ್ಕೂ ಗ್ರೀನ್ ಸಿಗ್ನಲ್.
ತಲಕಾಡು ಪಟ್ಟಣ ಪಂಚಾಯಿತಿ
ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮ ಪಂಚಾಯಿತಿ, ಬಿ.ಶೆಟ್ಟಹಳ್ಳಿ, ಟಿ.ಬೆಟ್ಟಹಳ್ಳಿ, ಹಾಗೂ ಕೂರುಬಾಳನಹುಂಡಿ ಗ್ರಾಮಗಳನ್ನೊಳಗೊಂಡು ಹೊಸ ಪಟ್ಟಣ ಪಂಚಾಯಿತಿ ಸ್ಥಾಪನೆಗೆ ಸಂಪುಟದಿಂದ ಒಪ್ಪಿಗೆ.
ಸಾಮಾಜಿಕ ಸಮೀಕ್ಷೆಗೆ ತಂತ್ರಜ್ಞಾನ ಬೆಂಬಲ
ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಜನಸಂಖ್ಯೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಡಿಜಿಟಲ್ ಮಾದರಿಯಲ್ಲಿ ಕೈಗೊಳ್ಳಲು ನಿರ್ಧಾರ. ಮತದಾರರ ಪಟ್ಟಿ ಆಧಾರದ ಮೇಲೆ ಸಮೀಕ್ಷೆ ನಡೆಯಲಿದೆ.
ವಿಧೇಯಕಗಳಿಗೆ ಅನುಮೋದನೆ
ದೇವದಾಸಿ ಪದ್ಧತಿ ನಿರ್ವಹಣೆ ಮತ್ತು ಪುನರ್ವಸತಿ ಕಾಯ್ದೆ
ಬದಲಾಗಿರುವ ನಗರಾಭಿವೃದ್ಧಿ, ಪುರಸಭೆ, ಲ್ಯಾಂಡಿಂಗ್ & ಶಿಪ್ಪಿಂಗ್ ಫೀಸ್, ಅತ್ಯಾವಶ್ಯಕ ಸೇವೆ ನಿಯಮಗಳ ತಿದ್ದುಪಡಿ ವಿಧೇಯಕಗಳು
ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ
ನೋಂದಣಿ, ಸಹಕಾರ ಸಂಘ, ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa