ಅಂತರಗಂಗಾ ವಿದ್ಯಾಸಂಸ್ಥೆಗೆ ಸಿ.ಇ.ಓ ಬೇಟಿ
ಅಂತರಗಂಗಾ ವಿದ್ಯಾಸಂಸ್ಥೆಗೆ ಸಿ.ಇ.ಓ ಬೇಟಿ
ಚಿತ್ರ : ಕೋಲಾರ ಅಂತರಗಂಗಾ ವಿದ್ಯಾಸಂಸ್ಥೆಗೆ ಸಿ.ಇ.ಓ ಬೇಟಿ


ಕೋಲಾರ, ೦೫ ಆಗಸ್ಟ್, (ಹಿ.ಸ.) :

ಆ್ಯಂಕರ್ : ಕೋಲಾರ ನಗರದ ಹೊರ ವಲಯದಲ್ಲಿರುವ ಅಂತರಗಂಗಾ ವಿದ್ಯಾ ಸಂಸ್ಥೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್.ಪಿ.ಬಾಗೇವಾಡಿ ಅವರು ಇಂದು ಭೇಟಿ ನೀಡಿ ಅಡುಗೆ ಮನೆ, ವಿದ್ಯಾರ್ಥಿಗಳ ವಸತಿ, ವಯೋವೃದ್ಧರ ವಸತಿ, ತರಗತಿ ಕೊಠಡಿಗಳನ್ನು ಪರಿಶೀಲಿಸಿದರು.

ಅಂತರಗಂಗಾ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ವಿಶೇಷ ಚೇತನ ಮಕ್ಕಳಿಗೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಖಾಸಗಿ ಕಂಪನಿಗಳ ಸಿ.ಎಸ್.ಆರ್.ಅನುದಾನವನ್ನು ಪಡೆದುಕೊಂಡು ಇನ್ನಷ್ಟು ಅಭಿವೃದ್ಧಿ ಪಡಿಸಲು ಸೂಚಿಸಿದರು.

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಶಂಕರ್ ಅವರು ಮಾತನಾಡಿ ನಮ್ಮ ಸಂಸ್ಥೆಯು ಅನೇಕ ದಾನಿಗಳ ನೆರವಿನಿಂದ ನಡೆಸಿಕೊಂಡು ಬರುತ್ತಿದ್ದೇವೆ ನಮಗೆ ವಸತಿ ಅವಶ್ಯಕತೆ ಇರುವುದಾಗಿ ತಿಳಿಸಿದರು.

ಮುಖ್ಯಶಿಕ್ಷಕರಾದ ಪ್ರಜ್ಞಾ ಅವರು ಮಾತನಾಡಿ ಅಂಬಾ ಸಂಸ್ಥೆಯ ಮೂಲಕ ನಮ್ಮ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಗಣಕಯಂತ್ರ ತರಬೇತಿಯನ್ನು ನೀಡಲಾಗುತ್ತಿದೆ ಈಗಾಗಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಅಂತರಗಂಗಾ ವಿದ್ಯಾಸಂಸ್ಥೆಗೆ ಸಿ.ಇ.ಓ ಬೇಟಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande