ಜಾಗತಿಕ ಮಾರುಕಟ್ಟೆಗಳಿಂದ ದುರ್ಬಲ ಸಂಕೇತ
ನವದೆಹಲಿ, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿ ಕಳೆದ ವಹಿವಾಟಿನಲ್ಲಿ ಉಂಟಾದ ಭಾರೀ ಕುಸಿತದ ಹಿನ್ನಲೆಯಲ್ಲಿ ಇಂದು ದುರ್ಬಲ ಸಂಕೇತಗಳು ಕಾಣಿಸುತ್ತಿವೆ. ಯುಎಸ್ ಮಾರುಕಟ್ಟೆಯಲ್ಲಿ ಎಸ್‌ಅಂಡ್‌ಪಿ 500 ಶೇಕಡಾ 1.60%, ನಾಸ್ಡಾಕ್ ಶೇಕಡಾ 2.24% ಕುಸಿತ ಕಂಡಿದ್ದು, ಯುರೋಪಿನ ಸಿಎಎಸ್,
Market


ನವದೆಹಲಿ, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿ ಕಳೆದ ವಹಿವಾಟಿನಲ್ಲಿ ಉಂಟಾದ ಭಾರೀ ಕುಸಿತದ ಹಿನ್ನಲೆಯಲ್ಲಿ ಇಂದು ದುರ್ಬಲ ಸಂಕೇತಗಳು ಕಾಣಿಸುತ್ತಿವೆ. ಯುಎಸ್ ಮಾರುಕಟ್ಟೆಯಲ್ಲಿ ಎಸ್‌ಅಂಡ್‌ಪಿ 500 ಶೇಕಡಾ 1.60%, ನಾಸ್ಡಾಕ್ ಶೇಕಡಾ 2.24% ಕುಸಿತ ಕಂಡಿದ್ದು, ಯುರೋಪಿನ ಸಿಎಎಸ್, ಡಿಎಎಕ್ಸ, ಎಫ್ ಟಿಎಸ್ಸಿ ಸೂಚ್ಯಂಕಗಳೂ ಬಾರಿ ಇಳಿಕೆ ಕಂಡಿವೆ.

ಆದರೆ ಡೌ ಜೋನ್ಸ್ ಫ್ಯೂಚರ್ಸ್ ಇಂದು ಶೇಕಡಾ 0.37% ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ಏಷ್ಯಾದ 9 ಪ್ರಮುಖ ಮಾರುಕಟ್ಟೆಗಳಲ್ಲಿ 6 ಹಸಿರು ವಲಯದಲ್ಲಿ ವಹಿವಾಟು ನಡೆಸುತ್ತಿವೆ. ನಿಕ್ಕಿ, ತೈವಾನ್, ಜಕಾರ್ತಾ ಸೂಚ್ಯಂಕಗಳು ಕುಸಿತದಲ್ಲಿ ಇರುವಾಗ, ಕೋಸ್ಪಿ , ಹ್ಯಾಂಗ್ ಸೆಂಗ್, ಶಾಂಘೈ, ಗಿಪ್ಟಿ, ನಿಫ್ಟಿ ಸೇರಿದಂತೆ ಹಲವಾರು ಸೂಚ್ಯಂಕಗಳು ಲಾಭದಲ್ಲಿ ವ್ಯವಹಾರ ನಡೆಸುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande