ಗದಗ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಶಿವಾನಂದ ಮಠದ ಸದಾಶಿವಾನಂದ ಭಾರತಿ ಶ್ರೀಗಳು ಧರ್ಮಸ್ಥಳ ಕ್ಷೇತ್ರದ ಇತ್ತೀಚಿನ ವಿದ್ಯಮಾನ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸಮೃದ್ಧ ನಾಡು, ಅದರ ಅಭಿವೃದ್ಧಿಯಲ್ಲಿ ಧಾರ್ಮಿಕ ಸಂಸ್ಥೆಗಳ ಪಾತ್ರ ಅಪ್ರತಿಮ ಎಂದು ಭಾರತಿ ಶ್ರೀಗಳು ಹೇಳಿದರು. ಮಠಗಳು, ಧಾರ್ಮಿಕ ಕೇಂದ್ರಗಳು ಸಮಾಜ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ನೀಡಿದ್ದು, ಧರ್ಮಸ್ಥಳ ಅದರಲ್ಲಿ ಅಗ್ರಗಣ್ಯ ಕೇಂದ್ರ ಎಂದು ಅವರು ಶ್ಲಾಘಿಸಿದರು.
ಜಾತಿ, ಮತ, ಪಂಥ ಬೇಧವಿಲ್ಲದೇ ಸಮಾಜ ಸೇವೆ ಮಾಡಿದ ಧರ್ಮಸ್ಥಳ ದೇಶಕ್ಕೆ ಮಾದರಿ ಎನ್ನುವಂತದ್ದು. ಆದರೆ ಇತ್ತೀಚಿನ ಕೆಲ ವಿಚಾರಗಳಿಂದ ಕ್ಷೇತ್ರ ವಿವಾದಾತ್ಮಕವಾಗಿ ಬಿಂಬಿತವಾಗಿರುವುದು ದುಃಖಕರ ಎಂದು ಅವರು ಅಭಿಪ್ರಾಯಪಟ್ಟರು.
ಅಪರಾಧ ನಡೆದಿದ್ದರೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಭಾರತೀಯ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾದುದು. ಆದರೆ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯ ಸದಾ ಉಳಿಯಬೇಕಾಗಿದೆ ಎಂದು ಭಾರತಿ ಶ್ರೀಗಳು ಒತ್ತಿ ಹೇಳಿದರು.
ಧಾರ್ಮಿಕ ಕೇಂದ್ರಗಳ ಮೇಲಿನ ನಂಬಿಕೆಯನ್ನು ಕನ್ನಡಿ ಹೋಲಿಕೆ ಮಾಡಿದ ಅವರು, “ಒಮ್ಮೆ ಒಡೆದರೆ ಮತ್ತೆ ಕಟ್ಟಲು ಸಾಧ್ಯವಿಲ್ಲ. ಅದೇ ರೀತಿ ಭಕ್ತರ ವಿಶ್ವಾಸ ಕುಂದುವಂತಾಗಬಾರದು. ಕ್ಷೇತ್ರ ಬೆಳೆದಂತೆ ಒಳ್ಳೆಯ-ಕೆಟ್ಟ ದೃಷ್ಟಿಗಳು ಸಹಜ. ಆದರೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಲಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / lalita MP