ವಿಜಯಪುರ, 31 ಆಗಸ್ಟ್ (ಹಿ.ಸ.) :
ವಿಜಯಪುರ : ಆಯುಷ್ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿ, ರಾಷ್ಟ್ರೀಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ(QCI) ಮಾರ್ಗದರ್ಶನ ಮಾಡುತ್ತಿದೆ ಎಂದು ಕ್ಯೂಸಿಐ ದಕ್ಷಿಣ ಭಾರತ ಮುಖ್ಯಸ್ಥ ವೇಣುಗೋಪಾಲ ಸಿ ತಿಳಿಸಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಕ್ಯೂಸಿಐ ಮತ್ತು ನ್ಯಾಷನಲ್ ಅಕ್ರಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಅಂಡ್ ಹೆಲ್ತ್ಕೇರ್ ಪ್ರೊವೈಡರ್ಸ್ (NABH) ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗುಣವತ್ತಾ ಯಾತ್ರೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಯುಷ್ ಆಸ್ಪತ್ರೆಗಳಿಗೆ ನ್ಯಾಭ್ ಮಾನ್ಯತೆ ಪಡೆಯಲು ಅಗತ್ಯವಾಗಿರುವ ಸೌಲಭ್ಯಗಳು, ಅನುಸರಿಸಲಾಗಿರುವ ಮಾನದಂಡಗಳ ಕುರಿತು ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ ಅವರು, ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿರು ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಕ್ಯೂಸಿಐ ವತಿಯಿಂದ ಶೀಘ್ರದಲ್ಲಿ ಇದೇ ಕಾಲೇಜಿನಲ್ಲಿ ಶೀಘ್ರದಲ್ಲಿ ಮತ್ತೋಂದು ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೇ, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಲ್ಯಾಬೊರೇಟರಿಗಾಗಿ ನ್ಯಾಶನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಲ್ಯಾಬೊರೇಟರಿ(NABL) ಮಾನ್ಯತೆ ಒದಗಿಸಲು ಸಹಕಾರ ಮಾರ್ಗದರ್ಶನ ಮಾಡುವುದಾಗಿ ತಿಳಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮುಕುಲಾಧಿಪತಿ ಡಾ. ವೈ. ಎಂ, ಜಯರಾಜ ಮಾತನಾಡಿ, ಎನ್.ಎ.ಬಿ.ಎಚ್ ಮಾನ್ಯತೆ ಪಡೆಯುವ ಸಂಸ್ಥೆಗಳು ಮಾತ್ರ ವಿಶ್ವಮಟ್ಟದಲ್ಲಿ ನಂಬಿಕೆಗೆ ಪಾತ್ವರಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್.ಎ.ಬಿ.ಎಚ್ ಅಧಿಕಾರಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಡೆಪ್ಯೂಟಿ ರಜಿಸ್ಟ್ರಾರ್ ಡಾ. ಸತೀಶ ಪಾಟೀಲ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಎನ್.ಎ.ಬಿ.ಎಚ್ ಅಧಿಕಾರಿ ಡಾ. ಗಜೇಂದ್ರ ತೋಡಕರ, ಡಾ. ಪ್ರಸನ್ನರಾವ, ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande