ರಾಯಚೂರು, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಯಚೂರಿನ ಶ್ರೀರಾಮನಗರ ಕಾಲೋನಿಯಲ್ಲಿ ಶ್ರೀಕೊದಂಡರಾಮ ಗಜಾನನ ಯುವಕ ಮಂಡಳಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು ಇಲ್ಲಿ 9 ದಿನಗಳ ಕಾಲ ನಿತ್ಯ ವಿಶೇಷ ಕಾರ್ಯಕ್ರಮಗಳನ್ನ ಏರ್ಪಡಿಸಲಾಗುತ್ತಿದೆ ಎಂದು ಮಂಡಳಿಯ ಸದಸ್ಸರು ತಿಳಿಸಿದ್ದಾರೆ.
ಇಂದು ಗಣೇಶ ಭಕ್ತರಿಗಾಗಿ ಮಹಾ ಅನ್ನಪ್ರಸಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಶ್ರೀರಾಮನಗರ ಕಾಲೋನಿ, ಪ್ರಶಾಂತ ಕಾಲೋನಿ, ಮಾರುತಿ ನಗರ ಸೇರಿ ವಿವಿಧ ಬಡಾವಣೆಯ ನೂರಾರು ಜನ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ.
ಅಶ್ವಮೇಧ ಯಾಗದ ರಥದ ವಿನ್ಯಾಸದ ಕಲಾಕೃತಿಯ ಸೆಟ್ ನಿರ್ಮಾಣ ಮಾಡಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ನೋಡುಗರನ್ನ ಆಕರ್ಷಿಸುತ್ತಿದೆ.
ಬಡಾವಣೆಯ ನಿವಾಸಿಗಳು ,ಮಕ್ಕಳು ಹಾಗೂ ಗಣೇಶ ಭಕ್ತರಿಗಾಗಿ ವಿವಿಧ ಕ್ರೀಡೆ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನ ಏರ್ಪಡಿಸಲಾಗುತ್ತಿದೆ.
ಇಂದು ನಡೆದ ಮಹಾ ಅನ್ನಪ್ರಸಾದ ಕಾರ್ಯಕ್ರಮವನ್ನ ಶ್ರೀಕೊದಂಡರಾಮ ಗಜಾನನ ಯುವಕ ಮಂಡಳಿಯ ಸದಸ್ಯರಾದ ಎ.ಕೆ.ವಿರೇಶ್, ಸಂಜೀವ್ ನಾಯಕ್, ಸಂಜೀವ್, ಸಂತೋಷ, ಜಗದೀಶ್, ವಿನೋದ್, ಸುದೀಪ್, ಸಾಯಿಕುಮಾರ್, ಬಸವರಾಜ್,ಅಜಿತ್ ಸೇರಿದಂತೆ ಹಲವಾರು ಯುವಕರು ಯಶಸ್ವಿಯಾಗಿ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್