ಮೈಸೂರು ಅರಸರ ಸೇವಾ ಪರಂಪರೆ ಸ್ಮರಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರು, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಮನುಷ್ಯ ಧರ್ಮವೇ ಮೂಲ. ಅದನ್ನು ಆಧಾರ ಮಾಡಿಕೊಂಡು ಮೈಸೂರು ಅರಸರು ರಾಜ್ಯದ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಜಾತ್ಯತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂ
Dks


ಬೆಂಗಳೂರು, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮನುಷ್ಯ ಧರ್ಮವೇ ಮೂಲ. ಅದನ್ನು ಆಧಾರ ಮಾಡಿಕೊಂಡು ಮೈಸೂರು ಅರಸರು ರಾಜ್ಯದ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಜಾತ್ಯತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಅರಸು ಅಸೋಸಿಯೇಷನ್ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಮುಂತಾದವರು ನೀರಾವರಿ, ಆಸ್ಪತ್ರೆ, ವಿದ್ಯಾಸಂಸ್ಥೆ, ವಿದ್ಯುತ್ ಉತ್ಪಾದನೆ ಮೊದಲಾದ ಹಲವು ಜನೋಪಕಾರಿ ಕೆಲಸಗಳಿಗೆ ಅಡಿಪಾಯ ಹಾಕಿದರು. ಅವರು ನೆಟ್ಟ ಮರದ ಫಲವನ್ನು ನಾವು ತಿನ್ನುತ್ತಿದ್ದೇವೆ ಎಂದರು.

ಅರಸು ಸಮುದಾಯಕ್ಕೆ ಮೀಸಲಾತಿ ಹಾಗೂ ಸೌಲಭ್ಯಗಳ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸುವುದಾಗಿ, ಸಂಘಕ್ಕೆ ನಿವೇಶನ ಒದಗಿಸುವುದರ ಕುರಿತೂ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ಮಹಾರಾಜರು ಯಾವ ಧರ್ಮ ಉಳಿಸಿಕೊಳ್ಳಬೇಕು ಎಂದು ಎಂದೂ ಮಾತನಾಡಲಿಲ್ಲ. ದೇವರು ಒಬ್ಬ, ನಾಮ ಹಲವು ಪೂಜೆ ಬೇರೆಯಾದರೂ ಭಕ್ತಿ ಒಂದೇ ಎಂದ ಶಿವಕುಮಾರ್,

ಭೂಮಿಯ ಒಡೆಯ ಕಾಯ್ದೆಯಿಂದ ಬಡವರ ಪರ ನಿಂತರು. ಜಾತಿಗಿಂತ ನಾಯಕತ್ವದ ಗುಣವನ್ನು ಮೆರೆದರು. ಎಲ್ಲ ವರ್ಗದ ನಾಯಕರನ್ನು ಬೆಳೆಸಿದವರು ದೇವರಾಜ ಅರಸು ಎಂದು ಶ್ಲಾಘಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande