ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆ ಉದ್ಯಮಿಗಳಿಗೆ ಪ್ರೋತ್ಸಾಹದಾಯಕ
ಬಳ್ಳಾರಿ, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಲ್ಲಿ (ಎಸ್‍ಎಂಇ) ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆಯು ಆತ್ಮವಿಶ್ವಾಸ ವೃದ್ಧಿಸಿ, ಉದ್ಯಮವನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಪ್ರೋತ್ಸಾಹ ನೀಡಲಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ
ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆಯು ಉದ್ಯಮಿಗಳಿಗೆ ಪ್ರೋತ್ಸಾಹದಾಯಕ


ಬಳ್ಳಾರಿ, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಲ್ಲಿ (ಎಸ್‍ಎಂಇ) ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆಯು ಆತ್ಮವಿಶ್ವಾಸ ವೃದ್ಧಿಸಿ, ಉದ್ಯಮವನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಪ್ರೋತ್ಸಾಹ ನೀಡಲಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ, ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಟ್ಯಾಕ್ಸ್ ಪ್ರ್ಯಾಕ್ಟೀಷನರ್ಸ್ ಇಂಡಿಯಾದ ಬಳ್ಳಾರಿ ಘಟಕ, ಬಳ್ಳಾರಿ ತೆರಿಗೆ ಸಲಹೆಗಾರರ ಸಂಘ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಯಾಗಿ ಬಿಡಿಸಿಸಿಐ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ `ಬಳ್ಳಾರಿ ಎನ್‍ಟಿಸಿ ಯಶಸ್ಸು, ಸಂಭ್ರಮ ಹಾಗೂ ಎಸ್‍ಎಂಇ ಬಿಆರ್‍ಇ ಸಾಲ ಉತ್ಪನ್ನದ ನೇರ ಪ್ರದರ್ಶನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು

ಯುವ ಮತ್ತು ನವ ಉದ್ಯಮಿಗಳಿಗೆ ಆರ್ಥಿಕ ಬೆಂಬಲ ಆತ್ಮಸ್ಥೈರ್ಯ ನೀಡಲಿದೆ. ಈ ನಿಟ್ಟಿನಲ್ಲಿ `ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆ'ಯು ಅನೇಕರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನೆರವಾಗಲಿದೆ. ಉದ್ಯಮಿಗಳು ಈ `ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆ'ಯ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು,

`ಬ್ಯುಸಿನೆಸ್ ರೂಲ್ ಇಂಜಿನ್ ಸಾಲದ ಯೋಜನೆ'ಯ ಮೂಲಕ ಜಿಲ್ಲೆಯ ಅನೇಕ ಉದ್ಯಮಿಗಳು ನೆರವು ಪಡೆದು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ವೃದ್ಧಿ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಪುನಃಶ್ಚೇತನಗೊಳ್ಳಬೇಕು ಎಂದರು.

ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ ಶ್ರೀಮತಿ ಸೋನಲ್ ಜಿ. ನಾಯಕ್, ಅವರು ಟ್ಯಾಕ್ಸ್ ಪ್ರಾಕ್ಟೀಷನರ್ಸ್‍ಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಹೇಳಿದರು. ಐಸಿಟಿಪಿಐ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ ಪಾರ್ಥಸಾರಥಿ ಅವರು, ಪ್ರಾಸ್ತಾವಿಕ ಭಾಷಣ ಮಾಡಿ, ತಮ್ಮ ಸಂಸ್ಥೆಯ ಕುರಿತು ವಿವರಿಸಿದರು. ಡಾ. ದಿಲೀಪ್ ಕುಮಾರ್ ಎಚ್.ಜಿ., ಡಾ. ಕೆ.ಎಸ್. ಮಹಾಂತೇಶ್ ವಿಶೇಷ ಅತಿಥಿಗಳಾಗಿದ್ದರು. ಜಿ.ಎಂ ಶಿವಕುಮಾರ್ ಅವರು ಸ್ವಾಗತ ಕೋರಿದರು. ಬಳ್ಳಾರಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೆಂಕಟೇಶ ಕುಲಕುರ್ಣಿ ಅವರು ವಂದನಾರ್ಪಣೆ ಸಲ್ಲಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ, ಉಪಾಧ್ಯಕ್ಷರಾದ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande