ಯುವ ನಿಧಿ ಯೋಜನೆ ಅರ್ಜಿ ಆಹ್ವಾನ
ಗದಗ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 05 ಗ್ಯಾರೆಂಟಿ ಯೋಜನೆಗಳಲ್ಲಿ 05ನೇ ಗ್ಯಾರೆಂಟಿ ಯೋಜನೆ ಯವನಿಧಿ ಈ ಯೋಜನೆಯಲ್ಲಿ ಪದವಿದರರಿಗೆ 3000ರೂ. ಮತ್ತು ಡಿಪ್ಲೋಮದರರಿಗೆ 1500ರೂ. ಗಳನ್ನು ನಿರುದ್ಯೋಗಿ ಭತ್ಯಯಾಗಿ ನಿಡುತ್ತಿದ್ದು ಜನವರಿ-2023 ರ ನಂತರ ತೇರ್ಗಡ
ಪೋಟೋ


ಗದಗ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 05 ಗ್ಯಾರೆಂಟಿ ಯೋಜನೆಗಳಲ್ಲಿ 05ನೇ ಗ್ಯಾರೆಂಟಿ ಯೋಜನೆ ಯವನಿಧಿ ಈ ಯೋಜನೆಯಲ್ಲಿ ಪದವಿದರರಿಗೆ 3000ರೂ. ಮತ್ತು ಡಿಪ್ಲೋಮದರರಿಗೆ 1500ರೂ. ಗಳನ್ನು ನಿರುದ್ಯೋಗಿ ಭತ್ಯಯಾಗಿ ನಿಡುತ್ತಿದ್ದು ಜನವರಿ-2023 ರ ನಂತರ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಬಹುದು.

ಈಗಾಗಲೇ ನೋಂದಾಯಿಸಿಕೊಂಡು ಹಣ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ವರ್ಷದಲ್ಲಿ 4 ಬಾರಿ ಸ್ವಯಂ ಘೋಷಣೆಯನ್ನು ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ದಿನಾಂಕಃ 25 ರೊಳಗಾಗಿ ಸ್ವಯಂ ಘೋಷಣೆಯನ್ನು ನೀಡಬೇಕು.

ಮಾರ್ಚ್-2025, ಏಪ್ರಿಲ್-2025, ಮೇ-2025 ಈ ಮೂರು ತಿಂಗಳ ಸ್ವಯಂ ಘೋಷಣೆಯನ್ನು ಮೇ-2025ರ ಮಾಹೆಯಲ್ಲಿ ಸ್ವಯಂ ಘೋಷಣೆಯನ್ನು ನೀಡಬೇಕು. ಹಾಗೂ ಜೂನ್-2025, ಜುಲೈ-2025, ಆಗಸ್ಟ್-2025 ಈ ಮೂರು ತಿಂಗಳ ಸ್ವಯಂ ಘೋಷಣೆಯನ್ನು ಆಗಸ್ಟ್-2025ರ ಮಾಹೆಯಲ್ಲಿ ನೀಡಬೇಕು, ಹಾಗೂ ಸೆಪ್ಟೆಂಬರ್-2025, ಅಕ್ಟೋಬರ್ -2025 ವತ್ತು ನವೆಂಬರ್-2025ರ ಸ್ವಯಂ ಘೋಷಣೆಯನ್ನು ನವೆಂಬರ್-2025ರ ಮಾಹೆಯಲ್ಲಿ ನೀಡಬೇಕು ಮತ್ತು ಡಿಸೆಂಬರ್-2025, ಜನೇವರಿ-2026, ಪೆಬ್ರವರಿ -2026ರ ಈ ಮೂರು ತಿಂಗಳ ಸ್ವಯಂ ಘೋಷಣೆಯನ್ನು ಫೆಬ್ರವರಿ-2026ರ ಮಾಹೆಯಲ್ಲಿ ನೀಡಬೇಕು. ಮತ್ತು ಸೇವಾ ಸಿಂಧು ಪೋರ್ಟಲ್ ಲಾಗಿನ್‌ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ ದಾಖಲೆ ಪರಿಶೀಲನೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಖುದ್ದಾಗಿ ಸಂಪರ್ಕಿಸಿ ತಮ್ಮ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಃ 08372-220609 ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande