ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ
ಹಾಸನ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯ ತಾಲ್ಲೂಕುಗಳಲ್ಲಿ 2025-26ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಫರ್ಧೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲು ತಿರ್ಮಾನಿಸ
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ


ಹಾಸನ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ತಾಲ್ಲೂಕುಗಳಲ್ಲಿ 2025-26ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಫರ್ಧೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲು ತಿರ್ಮಾನಿಸಲಾಗಿದ್ದು, ಕೆಳಕಂಡ ದಿನಾಂಕ ಮತ್ತು ಸ್ಥಳಗಳಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಯನ್ನು ನಡೆಸಲಾಗುವುದು.

ಕ್ರೀಡಾಪಟುಗಳು ಕ್ರೀಡಾಕೂಟ ಜರುಗುವ 2 ದಿನ ಮುಂಚೆ ಆ.22 ರೊಳಗೆ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಬಳಿ ನೊಂದಣಿ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಕೋರಿದೆ.

ಆಲೂರು ತಾಲ್ಲೂಕು ಕ್ರೀಡಾಂಗಣ (9448870427), ಅರಸೀಕೆರೆ ತಾಲ್ಲೂಕು ಕ್ರೀಡಾಂಗಣ (8971968408), ಅರಕಲಗೂಡು ತಾಲ್ಲೂಕು ಕ್ರೀಡಾಂಗಣ (9900770571), ಬೇಲೂರು ತಾಲ್ಲೂಕು ಶಿವನಂಜು0ಡೇಶ್ವರ ಪ್ರೌಢಶಾಲೆ ಮೈದಾನ, ಇಬ್ಬಿಡು (9980119510), ಚನ್ನರಾಯಪಟ್ಟಣ ತಾಲ್ಲೂಕು ಕ್ರೀಡಾಂಗಣ (9844551946), ಹೊಳೆನರಸಿಪುರ ತಾಲ್ಲೂಕು ಕ್ರೀಡಾಂಗಣ (9880362949), ಸಕಲೇಶಪುರ ತಾಲ್ಲೂಕು ಕ್ರೀಡಾಂಗಣ (9449226045), ಹಾಸನ ಜಿಲ್ಲಾ ಕ್ರೀಡಾಂಗಣ (9448427383) ಹಾಸನದಲ್ಲಿ ಆ.24 ಮತ್ತು ಆ.25 ರಂದು ನಡೆಯಲಿದೆ.

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ನಿಯಮಗಳು: ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬ್ಬಡಿ, ಪುಟ್ಬಾಲ್, ಥ್ರೋಬಾಲ್, ಯೋಗ ಸ್ಪರ್ಧೆಗಳನ್ನು ಮಾತ್ರ ಏರ್ಪಡಿಸಲಾಗುವುದು. ವೈಯಕ್ತಿಕ ಕ್ರೀಡೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ/ ಆಯ್ಕೆ ತಂಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.

ಆಯಾ ತಾಲ್ಲೂಕಿನ ಕ್ರೀಡಾಪಟುಗಳು ಆಯಾ ತಾಲ್ಲೂಕಿನಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ ಆಧಾರ್ ಕಾರ್ಡ ತರುವುದು ಕಡ್ಡಾಯವಾಗಿರುತ್ತದೆ. ಸ್ಪರ್ಧೆಯನ್ನು ಏರ್ಪಡಿಸಲು ಕನಿಷ್ಠ 4 ತಂಡಗಳು ಇರಬೇಕು. ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಒಬ್ಬರಿಗೆ ಎರಡು ವೈಯಕ್ತಿಕ ಹಾಗೂ ಒಂದು ಗುಂಪು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

ಎರಡು ದಿನ ಮುಂಚಿತವಾಗಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಬಳಿ ತಂಡ ಮತ್ತು ವೈಯಕ್ತಿಕ ಆಟಗಳಿಗೆ ನೊಂದಾವಣೆ ಕಡ್ಡಾಯವಾಗಿರುತ್ತದೆ. ನೊಂದಾವಣೆ ಮಾಡಿಕೊಂಡವರಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಯಾವುದೇ ಕಾರಣಕ್ಕೂ ಕ್ರೀಡಾಕೂಟ ನಡೆಯುವ ದಿನ ಸ್ಥಳ ನೊಂದಾವಣೆಗೆ ಅವಕಾಶವಿರುವುದಿಲ್ಲ.

ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಕ್ರೀಡಾಪಟುವಿನ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಕ್ರೀಡಾಕೂಟದ ಸ್ಫರ್ಧೆಗಳನ್ನು ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರಿಗೆ ಏರ್ಪಡಿಸಲಾಗುವುದು. ಮೇಲ್ಕಂಡ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ನಡೆಸಲಿದ್ದು, ಸದರಿ ಸ್ಫರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿಗಡಿಪಡಿಸಿದ ದಿನಾಂಕದಂದು ಬೆಳಿಗ್ಗೆ 9 ಗಂಟೆಯೊಳಗೆ ಕ್ರೀಡಾಕೂಟ ನಡೆಯುವ ಕ್ರೀಡಾಂಗಣದಲ್ಲಿ/ಸ್ಥಳದಲ್ಲಿ ಸಂಬಂಧಪಟ್ಟ ವರದಿ ಮಾಡಿಕೊಂಡು ಹೆಸರು ನೊಂದಾಯಿಸಿಕೊಳ್ಳತಕ್ಕದ್ದು.

ಕ್ರೀಡಾಪಟುಗಳು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು ವಿಧಿಸುವ ನಿಯಮಾನುಸಾರ ಷರತ್ತಿಗೊಳಪಟ್ಟು ಕ್ರಿಡಾಕೂಟದಲ್ಲಿ ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande