ನವದೆಹಲಿ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭೂತಾನ್ ರಾಜಧಾನಿ ಥಿಂಫುವಿನಲ್ಲಿ ಆಗಸ್ಟ್ 20ರಿಂದ 31ರವರೆಗೆ ನಡೆಯಲಿರುವ ಎಸ್ಎಎಫ್ಎಫ್ ಅಂಡರ್-17 ಮಹಿಳಾ ಚಾಂಪಿಯನ್‌ಶಿಪ್ 2025ಕ್ಕೆ 23 ಸದಸ್ಯರ ಭಾರತೀಯ ಪುಟ್ಬಾಲ್ ತಂಡವನ್ನು ಮುಖ್ಯ ಕೋಚ್ ಜೋಕಿಮ್ ಅಲೆಕ್ಸಾಂಡರ್ಸನ್ ಭಾನುವಾರ ಪ್ರಕಟಿಸಿದ್ದಾರೆ.
ಈ ಟೂರ್ನಿಯಲ್ಲಿ ಭಾರತ, ಭೂತಾನ್, ನೇಪಾಳ ಹಾಗೂ ಬಾಂಗ್ಲಾದೇಶ ತಂಡಗಳು ಡಬಲ್ ರೌಂಡ್-ರಾಬಿನ್ ಲೀಗ್ ವಿಧಾನದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಎಲ್ಲ ಪಂದ್ಯಗಳು ಥಿಂಪು ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಭಾರತ ತನ್ನ ಅಭಿಯಾನವನ್ನು ಆಗಸ್ಟ್ 20ರಂದು ನೇಪಾಳ ವಿರುದ್ಧ ಆರಂಭಿಸಿ, ಬಾಂಗ್ಲಾದೇಶ (ಆಗಸ್ಟ್ 22), ಭೂತಾನ್ (ಆಗಸ್ಟ್ 24, 27), ನೇಪಾಳ (ಆಗಸ್ಟ್ 29) ಮತ್ತು ಬಾಂಗ್ಲಾದೇಶ (ಆಗಸ್ಟ್ 31) ವಿರುದ್ಧ ತದನಂತರ ಆಡಲಿದೆ.
ಭಾರತ ತಂಡದ ಸದಸ್ಯರ ಪಟ್ಟಿ:
ಗೋಲ್‌ಕೀಪರ್‌ಗಳು: ಮುನ್ನಿ, ಸೂರಜ್‌ಮುನಿ ಕುಮಾರಿ, ತಂಫಾಸನಾ ದೇವಿ ಕೊಂಜೆಂಗ್‌ಬಾಮ್
ರಕ್ಷಣಾಪಟುಗಳು: ಅಲಿನಾ ದೇವಿ ಸಾರಂಗ್ಥೆಮ್, ಅಲಿಶಾ ಲೆಂಗ್ಡೋ, ಬಿನಿತಾ ಹೋರೊ, ದಿವ್ಯಾನಿ ಲಿಂಡಾ, ಎಲಿಜಬೆತ್ ಲಾಕ್ರಾ, ಪ್ರಿಯಾ, ರಿತು ಬಡೈಕ್, ತಾನಿಯಾ ದೇವಿ ತೊನಂಬಮ್
ಮಧ್ಯರೇಖಾಪಟುಗಳು: ಅಬಿಸ್ತಾ ಬಾಸ್ನೆಟ್, ಅನಿತಾ ಡುಂಗ್‌ಡಂಗ್, ಬೀನಾ ಕುಮಾರಿ, ಬೋನಿಫಿಲಿಯಾ ಶುಲ್ಲೈ, ಜೂಲನ್ ನಾಂಗ್‌ಮೈಥೆಮ್, ಪ್ರಿತಿಕಾ ಬರ್ಮನ್, ಶ್ವೇತಾ ರಾಣಿ, ಥಂಡಮೋನಿ ಬಾಸ್ಕಿ
ಆಕ್ರಮಣಪಟುಗಳು : ಅನುಷ್ಕಾ ಕುಮಾರಿ, ನೀರಾ ಚಾನು ಲಾಂಗ್‌ಜಮ್, ಪರ್ಲ್ ಫೆರ್ನಾಂಡಿಸ್, ವಲೈನಾ ಜಡಾ ಫೆರ್ನಾಂಡಿಸ್.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa