ಗದುಗಿನಲ್ಲಿ ನೇರ ಸಂದರ್ಶನ
ಗದಗ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ದಿನಾಂಕ : 20-08-2025, ಬುಧವಾರ ರಂದು ಬೆಳೆಗ್ಗೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, 2ನೇ ಮಹಡಿ ರೂಂ.ನಂ:215 ಗದಗ, ಇಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ನೇರ ಸ
ಪೋಟೋ


ಗದಗ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ದಿನಾಂಕ : 20-08-2025, ಬುಧವಾರ ರಂದು ಬೆಳೆಗ್ಗೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, 2ನೇ ಮಹಡಿ ರೂಂ.ನಂ:215 ಗದಗ, ಇಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

ನೇರ ಸಂದರ್ಶನದಲ್ಲಿ ಈ ಕೆಳಗಿನ ಕಂಪನಿಗಳು ಭಾಗವಹಿಸಲಿದೆ.

ಮೇಡಿಸಿವ್ ಹೇಲ್ತ & ಲೈಪಸೈಟಲ್ ಪ್ರೈವೇಟ್ ಲಿಮಿಟೆಡ

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ, ಪಿ,ಯು.ಸಿ, ಮತ್ತು ಯಾವುದೆ ಪದವಿ.

ವಯಸ್ಸು : 18 ರಿಂದ 40 ( ಪುರುಷ ಮತ್ತು ಮಹಿಳೆ )

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು.

ನೇರ ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ ಹಾಗೂ ಯುವನಿಧಿ ಯೋಜನೇಯ ಫಲಾನುಭವಿಗಳು ಈ ನೇರ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ, 6363330699, 6364875014ಕ್ಕೆ ಸಂಪರ್ಕಿಸಲು ಕೋರಲಾಗಿದೆಯೆಂದು ಜಿಲ್ಲಾ ಉದ್ಯೋಗಾಧಿಕಾರಿಯಾದ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂದರ್ಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande